ಮಗನ ಸಿನಿಮಾದಿಂದ ನಿರ್ದೇಶಕ ಔಟ್, ಕಾರಣ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಈ ಸಿನಿಮಾ ಅನ್ನು ಪುರುಷೋತ್ತಮ್ ನಿರ್ದೇಶನ ಮಾಡುತ್ತಿದ್ದರು. ಆದರೆ ಅಚಾನಕ್ಕಾಗಿ ಪುರುಷೋತ್ತಮ್ ಅವರನ್ನು ಸಿನಿಮಾದಿಂದ ತೆಗೆದು ಹಾಕಿದ್ದು, ಅವರ ಬದಲಿಗೆ ಖುದ್ದು ಪ್ರಿಯಾಂಕಾ ಉಪೇಂದ್ರ ಅವರು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ನಿರ್ದೇಶಕ ಪುರುಷೋತ್ತಮ್ ಆರೋಪ ಮಾಡಿದ್ದು, ತಮಗೆ ಕಾರಣ ತಿಳಿಸದೆ ಈ ನಿರ್ಧಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಿರ್ದೇಶಕ ಪುರುಷೋತ್ತಮ್ ಮಾಡಿರುವ ಆರೋಪಗಳಿಗೆ ನಟಿ ಪ್ರಿಯಾಂಕಾ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯಷ್ ನಟನೆಯ ಮೊದಲ ಸಿನಿಮಾ ‘ಆಯುಷ್’ನ ಚಿತ್ರೀಕರಣ ಚಾಲ್ತಿಯಲ್ಲಿದೆ. ಈ ಸಿನಿಮಾ ಅನ್ನು ಪುರುಷೋತ್ತಮ್ ನಿರ್ದೇಶನ ಮಾಡುತ್ತಿದ್ದರು. ಆದರೆ ಅಚಾನಕ್ಕಾಗಿ ಪುರುಷೋತ್ತಮ್ ಅವರನ್ನು ಸಿನಿಮಾದಿಂದ ತೆಗೆದು ಹಾಕಿದ್ದು, ಅವರ ಬದಲಿಗೆ ಖುದ್ದು ಪ್ರಿಯಾಂಕಾ ಉಪೇಂದ್ರ ಅವರು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ನಿರ್ದೇಶಕ ಪುರುಷೋತ್ತಮ್ ಆರೋಪ ಮಾಡಿದ್ದು, ತಮಗೆ ಕಾರಣ ತಿಳಿಸದೆ ಈ ನಿರ್ಧಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಿರ್ದೇಶಕ ಪುರುಷೋತ್ತಮ್ ಮಾಡಿರುವ ಆರೋಪಗಳಿಗೆ ನಟಿ ಪ್ರಿಯಾಂಕಾ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.
ನಿರ್ದೇಶಕ ಪುರುಷೋತ್ತಮ್ ಅವರ ಬೇಜವಾಬ್ದಾರಿ ಮತ್ತು ಅವರ ಕೆಲಸ ಇಷ್ಟವಾಗದ ಕಾರಣಕ್ಕೆ ಅವರನ್ನು ತೆಗೆದಿದ್ದೇವೆ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. ಟಿವಿ9 ಜೊತೆಗೆ ವಿವರವಾಗಿ ಮಾತನಾಡಿರುವ ಪ್ರಿಯಾಂಕಾ ಉಪೇಂದ್ರ, ‘ಪುರುಷೋತ್ತಮ್ ಮಾಡಿರುವ ಆರೋಪಗಳನ್ನು ನಾನು ವಿವರವಾಗಿ ಕೇಳಿದ್ದೀನಿ. ಆತುರದಲ್ಲಿ ಪ್ರತಿಕ್ರಿಯಿಸುವುದು ಬೇಡವೆಂದು ನಾನು ತಡೆದಿದ್ದೆ. ಯಾರುನ್ನೂ ಸಿನಿಮಾದಿಂದ ತೆಗಿಯೋದಕ್ಕೆ ಯಾರಿಗೂ ಇಷ್ಟ ಆಗವುದಿಲ್ಲ, ಆದರೆ ನಿರ್ಮಾಪಕರು ಸಿನಿಮಾಕ್ಕೆ ಹಣ ಹಾಕಿರುತ್ತಾರೆ. ಅವರ ಬಂಡವಾಳಕ್ಕೆ ಗೌರವ ಕೊಡಬೇಕಾಗುತ್ತದೆ’ ಎಂದಿದ್ದಾರೆ.
‘ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಬೇಕು. ತುಂಬಾ ಖರ್ಚು ಮಾಡ್ತಾ ಇದ್ದಿವಿ ಫುಟೇಜ್ ಸರಿಯಾಗಿ ಬರ್ತಿಲ್ಲ ಅಂದಾಗ ಅದು ನಿರ್ಮಾಪಕರು ಇಂಥಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪುರುಷೋತ್ತಮ್ ಅವರು ಕೇವಲ ಒನ್ ಲೈನರ್ ಇಟ್ಟುಕೊಂಡು ನಮ್ಮ ಬಳಿ ಬಂದಿದ್ದರು. ಉಪೇಂದ್ರ ಅವರು, ಇದನ್ನು ಒಳ್ಳೆಯ ಚಿತ್ರಕತೆ ಮಾಡಬಹುದು ಎಂದು ಇಷ್ಟ ಪಟ್ಟು ಅವರಿಗೆ ಹೇಳಿದರು. ಆದರೆ ಚಿತ್ರಕತೆಯನ್ನು ಡೆವಲಪ್ ಮಾಡಿದ ಮೇಲೆ ನಮಗೆ ಇಷ್ಟ ಆಗಲಿಲ್ಲ ಮತ್ತೆ ಉಪೇಂದ್ರ ಮತ್ತು ನಾನು ಕೂತು ವರ್ಕ್ ಮಾಡಿ ಕತೆಯನ್ನು ಮಾಡಿದೆವು, ಆದರೆ ಈಗ ಪುರುಷೋತ್ತಮ್ ತಮ್ಮದೇ ಕತೆ ಅಂತ ಹೇಳುತ್ತಿದ್ದಾರೆ’ ಎಂದಿದ್ದಾರೆ ಪ್ರಿಯಾಂಕಾ.
ಇದನ್ನೂ ಓದಿ:ಪ್ರಿಯಾಂಕಾ ಅವರಿಗೆ ಪತಿ ಉಪೇಂದ್ರ ಅವರ ಚಿತ್ರ ಉಡುಗೊರೆ ಕೊಟ್ಟ ಅಭಿಮಾನಿ: ವಿಡಿಯೋ
ಪುರುಷೋತ್ತಮ್ ಅವರು ಸಾಕಷ್ಟು ಸಮಯ ವ್ಯಯ ಮಾಡಿದ್ದರು. ಅವರು ಲೊಕೇಶನ್ ನೋಡಲು ಎರಡು ಬಾರಿ ಕಾಶ್ಮೀರಕ್ಕೆ ಹೋಗಿದ್ದರು. ಆದರೆ ಎರಡೂ ಬಾರಿ ಲೊಕೇಶನ್ ಫೈನಲ್ ಆಗಿರಲಿಲ್ಲ. ಪರ್ಮೀಷನ್ಗಳನ್ನು ಸರಿಯಾಗಿ ತೆಗೆದುಕೊಂಡಿರಲಿಲ್ಲ. ಇದರಿಂದ ಚಿತ್ರೀಕರಣಕ್ಕೆ ಸಾಕಷ್ಟು ಸಮಸ್ಯೆ ಆಯ್ತು. ಕಾಶ್ಮೀರ್ ಇಂದ ಬಂದ್ಮೇಲೆ ಎಡಿಟಿಂಗ್ ಗೆ ಬರಲಿಲ್ಲ. ಚಿತ್ರಕತೆ ಬದಲಾಯಿಸಿ ಅಂದರೆ ಬದಲಾಯಿಸಲಿಲ್ಲ. ಕಲಾವಿದರನ್ನು ಸಹ ಬಹಳ ಕಾಯಿಸುತ್ತಿದ್ದರು. ಮ್ಯೂಸಿಕ್ ರೆಡಿ ಆಗುತ್ತಿದೆ ಕೇಳೊಕೆ ಬನ್ನಿ ಅಂದರೆ ಬರುತ್ತಿರಲಿಲ್ಲ. ಇನ್ನೂ ಹಲವು ಕಾರಣಗಳಿಗಾಗಿ ನಾವು ಅವರನ್ನು ಬದಲಾಯಿಸಿದ್ದೇನೆ. ಈಗ ನಾನೇ ಜವಾಬ್ದಾರಿ ತೆಗೆದುಕೊಂಡಿದ್ದೀನಿ, ಮಗನ ಸಿನಿಮಾ ನಾನೇ ನಿರ್ದೇಶನ ಮಾಡುತ್ತೀನಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




