AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ; ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪ, ಮೀರಾ ಕುಮಾರ್ ಅಧ್ಯಕ್ಷತೆ

ಚುನಾವಣಾ ಆಯೋಗದ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಿರುವ ಇಂಡಿಯಾ ಮೈತ್ರಿಕೂಟದ ನಾಯಕರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಇಂದು (ಶನಿವಾರ) ನವದೆಹಲಿಯಲ್ಲಿ ಸಾಂಕೇತಿಕ 'ಸಾರ್ವಜನಿಕ ಮಹಾಭಿಯೋಗ' ನಡಾವಳಿಯನ್ನು ಹಮ್ಮಿಕೊಂಡಿದ್ದಾರೆ. ದೇಶದ ಪ್ರಮುಖ ವಿಪಕ್ಷಗಳ ಉನ್ನತ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಳೆಯ ಕಾರಣದಿಂದಾಗಿ ಶುಕ್ರವಾರದಿಂದ ಇಂದಿಗೆ ಮುಂದೂಡಲ್ಪಟ್ಟಿದ್ದ ಈ ಪ್ರಕ್ರಿಯೆಯು, ಇಂದು ಮಧ್ಯಾಹ್ನ 3.30ಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕೃತ ನಿವಾಸದಲ್ಲಿ ನಡೆಯಲಿದೆ.

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ; ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪ, ಮೀರಾ ಕುಮಾರ್ ಅಧ್ಯಕ್ಷತೆ
ಮಲ್ಲಿಕಾರ್ಜುನ ಖರ್ಗೆImage Credit source: PTI
ಸುಷ್ಮಾ ಚಕ್ರೆ
|

Updated on: Oct 31, 2026 | 3:19 PM

Share

ನವದೆಹಲಿ, ಅಕ್ಟೋಬರ್ 31: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಆಯೋಜಿಸಿರುವ ಅಣಕು ಮಹಾಭಿಯೋಗ ಕಾರ್ಯಕ್ರಮವು ಇಂದು ನವದೆಹಲಿಯಲ್ಲಿ ನಡೆಯಲಿದೆ. ಲೋಕಸಭೆಯ ಮಾಜಿ ಸಭಾಪತಿ ಮೀರಾ ಕುಮಾರ್ ಅವರು ಈ ಸಾಂಕೇತಿಕ ಮಹಾಭಿಯೋಗ ನಡಾವಳಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧದ ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ.

‘ಇಂಡಿಯಾ’ ಒಕ್ಕೂಟದ ಪ್ರಮುಖ ಘಟಕ ಪಕ್ಷಗಳು, ಎಡಪಕ್ಷಗಳು ಸೇರಿದಂತೆ ಒಟ್ಟು 21 ವಿರೋಧ ಪಕ್ಷಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ಪಕ್ಷದ ಒಬ್ಬ ನಾಯಕರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಮತ ಕಳ್ಳತನ ಮತ್ತು ಎಸ್​ಐಆರ್​​ನಲ್ಲಿ ನಡೆದಿರುವ ಅಕ್ರಮಗಳ ಕುರಿತು ನಾಯಕರು ಮಾತನಾಡಿದ ಬಳಿಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರ ಸಾಂಕೇತಿಕ ಮಹಾಭಿಯೋಗ ಪ್ರಸ್ತಾವನೆಯನ್ನು ಅಂಗೀಕರಿಸಲಾಗುತ್ತದೆ.

ಇದನ್ನೂ ಓದಿ: ‘ಅಣಕು ಪಾರ್ಲಿಮೆಂಟ್’ ರದ್ದು; ಜ್ಞಾನೇಶ್ ಕುಮಾರ್ ವಿರುದ್ಧ ಜನ ಮಹಾಭಿಯೋಗಕ್ಕೆ ಇಂಡಿಯಾ ಒಕ್ಕೂಟ ಮಾಸ್ಟರ್ ಪ್ಲಾನ್

ಸಾರ್ವಜನಿಕ ಮೈದಾನಗಳಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ವಿಪಕ್ಷ ನಾಯಕರು ಕಿಡಿಕಾರಿದ್ದು, ಖರ್ಗೆ ಅವರ ನಿವಾಸದಲ್ಲೇ ಈ ನಡಾವಳಿ ನಡೆಸಲಾಗುತ್ತಿದೆ. ಇಂದಿನ ಮಹಾಭಿಯೋಗದ ಬಳಿಕ, ನವೆಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ದೇಶಾದ್ಯಂತದ ಜನರನ್ನು ಒಗೂಡಿಸಿ ಬೃಹತ್ ರ್ಯಾಲಿ ನಡೆಸಲು ಪ್ರತಿಪಕ್ಷಗಳು ತೀರ್ಮಾನಿಸಿವೆ.

ಸಂಸತ್ತಿನಲ್ಲಿ ನಡೆಯುವ ಮಹಾಭಿಯೋಗ ಪ್ರಕ್ರಿಯೆಯ ಮಾದರಿಯಲ್ಲೇ ಇದು ನಡೆಯಲಿದೆ. ಪ್ರತಿಯೊಂದು ಪಕ್ಷದಿಂದ ಒಬ್ಬರು ನಾಯಕರು ಮಾತ್ರ ಮಾತನಾಡಲಿದ್ದು, ‘ಮತ ಕಳವು’ ಹಾಗೂ ಪ್ರಜಾಪ್ರಭುತ್ವದ ಮೇಲಿನ ದಾಳಿಯ ಕುರಿತು ಚರ್ಚಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು