35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ
Upendra Serial Clip: ಉಪೇಂದ್ರ ಅವರು ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದು, ನಿರ್ದೇಶಕ-ನಟನಾಗಿ ಬೆಳೆದ ರೋಚಕ ಪಯಣ ಈ ಲೇಖನದಲ್ಲಿ ಅನಾವರಣಗೊಂಡಿದೆ. 1991ರ 'ನಿರ್ಮಲೆಯ ಸಾಕ್ಷಿ' ಧಾರಾವಾಹಿಯ ಅವರ ಹಳೆಯ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಉಪೇಂದ್ರ (Upendra) ಅವರು ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ, ಸಿನಿಮಾ ನಿರ್ದೇಶನ ಮಾಡಿ, ವಿಲನ್ ಪಾತ್ರಗಳಲ್ಲಿ ಮಿಂಚಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈಗ ಉಪೇಂದ್ರ 35 ವರ್ಷಗಳ ಹಿಂದೆ ನಟಿಸಿದ್ದ ಧಾರಾವಾಹಿಯ ಕ್ಲಿಪ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆ ಧಾರಾವಾಹಿಯ ಕ್ಲಿಪ್ ಹಾಗೂ ಅದರ ವಿವರ ಈ ಸ್ಟೋರಿಯಲ್ಲಿ ಇದೆ.
ಉಪೇಂದ್ರ ಅವರು 1989ರ ‘ಅನಂತನ ಅವಾಂತರ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರು. ಈ ಸಮಯದಲ್ಲಿ ಅವರು ಯಾವುದೇ ಅವಕಾಶ ಸಿಕ್ಕರೂ ಮಾಡುತ್ತಿದ್ದರು. 1991ರಲ್ಲಿ ದೂದರ್ಶನದಲ್ಲಿ ಪ್ರಸಾರ ಆಗಿದ್ದ, ‘ನಿರ್ಮಲೆಯ ಸಾಕ್ಷಿ’ ಧಾರಾವಾಹಿಯಲ್ಲಿ ಉಪ್ಪಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದೆ. ಉಪೇಂದ್ರ ಅವರು ಆಗ ಇರೋದಕ್ಕೂ, ಈಗ ಇರೋದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಉಪೇಂದ್ರ ವೀಕ್ನೆಸ್ ಏನು ಎಂದು ಕಂಡು ಹಿಡಿದುಕೊಂಡ ರಾಜ್: ನಿಮ್ಗೂ ಅಚ್ಚರಿ ಆಗುತ್ತೆ
ಉಪೇಂದ್ರ ಅವರಿಗೆ ಹೀರೋ ಆಗಬೇಕು ಎಂಬ ಕನಸು ಇರಲಿಲ್ಲ. ಆದರೆ, ಸಮಯ ಅವರನ್ನು ಹೀರೋ ಆಗಿ ಮಾಡಿತು. ಆರಂಭದಲ್ಲಿ ನಿರ್ದೇಶನ ಮಾಡಬೇಕು ಎಂಬ ತುಡಿತ ಇತ್ತು. ಕಾಶಿನಾಥ್ ಅವರ ಶಿಷ್ಯವರ್ಗದಲ್ಲಿ ಕಾಣಿಸಿಕೊಂಡ ಉಪೇಂದ್ರ ಅವರು, ‘ತರ್ಲೆ ನನ್ ಮಗ’ ಸಿನಿಮಾ ನಿರ್ದೇಶನ ಮಾಡಿದರು. ಈ ಚಿತ್ರ ಯಶಸ್ಸು ಕಂಡಿತು. ಆ ಬಳಿಕ ಬಂದ ‘ಶ್’ ಸಿನಿಮಾ ಸೂಪರ್ ಹಿಟ್ ಆಯಿತು. ‘ಓಮ್’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆ ಬರೆಯಿತು.
1998ರಲ್ಲಿ ಬಂದ ‘ಎ’ ಸಿನಿಮಾದಲ್ಲಿ ಉಪ್ಪಿ ಹೀರೋ ಆದರು. ಹೀರೋ ಆಗಿ ಜನರು ಅವರನ್ನು ಇಷ್ಟಪ್ಟರು. ಇನ್ನು, ವಿಲನ್ ಪಾತ್ರದಲ್ಲಿ ಜನರು ಅವರನ್ನು ಒಪ್ಪಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘45’ ಸಿನಿಮಾ ರಿಲೀಸ್ ಆಯಿತು. ಉಪ್ಪಿ ಜೊತೆ ರಾಜ್ ಬಿ ಶೆಟ್ಟಿ ಹಾಗೂ ಶಿವಣ್ಣ ಕೂಡ ಕಾಣಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




