AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನದಲ್ಲಿ ‘ಬಲರಾಮನ ದಿನಗಳು’

ತಮಿಳು ಮತ್ತು ತೆಲುಗಿನ ಸ್ಟಾರ್ ನಟರ ಸಿನಿಮಾಗಳಿಗೆ ಸಂಗೀತ ನೀಡಿ ಸಂತೋಷ್ ನಾರಾಯಣನ್ ಫೇಮಸ್ ಆಗಿದ್ದಾರೆ. ಈಗ ಅವರು ಕನ್ನಡದ ‘ಬಲರಾಮನ ದಿನಗಳು’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇದು ಅವರ 51ನೇ ಸಿನಿಮಾ. ಶೀಘ್ರದಲ್ಲೇ ಈ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.

ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನದಲ್ಲಿ ‘ಬಲರಾಮನ ದಿನಗಳು’
Balaramana Dinagalu Movie Team
ಮದನ್​ ಕುಮಾರ್​
|

Updated on: Nov 27, 2025 | 4:31 PM

Share

80ರ ದಶಕದ ಕಥೆಯನ್ನು ಹೊಂದಿರುವ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರು ಹೀರೋ ಆಗಿ ನಟಿಸಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವೇಣು ಅವರು ಛಾಯಾಗ್ರಹಣ ಮಾಡಿದ್ದಾರೆ. ‘ಆ ದಿನಗಳು’ ಸಿನಿಮಾದಲ್ಲಿ ಮಿಂಚಿದ್ದ ಪಾತ್ರಗಳು ಇಲ್ಲೂ ಮುಂದುವರಿದಿವೆ ಎಂಬುದು ವಿಶೇಷ. ಅತುಲ್ ಕುಲಕರ್ಣಿ, ಆಶಿಷ್ ವಿದ್ಯಾರ್ಥಿ, ಶರತ್ ಲೋಹಿತಾಶ್ವ ಅವರು ಪಾತ್ರವರ್ಗದಲ್ಲಿ ಇದ್ದಾರೆ. ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಕೂಡ ನಟಿಸಿದ್ದಾರೆ. ಈ ಸಿನಿಮಾಗೆ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂತೋಷ್ ನಾರಾಯಣನ್ (Santhosh Narayanan) ಅವರು ಸಂಗೀತ ನೀಡಿದ್ದಾರೆ.

2026ರಲ್ಲಿ ಬಿಡುಗಡೆ ಆಗಲಿರುವ ಕನ್ನಡದ ಬಿಗ್ ಬಜೆಟ್ ಸಿನಿಮಾಗಳಲ್ಲಿ ‘ಬಲರಾಮನ ದಿನಗಳು’ ಕೂಡ ನಿರೀಕ್ಷೆ ಹುಟ್ಟಿಸಿದೆ. ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದು, ಚಿತ್ರತಂಡ ಭರದಿಂದ ಕೆಲಸಗಳನ್ನು ಮಾಡುತ್ತಿದೆ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ನಿರೀಕ್ಷೆ ಹೆಚ್ಚಿಸುತ್ತಿದೆ. ದಕ್ಷಿಣ ಭಾರತದ ಜನಪ್ರಿಯ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಅವರನ್ನು ‘ಬಲರಾಮನ ದಿನಗಳು’ ಸಿನಿಮಾ ಮೂಲಕ ಕನ್ನಡಕ್ಕೆ ಕರೆತರಲಾಗಿದೆ.

‘ಕಲ್ಕಿ 2898 ಎಡಿ’, ‘ಕಾಲಾ’, ‘ರೆಟ್ರೋ’, ‘ಕಬಾಲಿ’ ಮುಂತಾದ ಸ್ಟಾರ್ ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಸಂತೋಷ್ ನಾರಾಯಣನ್ ಅವರಿಗೆ ಸಲ್ಲುತ್ತದೆ. ಈವರೆಗೂ 50 ಸಿನಿಮಾಗಳಿಗೆ ಅವರು ಸಂಗೀತ ನೀಡಿದ್ದಾರೆ. ಅವರು ಸಂಗೀತ ನಿರ್ದೇಶಿಸಿದ 51ನೇ ಸಿನಿಮಾ ಕನ್ನಡದ ‘ಬಲರಾಮನ ದಿನಗಳು’ ಎಂಬುದು ವಿಶೇಷ. ಡಿಸೆಂಬರ್ ತಿಂಗಳಲ್ಲಿ ಈ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಲಿದೆ.

‘ಪದ್ಮಾವತಿ ಫಿಲ್ಮ್ಸ್’ ಮೂಲಕ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್ ಅವರು ‘ಬಲರಾಮನ ದಿನಗಳು’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕೆ.ಎಂ. ಚೈತನ್ಯ ಅವರು ನಿರ್ದೇಶನ ಮಾಡಿದ್ದಾರೆ. ರೆಟ್ರೋ ಕಾಲದ ಕಥೆ ಈ ಸಿನಿಮಾದಲ್ಲಿ ಇರಲಿದೆ. ಸಂತೋಷ್ ನಾರಾಯಣನ್ ಅವರು ಸಂಗೀತ ನೀಡಿರುವ ಸಿನಿಮಾ ಎಂಬ ಕಾರಣದಿಂದಲೂ ಈ ಚಿತ್ರ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ‘ಬಲರಾಮನ ದಿನಗಳು’ ತಂಡ ಸೇರಿದ ಅತುಲ್ ಕುಲಕರ್ಣಿ, ಪಾತ್ರ ಅದೇನಾ?

‘ಬಲರಾಮನ ದಿನಗಳು’ ಸಿನಿಮಾಗೆ ಈಗಾಗಲೇ ಶೂಟಿಂಗ್ ಮುಕ್ತಾಯ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಮೊದಲನೇ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲು ಚಿತ್ರತಂಡ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2026ರ ಫೆಬ್ರವರಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.