‘ಬಲರಾಮನ ದಿನಗಳು’ ತಂಡ ಸೇರಿದ ಅತುಲ್ ಕುಲಕರ್ಣಿ, ಪಾತ್ರ ಅದೇನಾ?

Atul Kulkarni: ‘ಆ ದಿನಗಳು’, ‘ಎದೆಗಾರಿಕೆ’, ‘ಮೈತ್ರಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಅತುಲ್ ಕುಲಕರ್ಣಿ ಈಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ಈ ಹಿಂದೆ ನಟಿಸಿದ್ದ ಪಾತ್ರದಲ್ಲಿಯೇ ನಟಿಸಲು ಮತ್ತೆ ಬಂದಂತಿದೆ. ಸಿನಿಮಾದ ಬಗ್ಗೆ ವಿವರ ಇಲ್ಲಿದೆ.

‘ಬಲರಾಮನ ದಿನಗಳು’ ತಂಡ ಸೇರಿದ ಅತುಲ್ ಕುಲಕರ್ಣಿ, ಪಾತ್ರ ಅದೇನಾ?
Atul Kulkarni
Follow us
ಮಂಜುನಾಥ ಸಿ.
|

Updated on:Jan 14, 2025 | 6:42 PM

‘ಆ ದಿನಗಳು’, ‘ಆಟಗಾರ’ ಸೇರಿದಂತೆ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳನ್ನು ನೀಡಿರುವ ಕೆಎಂ ಚೈತನ್ಯ ಈಗ ಮತ್ತೊಮ್ಮೆ ತಮ್ಮ ‘ದಿನಗಳು’ ಸರಣಿಗೆ ಮರಳಿದ್ದಾರೆ. ವಿನೋದ್ ಪ್ರಭಾಕರ್ ನಟನೆಯ ‘ಬಲರಾಮ ದಿನಗಳು’ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ಪ್ರಿಯಾ ಆನಂದ್, ‘ಬಲರಾಮನ ದಿನಗಳು’ ಸಿನಿಮಾ ತಂಡವನ್ನು ಸೇರಿಕೊಂಡ ಸುದ್ದಿ ಹೊರಬಿದ್ದಿತ್ತು, ಇದೀಗ ಮತ್ತೊಬ್ಬ ಜನಪ್ರಿಯ ಮತ್ತು ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಟ ‘ಬಲರಾಮನ ದಿನಗಳು’ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಅವರೇ ಅತುಲ್ ಕುಲಕರ್ಣಿ.

ಅತುಲ್ ಕುಲಕರ್ಣಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಹು ಪರಿಚಿತ ನಟ. ಅತುಲ್ ಕುಲಕರ್ಣಿ ನಟನೆ ಪ್ರಾರಂಭ ಮಾಡಿದ್ದೆ ಕನ್ನಡದ ‘ಭೂಮಿ ಗೀತಾ’ ಸಿನಿಮಾ ಮೂಲಕ. ‘ಆ ದಿನಗಳು’ ಸಿನಿಮಾದಲ್ಲಿ ಅತುಲ್ ನಟಿಸಿದ ಅಗ್ನಿ ಶ್ರೀಧರ್ ಪಾತ್ರ ಬಹಳ ಜನಪ್ರಿಯತೆ ಗಳಿಸಿತ್ತು. ಅದಾದ ಬಳಿಕ ‘ಎದೆಗಾರಿಕೆ’ ಸಿನಿಮಾದಲ್ಲಿಯೂ ಅವರು ಶ್ರೀಧರ್ ಪಾತ್ರದಲ್ಲಿ ನಟಿಸಿದ್ದರು. ಇದೀಗ ‘ಬಲರಾಮ ದಿನಗಳು’ ಸಿನಿಮಾಕ್ಕೆ ಬಂದಿರುವ ಅತುಲ್, ಈ ಸಿನಿಮಾದಲ್ಲಿಯೂ ಶ್ರೀಧರ್ ಪಾತ್ರದಲ್ಲಿಯೇ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅತುಲ್ ಅವರ ಪೋಸ್ಟರ್ ಒಂದನ್ನು ನಿರ್ದೇಶಕ ಚೈತನ್ಯ ಹಂಚಿಕೊಂಡಿದ್ದು, ಪೋಸ್ಟರ್ ನೋಡಿದರೆ ‘ಆ ದಿನಗಳು’, ‘ಎದೆಗಾರಿಕೆ’ ಸಿನಿಮಾದಲ್ಲಿ ಅವರು ನಿರ್ವಹಿಸಿದ ಪಾತ್ರವನ್ನೇ ಹೋಲುತ್ತಿದೆ.

ಇದನ್ನೂ ಓದಿ:‘ಬಲರಾಮನ ದಿನಗಳು’ ಚಿತ್ರದಲ್ಲಿ ವಿನೋದ್ ಪ್ರಭಾಕರ್​ಗೆ ಜೋಡಿಯಾದ ಪ್ರಿಯಾ ಆನಂದ್

ಮರಾಠಿ ನಟರಾಗಿರುವ ಅತುಲ್ ಕುಲಕರ್ಣಿ, ಮರಾಠಿ, ಹಿಂದಿ, ತೆಲುಗು, ತಮಿಳು, ಕನ್ನಡ ಹೀಗೆ ಭಾಷೆಯ ಹಂಗಿಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ನೆನಪುಳಿಯುವ ಪಾತ್ರಗಳನ್ನು ಅತುಲ್ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಈವರೆಗೆ ಸುಮಾರು 13 ಸಿನಿಮಾಗಳಲ್ಲಿ ಅತುಲ್ ಕುಲಕರ್ಣಿ ನಟಿಸಿದ್ದಾರೆ. ‘ಭೂಮಿಗೀತ’, ‘ಆ ದಿನಗಳು’, ‘ಎದೆಗಾರಿಕೆ’, ಪುನೀತ್ ರಾಜ್​ಕುಮಾರ್ ನಟನೆಯ ‘ಮೈತ್ರಿ’, ‘ಉಗ್ರಂ’ ಸಿನಿಮಾಗಳು ಇವುಗಳಲ್ಲಿ ಪ್ರಮುಖವಾದವು.

‘ಬಲರಾಮನ ದಿನಗಳು’ ಸಿನಿಮಾಕ್ಕೆ ಒಂದೊಳ್ಳೆ ತಂಡವನ್ನು ನಿರ್ದೇಶಕ ಕೆಎಂ ಚೈತನ್ಯ ಸೇರಿಸಿದ್ದಾರೆ. ವಿನೋದ್ ಪ್ರಭಾಕರ್ ಬಲರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾ ಆನಂದ್ ಸಿನಿಮಾದ ನಾಯಕಿ. ಈಗ ಅತುಲ್ ಕುಲಕರ್ಣಿ ಸೇರಿಕೊಂಡಿದ್ದಾರೆ. ‘ಅಟ್ಟಕತ್ತಿ’, ‘ಕಬಾಲಿ’, ‘ಕಾಲ’, ‘ಭೈರವ’, ‘ಕಲ್ಕಿ’, ‘ದಸರಾ’ ಮುಂತಾದ ಯಶಸ್ವಿ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಸಂತೋಷ್ ನಾರಾಯಣನ್ ‘ಬಲರಾಮನ ದಿನಗಳು’ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಎರಡು ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಜನವರಿ 15 ರಿಂದ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Tue, 14 January 25

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ