AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ

ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ

ಮದನ್​ ಕುಮಾರ್​
|

Updated on: Feb 06, 2026 | 10:32 PM

Share

ಉಪೇಂದ್ರ ಮತ್ತು ಥ್ರಿಲ್ಲರ್ ಮಂಜು ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ಎಲ್ಲಿಗೆ ಎಂಬುದನ್ನು ಮಂಜು ವಿವರಿಸಿದ್ದಾರೆ. ಆತ್ಮೀಯ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಕ್ಕೆ ಉಪೇಂದ್ರ ಅವರಿಗೆ ಥ್ರಿಲ್ಲರ್ ಮಂಜು ಧನ್ಯವಾದ ತಿಳಿಸಿದ್ದಾರೆ. ‘ಉಪೇಂದ್ರ ಅವರು ನನ್ನ ಆತ್ಮೀಯರು, ಸ್ನೇಹಿತರು, ನನ್ನ ಸಹೋದರ. ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ವ್ಯಕ್ತಿ’ ಎಂದು ಥ್ರಿಲ್ಲರ್ ಮಂಜು ಹೇಳಿದ್ದಾರೆ.

ನಟ ಉಪೇಂದ್ರ ಹಾಗೂ ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರು ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ಎಲ್ಲಿಗೆ ಎಂಬುದನ್ನು ಥ್ರಿಲ್ಲರ್ ಮಂಜು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಆತ್ಮೀಯ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಕ್ಕೆ ಉಪೇಂದ್ರ (Upendra) ಅವರಿಗೆ ಥ್ರಿಲ್ಲರ್ ಮಂಜು ಧನ್ಯವಾದ ತಿಳಿಸಿದ್ದಾರೆ. ‘ಒಂದು ಸಮಾರಂಭಕ್ಕೆ ಉಪ್ಪಿ ಸರ್ ನನ್ನ ಜೊತೆ ಬರುತ್ತಿದ್ದಾರೆ. ನನ್ನ ಸಂಬಂಧಿಯ ಮದುವೆಗೆ ಒಂದೇ ಮಾತು ಕರೆದಿದ್ದಕ್ಕೆ ಬಂದಿದ್ದಾರೆ. ಅವರ ಅಮೂಲ್ಯವಾದ ಸಮಯವನ್ನು ನೀಡಿದ್ದಾರೆ’ ಎಂದು ಥ್ರಿಲ್ಲರ್ ಮಂಜು (Thriller Manju) ಹೇಳಿದ್ದಾರೆ. ಅದಕ್ಕೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ‘ಮಾಸ್ಟರ್ ಕರೆದರೆ ಆಗಲ್ಲ ಅಂತ ಹೇಳೋಕೆ ಆಗತ್ತಾ? ನಮ್ಮ ಮತ್ತು ಇವರ ಸಂಬಂಧ 35 ವರ್ಷಗಳಷ್ಟು ಹಳೆಯದು. ಅಂದಿನಿಂದ ನಮಗೆ ಎಂಥೆಂಥಾ ಒಳ್ಳೊಳ್ಳೆಯ ಫೈಟ್ಸ್ ಕೊಟ್ಟಿದ್ದಾರೆ. ‘ಶ್’ ಸಿನಿಮಾ ಹಿಟ್ ಆಗಲು ಫೈಟ್ಸ್ ಕಾರಣ. ಅದನ್ನು ಮರೆಯೋಕೆ ಆಗಲ್ಲ. ಅವರು ಕರೆದಾಗ ಇಲ್ಲ ಅಂತ ಹೇಗೆ ಹೇಳಲಿ. ನಿಮ್ಮ ಜೊತೆ ಬರುತ್ತಿರುವುದು ತುಂಬಾ ಸಂತೋಷ’ ಎಂದು ಉಪೇಂದ್ರ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.