ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು; ಮುಗಿಬಿದ್ದ ಪ್ರವಾಸಿಗರು
ಕೊಡಗಿನ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಕಿರು ಜಲಾಶಯವು ಭಾರೀ ಮಳೆಯಿಂದ ಸಂಪೂರ್ಣ ಭರ್ತಿಯಾಗಿದೆ. ಕ್ರಸ್ಟ್ ಗೇಟ್‌ಗಳಿಲ್ಲದ ಕಾರಣ, ನೀರು ನೈಸರ್ಗಿಕವಾಗಿ ಅರ್ಧ ಚಂದ್ರಾಕೃತಿಯಲ್ಲಿ ಧುಮ್ಮಿಕ್ಕಿ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಈ ಕೃತಕ ಜಲಪಾತವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ವಿಡಿಯೋ ನೋಡಿ.
ಕೊಡಗು, ಆಗಸ್ಟ್ 04: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ನದಿ-ತೊರೆಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಜಲಾಶಯಗಳು ಭರ್ತಿಯಾಗುತ್ತಿದ್ದು, ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪವಿರುವ ಚಿಕ್ಲಿಹೊಳೆ ಕಿರು ಜಲಾಶಯ ಸಂಪೂರ್ಣವಾಗಿ ಭರ್ತಿ ಆಗಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕೇವಲ 15 ದಿನಗಳ ಹಿಂದಷ್ಟೇ ನೀರಿಲ್ಲದೆ ಬಿಕೋ ಎನ್ನುತ್ತಿದ್ದ ಜಲಾಶಯ ಕಳೆದ ಒಂದು ವಾರದ ಸತತ ಮಳೆಯಿಂದಾಗಿ ಮೈದುಂಬಿಕೊಂಡಿದೆ. ಜಲಾಶಯ ತುಂಬಿದಾಗ ಈ ಅರ್ಧ ಚಂದ್ರಾಕೃತಿಯ ಕಟ್ಟೆಯ ಮೇಲಿಂದ ನೀರು ಧುಮ್ಮಿಕುವುದನ್ನು ನೋಡುವುದೇ ಚಂದ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 04, 2026 06:24 PM
Follow Us
