AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ವಿಮರ್ಶೆ: ಕಾಮಿಡಿ ಜೊತೆ ಭಾವುಕತೆ ಬೆರೆತ ‘ಲಕ್ಷ್ಮೀಪುತ್ರ’ನ ಪ್ರೇಮಕಥೆ

ಸಿನಿಮಾ ವಿಮರ್ಶೆ: ಕಾಮಿಡಿ ಜೊತೆ ಭಾವುಕತೆ ಬೆರೆತ ‘ಲಕ್ಷ್ಮೀಪುತ್ರ’ನ ಪ್ರೇಮಕಥೆ
Thara Anuradha, Chikkanna

ಲಕ್ಷ್ಮೀಪುತ್ರ

UA
  • Time - 148 Minutes
  • Released - November 27, 2026
  • Language - Kannada
  • Genre - Comedy, Drama, Romantic
Cast - ಚಿಕ್ಕಣ್ಣ, ವಂದಿತಾ ಗೌಡ, ತಾರಾ ಅನುರಾಧಾ, ಧರ್ಮಣ್ಣ, ಕುರಿ ಪ್ರತಾಪ್, ಅನಂತು, ತೇಜಸ್ವಿನಿ ಶರ್ಮಾ, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು.
Director - ವಿಜಯ್ ಸ್ವಾಮಿ
3
Critic's Rating
ಮದನ್​ ಕುಮಾರ್​
|

Updated on: Nov 27, 2026 | 4:15 PM

Share

ಹಾಸ್ಯನಟ ಚಿಕ್ಕಣ್ಣ ಅವರು ಹೀರೋ ಆಗಿ ಕೂಡ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಲಕ್ಷ್ಮೀಪುತ್ರ’ ಸಿನಿಮಾ ಈಗ ಬಿಡುಗಡೆ ಆಗಿದೆ. ಈ ಸಿನಿಮಾಗೆ ವಿಜಯ್ ಸ್ವಾಮಿ ಅವರು ನಿರ್ದೇಶನ ಮಾಡಿದ್ದಾರೆ. ಅನ್ನಪೂರ್ಣ ಅರ್ಜುನ್ ಅವರು ನಿರ್ಮಾಣ ಮಾಡಿದ್ದಾರೆ. ಎ.ಪಿ. ಅರ್ಜುನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿಕ್ಕಣ್ಣ ಜೊತೆ ತಾರಾ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಲಕ್ಷ್ಮೀಪುತ್ರ’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಚಿಕ್ಕಣ್ಣ ನಟನೆಯ ಸಿನಿಮಾ ಎಂದರೆ ಅಲ್ಲಿ ಪ್ರೇಕ್ಷಕರು ಹೆಚ್ಚಾಗಿ ನಿರೀಕ್ಷಿಸುವುದೇ ಕಾಮಿಡಿ. ಹಾಗಾಗಿ, ‘ಲಕ್ಷ್ಮೀಪುತ್ರ’ ಸಿನಿಮಾದ ಬಹುಪಾಲು ಭಾಗವನ್ನು ಹಾಸ್ಯಕ್ಕಾಗಿ ಮೀಸಲಿಡಲಾಗಿದೆ. ಆರಂಭದಿಂದ ಪ್ರೀ-ಕ್ಲೈಮ್ಯಾಕ್ಸ್ ತನಕ ಈ ಸಿನಿಮಾದಲ್ಲಿ ಕಾಮಿಡಿ ದೃಶ್ಯಗಳೇ ತುಂಬಿವೆ. ಜೊತೆಗೆ ಒಂದು ಲವ್ ಸ್ಟೋರಿ ಕೂಡ ಇದೆ. ಕ್ಲೈಮ್ಯಾಕ್ಸ್ ವೇಳೆಗೆ ತಾಯಿ ಸೆಂಟಿಮೆಂಟ್ ದೃಶ್ಯಗಳು ಮೇಲುಗೈ ಸಾಧಿಸಿವೆ.

ಹಳ್ಳಿಗಾಡಿನ ಕಥೆಗಳು ಚಿಕ್ಕಣ್ಣ ಅವರಿಗೆ ಹೆಚ್ಚು ಸೂಕ್ತ ಆಗುತ್ತವೆ. ‘ಲಕ್ಷ್ಮೀಪುತ್ರ’ ಸಿನಿಮಾ ಕೂಡ ಗ್ರಾಮೀಣ ಭಾಗದ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಚಿಕ್ಕಣ್ಣ ಅವರು ಕೃಷ್ಣ ಎಂಬ ಹಳ್ಳಿ ಹೈದನ ಪಾತ್ರವನ್ನು ಮಾಡಿದ್ದಾರೆ. ವಯಸ್ಸು 30 ದಾಟಿದ್ದರೂ ಮದುವೆಗೆ ಹೆಣ್ಣು ಸಿಗದೇ ಪರದಾಡುವ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಪ್ರೇಮವಿವಾಹವೇ ಆಗಬೇಕು ಎಂಬುದು ಕೃಷ್ಣನ ಆಸೆ. ಆದರೆ ಅದಕ್ಕೆ ನೂರೆಂಟು ವಿಘ್ನಗಳು.

ಕಡೆಗೂ ಕೃಷ್ಣನ ಹಲವು ಬಗೆಯ ಪ್ರಯತ್ನದಿಂದ ಆತನಿಗೆ ಒಬ್ಬಳು ಹುಡುಗಿ (ವಂದಿತಾ ಗೌಡ) ಸಿಗುತ್ತಾಳೆ. ಆಕೆಯ ಜೊತೆ ಊರೂರು ಸುತ್ತುತ್ತಾ, ಪ್ರೀತಿಯಲ್ಲಿ ತೇಲಾಡುತ್ತಾ ಕಾಲ ಕಳೆಯುವ ಕೃಷ್ಣನ ಬದುಕಿನಲ್ಲಿ ಕೆಲವು ಟ್ವಿಸ್ಟ್‌ಗಳು ಎದುರಾಗುತ್ತವೆ. ಅವುಗಳಿಂದಾಗಿ ಕಥೆಯ ಸ್ವರೂಪ ಕೂಡ ಬದಲಾಗುತ್ತದೆ. ಅಲ್ಲಿಯವರೆಗೂ ಕಾಮಿಡಿಯಾಗಿ ಸಾಗುತ್ತಿದ್ದ ಸಿನಿಮಾ, ನಂತರದಲ್ಲಿ ಗಂಭೀರವಾದ ಹಾದಿಯನ್ನು ಹಿಡಿಯುತ್ತದೆ.

ಈ ಸಿನಿಮಾದಲ್ಲಿ ಹಲವು ಹಾಸ್ಯ ಕಲಾವಿದರ ಸಂಗಮ ಆಗಿದೆ. ಕುರಿ ಪ್ರತಾಪ್, ಧರ್ಮಣ್ಣ, ಶಿವರಾಜ್ ಕೆ.ಆರ್. ಪೇಟೆ, ಗಿರೀಶ್ ಶಿವಣ್ಣ, ಅನಂತು ಮುಂತಾದವರು ಕಾಮಿಡಿ ಕಿಕ್ ನೀಡುತ್ತಾರೆ. ಮೊದಲಾರ್ಧದ ಪೂರ್ತಿ ಪ್ರೇಕ್ಷಕರನ್ನು ನಗಿಸಲು ನಿರ್ದೇಶಕರು ಒತ್ತು ನೀಡಿದ್ದಾರೆ. ಚಿಕ್ಕಣ್ಣ ಅವರ ಟಿಪಿಕಲ್ ಮ್ಯಾನರಿಸಂ ಇಷ್ಟಪಡುವ ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚು ಇಷ್ಟ ಆಗುತ್ತದೆ. ಪಂಚಿಂಗ್ ಸಂಭಾಷಣೆಗಳು ಕೂಡ ಸಿನಿಮಾದಲ್ಲಿ ಹೈಲೈಟ್ ಆಗಿವೆ. ಹಾಗಿದ್ದರೂ ಕೂಡ ಕೆಲವು ಡಬಲ್ ಮೀನಿಂಗ್ ಡೈಲಾಗ್​ಗಳಿಗೆ ಕಡಿವಾಣ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ.

ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕೂಡ ಮಿಂಚಿದ್ದಾರೆ. ಹುಡುಗಿಯ ಹಿಂದೆ ಬಿದ್ದು ಹೃದಯ ಕದಿಯಲು ಪ್ರಯತ್ನಿಸುವ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿಯ ಜೊತೆ ಡ್ಯುಯೆಟ್ ಹಾಡುವುದರಲ್ಲೂ ಅವರು ಕಡಿಮೆ ಏನಿಲ್ಲ. ಕಲರ್​ಫುಲ್ ಹಾಡುಗಳಲ್ಲಿ ಡ್ಯಾನ್ಸ್ ಮಾಡುತ್ತಾ ಅವರು ಮನರಂಜನೆ ನೀಡುತ್ತಾರೆ. ಪ್ರೀತಿಯಲ್ಲಿ ಅನಿರೀಕ್ಷಿತ ಟ್ವಿಸ್ಟ್ ಎದುರಾದಾಗ ಭಗ್ನಪ್ರೇಮಿಯಾಗಿಯೂ ಅವರು ಗಮನ ಸೆಳೆದಿದ್ದಾರೆ. ಇದರ ಜೊತೆ ಸರ್ಪ್ರೈಸ್ ಎನಿಸುವುದು ಭಾವುಕ ಸನ್ನಿವೇಶಗಳು.

ಹೌದು, ಚಿಕ್ಕಣ್ಣ ಅವರು ‘ಲಕ್ಷ್ಮೀಪುತ್ರ’ ಸಿನಿಮಾದಲ್ಲಿ ಕಾಮಿಡಿ ದೃಶ್ಯಗಳ ಜೊತೆಗೆ ಎಮೋಷನಲ್ ಸನ್ನಿವೇಶಗಳಲ್ಲಿ ಕೂಡ ಉತ್ತಮ ಅಭಿನಯ ನೀಡಿದ್ದಾರೆ. ತಾಯಿ-ಮಗನಾಗಿ ತಾರಾ ಅನುರಾಧಾ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಷನ್ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟ ಆಗುವಂತಿವೆ. ಸಾಮಾನ್ಯ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ರೀತಿಯಲ್ಲಿ ತಾಯಿ ಸೆಂಟಿಮೆಂಟ್ ಸನ್ನಿವೇಶಗಳನ್ನು ಹೆಣೆಯಲಾಗಿದೆ. ಹುಡುಗಿಯ ಪ್ರೇಮಕ್ಕಿಂತ ಅಮ್ಮನ ಪ್ರೀತಿಯೇ ಮುಖ್ಯ ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ.

ಇದನ್ನೂ ಓದಿ: ‘ಲಕ್ಷ್ಮಿಪುತ್ರ’ ಚಿತ್ರದಲ್ಲಿ ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ

ನಟಿ ತಾರಾ ಅವರು ಈ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ನಾಯಕನ ತಾಯಿಯಾಗಿ ಲಕ್ಷ್ಮೀ ಎಂಬ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ನಾಯಕಿಯ ಪಾತ್ರ ಮಾಡಿರುವ ವಂದಿತಾ ಗೌಡ ಅವರು ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೆ. ಆದರೆ ಪ್ರೇಕ್ಷಕರು ಊಹೆ ಮಾಡಿರದ ರೀತಿಯಲ್ಲಿ ಅವರ ಪಾತ್ರ ಕೊನೆಯಾಗುತ್ತದೆ. ನಟಿ ತೇಜಸ್ವಿನಿ ಶರ್ಮಾ ಅವರು ಒಂದು ಹಾಡಿಗಷ್ಟೇ ಸೀಮಿತವಾಗಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಚಿಕ್ಕಣ್ಣ ಅವರ ಅಭಿಮಾನಿಗಳು ಬಯಸುವ ಎಲ್ಲ ಕಮರ್ಷಿಯಲ್ ಅಂಶಗಳು ‘ಲಕ್ಷ್ಮೀಪುತ್ರ’ ಸಿನಿಮಾದಲ್ಲಿ ಇವೆ. ಕಥೆಯಲ್ಲಿ ಒಂದಷ್ಟು ಹೊಸತನ ಸೇರಿಸಿ, ಮೊದಲಾರ್ಧವನ್ನು ಮತ್ತಷ್ಟು ಉತ್ತಮವಾಗಿಸಿದ್ದರೆ ಎಲ್ಲ ವರ್ಗದ ಪ್ರೇಕ್ಷಕರನ್ನು ಕೂಡ ಈ ಸಿನಿಮಾ ಸೆಳೆದುಕೊಳ್ಳಬಹುದಾಗಿತ್ತು. ಆದರೂ ಕೂಡ ಫ್ಯಾಮಿಲಿ ಪ್ರೇಕ್ಷಕರಿಗೆ ಹೇಳಿಮಾಡಿಸಿದಂತಿದೆ ಈ ಸಿನಿಮಾದ ಕ್ಲೈಮ್ಯಾಕ್ಸ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ