Upendra
ಉಪೇಂದ್ರ ಅವರು ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ. ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು, ತೆಲುಗು ಹಾಗೂ ತಮಿಳು ರಂಗದಲ್ಲೂ ಹೆಸರು ಮಾಡಿದ್ದಾರೆ. ಅವರು ರಾಜಕೀಯಕ್ಕೂ ಕಾಲಿಟ್ಟಿದ್ದು, ‘ಪ್ರಜಾಕೀಯ’ ಹೆಸರಿನ ಪಕ್ಷ ಆರಂಭಿಸಿದ್ದಾರೆ. ಅವರು ‘ಎ’, ‘ಓಂ’ ‘ಉಪೇಂದ್ರ ರೀತಿಯ ಸಿನಿಮಾಗಳನ್ನು ನಿರ್ದೇಶನ ಮಾಡಿ ಖ್ಯಾತಿ ಪಡೆದಿದ್ದಾರೆ. ಅವರ ನಿರ್ದೇಶನದ, ಶಿವರಾಜ್‌ಕುಮಾರ್ ನಟನೆಯ ‘ಓಂ’ ಸಿನಿಮಾ ನೂರಾರು ಬಾರಿ ಥಿಯೇಟರ್ ನಲ್ಲಿ ರೀ-ರಿಲೀಸ್ ಆಗಿ ದಾಖಲೆ ಬರೆದಿತ್ತು. ಉಪೇಂದ್ರ ಅವರ ಆಲೋಚನೆಗಳು ಭಿನ್ನವಾಗಿ ಇರುತ್ತವೆ. ಈ ಕಾರಣಕ್ಕೆ ಅವರ ಸಿನಿಮಾಗಳು ಜನರಿಗೆ ಇಷ್ಟ ಆಗುತ್ತವೆ. ಉಪೇಂದ್ರ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಪ್ರಿಯಾಂಕ ಅವರನ್ನು ಉಪೇಂದ್ರ ಮದುವೆ ಆಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳು