AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರ್ತಿದೆ ‘ಅಗ್ನಿ ಸಾಕ್ಷಿ’; ಧಾರಾವಾಹಿಗೆ ನಾಯಕ ಯಾರು?

ಕಲರ್ಸ್ ಕನ್ನಡದಲ್ಲಿ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧವಾಗಿದೆ. ಈ ಮೊದಲು ಆರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗಿದ್ದ ಈ ಸೀರಿಯಲ್​ಗೆ ಈಗ ಶಮಂತ್ ಬ್ರೋ ಗೌಡ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಚಾನೆಲ್ ಹಂಚಿಕೊಂಡಿರುವ ಪ್ರೋಮೋ ವೀಕ್ಷಕರ ಗಮನ ಸೆಳೆದಿದ್ದು, ಹಳೆಯ ಸಂಗೀತದ ಜೊತೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಮತ್ತೆ ಬರ್ತಿದೆ ‘ಅಗ್ನಿ ಸಾಕ್ಷಿ’; ಧಾರಾವಾಹಿಗೆ ನಾಯಕ ಯಾರು?
ಅಗ್ನಿಸಾಕ್ಷಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 12, 2026 | 7:54 AM

Share

ಕಲರ್ಸ್ ಕನ್ನಡದಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಈ ಮೊದಲು ಪ್ರಸಾರ ಕಂಡು ಭಾರೀ ವೀಕ್ಷಣೆ ಕಂಡಿತ್ತು. ಹಲವು ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರ ಆಯಿತು. ಈಗ ಧಾರಾವಾಹಿಯು ಮತ್ತೆ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಪ್ರೋಮೋ ಹಂಚಿಕೊಂಡಿದೆ. ಇದು ವೀಕ್ಷಕರಿಗೆ ಸಾಕಷ್ಟು ಗಮನ ಸೆಳೆದಿದೆ. ಹಳೆಯ ಮ್ಯೂಸಿಕ್ ಅನ್ನು ಬಳಸಲಾಗಿದೆ.

‘ಅಗ್ನಿಸಾಕ್ಷಿ’ ಧಾರವಾಹಿಯು 2013ರ ಡಿಸೆಂಬರ್ 2ರಂದು ಪ್ರಸಾರ ಆರಂಭಿಸಿತು. ಆ ಬಳಿಕ ಧಾರಾವಾಹಿ ಬರೋಬ್ಬರಿ 6 ವರ್ಷ ಪ್ರಸಾರ ಕಂಡಿತು. ಈ ಧಾರಾವಾಹಿ 2020ರ ಜನವರಿ 3ರಂದು ಈ ಧಾರಾವಾಹಿ ಕೊನೆ ಆಯಿತು. ಬರೋಬ್ಬರಿ 1588 ಎಪಿಸೋಡ್ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತು. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಈಗ ‘ಅಗ್ನಿಸಾಕ್ಷಿ’ ಧಾರಾವಾಹಿ ಮತ್ತೆ ಬರುತ್ತಿದೆ. ಈ ಧಾರಾವಾಹಿ ಪ್ರೋಮೋ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ. ಹಾಗಾದರೆ, ಈ ಧಾರಾವಾಹಿಗೆ ನಾಯಕ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ‘ಅಗ್ನಿಸಾಕ್ಷಿ’ ಧಾರಾವಾಹಿಗೆ ಶಮಂತ್ ಬ್ರೋ ಗೌಡ ನಾಯಕ ಎಂದು ಹೇಳಲಾಗುತ್ತಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ: ‘ನನ್ನನ್ನೇಕೆ ಕುಳ್ಳಿ ಎಂದೆ’; ‘ಅಗ್ನಿಸಾಕ್ಷಿ’ ರೀಯೂನಿಯನ್​ನಲ್ಲಿ ಸುಕೃತಾ-ವೈಷ್ಣವಿ ಸಖತ್ ಫನ್

ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಬ್ರೋ ಗೌಡ ನಟಿಸಿದ್ದರು. ಈ ಧಾರಾವಾಹಿ ಗಮನ ಸೆಳೆಯಿತು. ಈ ಧಾರಾವಾಹಿ ಇತ್ತೀಚೆಗೆ ಪೂರ್ಣಗೊಂಡಿದೆ. ಆ ಬಳಿಕ ಅವರು ಹೊಸ ಜೀವನಕ್ಕೆ ಕಾಲಿಟ್ಟರು. ಅವರು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಮಿಂಚಲು ಅವರು ರೆಡಿ ಆಗಿದ್ದಾರೆ.

ಶಮಂತ್ ಅವರು ಈ ಮೊದಲು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಸಿದ್ದರು. ಅಲ್ಲಿಂದ ಅವರಿಗೆ ಧಾರಾವಾಹಿ ಆಫರ್ ಬಂತು. ಈಗ ನಟನಾಗಿ ಅವರು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್
ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್