ತಮ್ಮ ಯಾವುದೇ ಸಿನಿಮಾ ರಿಲೀಸ್ ಆದರೂ ಉಪ್ಪಿ ಏಕೆ ಥಿಯೇಟರ್ಗೆ ಹೋಗಲ್ಲ?
ಉಪೇಂದ್ರ ನಟನೆಯ ‘ಆಂಧ್ರ ಕಿಂಗ್ ತಾಲೂಕಾ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಾಮ್ ಪೋತಿನೇನಿ ಹೀರೋ. ಈ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಹಲವು ಸಂದರ್ಶನಗಳನ್ನು ನೀಡಿದ್ದಾರೆ. ಈ ವೇಳೆ ಅವರು ಒಂದು ವಿಷಯ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸಿನಿಮಾ ರಿಲೀಸ್ ಆದರು ತಂಡದ ಕಲಾವಿದರು, ತಂತ್ರಜ್ಞರು ಥಿಯೇಟರ್ಗೆ ಹೋಗುತ್ತಾರೆ. ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡುತ್ತಾರೆ. ಆದರೆ, ಕೆಲವರು ಆ ರೀತಿ ಅಲ್ಲ. ಅವರು ಇದನ್ನು ವಿರೋಧಿಸುತ್ತಾರೆ. ಈ ಸಾಲಿನಲ್ಲಿ ಉಪೇಂದ್ರ (Upendra) ಕೂಡ ಇದ್ದಾರೆ. ಅವರು ತಮ್ಮ ಸಿನಿಮಾಗಳನ್ನು ನೋಡಲು ಥಿಯೇಟರ್ಗೆ ಹೋಗುವುದಿಲ್ಲವಂತೆ. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಉಪೇಂದ್ರ ನಟನೆಯ ‘ಆಂಧ್ರ ಕಿಂಗ್ ತಾಲೂಕಾ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಾಮ್ ಪೋತಿನೇನಿ ಹೀರೋ. ಈ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಹಲವು ಸಂದರ್ಶನಗಳನ್ನು ನೀಡಿದ್ದಾರೆ. ಈ ವೇಳೆ ಅವರು ಒಂದು ವಿಷಯ ಹಂಚಿಕೊಂಡಿದ್ದಾರೆ.
ಉಪೇಂದ್ರ ಅವರು ತಮ್ಮ ಸಿನಿಮಾಗಳನ್ನು ನೋಡಲು ಏಕೆ ಥಿಯೇಟರ್ಗೆ ಹೋಗೋದಿಲ್ಲ ಎಂಬುದನ್ನು ಹೇಳಿದರು ಮತ್ತು ಇದನ್ನು ಅವರು ಎ ಸಿನಿಮಾ ಸಮಯದಿಂದಲೇ ನಿಲ್ಲಿಸಿ ಬಿಟ್ಟರಂತೆ. ‘ನನ್ನ ‘ಎ’ ಚಿತ್ರದ ಮೊದಲ ದಿನ ನಾನು ಚಿತ್ರಮಂದಿರಕ್ಕೆ ಹೋಗಿದ್ದೆ, ಆದರೆ ಎಲ್ಲಾ ಪ್ರೇಕ್ಷಕರು ಸಿನಿಮಾ ನೋಡುವ ಬದಲು ನನ್ನನ್ನು ನೋಡಲು ಬಂದರು. ಅದು ವಿಭಿನ್ನ ಚಿತ್ರಕಥೆಯನ್ನು ಹೊಂದಿರುವ ಚಿತ್ರವಾಗಿತ್ತು. ಪ್ರೇಕ್ಷಕರು ಸಿನಿಮಾವನ್ನು ತಪ್ಪಿಸಿಕೊಳ್ಳುತ್ತಾರೆ ಎಂಬ ಭಾವನೆ ನನಗಿತ್ತು. ಅಂದಿನಿಂದ, ನಾನು ಚಿತ್ರಮಂದಿರಕ್ಕೆ ಹೋಗುವುದನ್ನು ನಿಲ್ಲಿಸಿದೆ’ ಎಂದಿದ್ದಾರೆ ಅವರು.
ಇನ್ನು ಉಪೇಂದ್ರ ಅವರು ಮುಂದಿನ ಸಿನಿಮಾಗೆ ಕಥೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾವ ಕಥೆ ಇಷ್ಟ ಆಯಿತೋ ಅದನ್ನು ಆಯ್ದುಕೊಂಡು ಅವರು ಸಿನಿಮಾ ಘೋಷಣೆ ಮಾಡುವ ಆಲೋಚನೆ ಇದೆಯಂತೆ.
ಇದನ್ನೂ ಓದಿ: ಉಪೇಂದ್ರ ನಿರ್ದೇಶನದ ಮುಂದಿನ ಸಿನಿಮಾ ಯಾವಾಗ? ಉತ್ತರಿಸಿದ ರಿಯಲ್ ಸ್ಟಾರ್
ಉಪೇಂದ್ರ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಇತ್ತೀಚೆಗೆ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಿರ್ದೇಶನದ ‘ಯುಐ’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಈ ಚಿತ್ರ ಮೆಚ್ಚುಗೆ ಪಡೆಯಿತು. ಫ್ಯೂಚರ್ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಯಿತು. ಈ ಸಿನಿಮಾದಲ್ಲಿ ಗ್ರಾಫಿಕ್ಸ್ ಕೆಲಸ ಹೆಚ್ಚಿತ್ತು. ಕೆಲವರು ಸಿನಿಮಾನ ಇಷ್ಟಪಟ್ಟಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



