AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜ ಹೋದರೂ ಆ ಭಾಷೆ ಮನೆಬಿಟ್ಟು ಹೋಗಿಲ್ಲ: ಧನುಶ್-ಶಾಸ್ತ್ರಿ ಜಗಳದಲ್ಲಿ ಆಗಿದ್ದೇನು?

ನಿನ್ನೆ (ಗುರುವಾರ) ಎಪಿಸೋಡಿನಲ್ಲಿ ಸಾಕಷ್ಟು ವಿಷಯಗಳು ನಡೆದವು. ಚಾಣಾಕ್ಷತನ, ಮೋಸ, ವಂಚನೆ, ತಂತ್ರ, ಕುತಂತ್ರ ಎಲ್ಲವೂ ನಡೆಯಿತು. ಯಾರೋ ಮಾಡಿದ ಕಾರ್ಯಕ್ಕೆ ಇನ್ಯಾರ ನಡುವೆಯೋ ಜಗಳಗಳು ನಡೆದು ಹೋದವು. ಧನುಶ್, ಗಾನವಿಯನ್ನು ನಂಬಿದ ಕಾರಣಕ್ಕೆ ಸಿಂಹದ ಕಿರೀಟ ತಪ್ಪಿಹೋಗಿ ಯಶಸ್​ ಮುಡಿಗೇರಿತು. ಇದು ಧನುಶ್ ಮತ್ತು ಶಾಸ್ತ್ರಿ ನಡುವಿನ ಜಗಳಕ್ಕೆ ಕಾರಣವಾಯ್ತು.

ಮಂಜ ಹೋದರೂ ಆ ಭಾಷೆ ಮನೆಬಿಟ್ಟು ಹೋಗಿಲ್ಲ: ಧನುಶ್-ಶಾಸ್ತ್ರಿ ಜಗಳದಲ್ಲಿ ಆಗಿದ್ದೇನು?
Dhanush Shastri
ಮಂಜುನಾಥ ಸಿ.
|

Updated on: Nov 27, 2026 | 5:57 PM

Share

ಮುಖ್ಯಾಂಶಗಳು

  • ಮಂಜ ಹೋದರು ಹೊಲಸು ಭಾಷೆ ಹೋಗಿಲ್ಲ
  • ಧನುಶ್-ಶಾಸ್ತ್ರಿ ನಡುವೆ ನಡೆದಿದೆ ಜಗಳ
  • ಜಗಳದಲ್ಲಿ ಬಳಕೆ ಆಗಿವೆ ಅವಾಚ್ಯ ಶಬ್ದಗಳು

ಮಾಡರ್ನ್ ಕವಿ ಮಂಜ, ತನ್ನ ಅಶ್ಲೀಲ, ಅವಾಚ್ಯ ಭಾಷೆಯ ಕಾರಣಕ್ಕೆ ಬಿಗ್​​ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡಿದ್ದಾನೆ. ಸುದೀಪ್ ಅವರ ಕರುಣೆಯ ಕಾರಣಕ್ಕೆ ಮತ್ತೊಂದು ಅವಕಾಶ ಸಿಕ್ಕರೂ ಸಹ, ಕೇವಲ ಅತಿಥಿಯಾಗಿ ಬಂದು ಕೆಲ ವಾರ ಮನೆಯಲ್ಲಿದ್ದು ಕಳೆದ ವಾರವಷ್ಟೆ ಮತ್ತೆ ಮನೆಯಿಂದ ಹೊರಗೆ ಹೋಗಿದ್ದಾನೆ ಮಂಜ. ಆದರೆ ಮಂಜ ಮನೆ ಬಿಟ್ಟು ಹೋದರೂ ಅವನು ಬಳಸುತ್ತಿದ್ದ ಭಾಷೆ ಮನೆ ಬಿಟ್ಟು ಹೋಗಿಲ್ಲ. ಬೇರೆ ಕೆಲ ಸ್ಪರ್ಧಿಗಳು ಮತ್ತೆ ಅಂಥಹುದೇ ಭಾಷೆ ಬಳಸುತ್ತಿದ್ದಾರೆ.

ನಿನ್ನೆ (ಗುರುವಾರ) ಎಪಿಸೋಡಿನಲ್ಲಿ ಸಾಕಷ್ಟು ವಿಷಯಗಳು ನಡೆದವು. ಚಾಣಾಕ್ಷತನ, ಮೋಸ, ವಂಚನೆ, ತಂತ್ರ, ಕುತಂತ್ರ ಎಲ್ಲವೂ ನಡೆಯಿತು. ಯಾರೋ ಮಾಡಿದ ಕಾರ್ಯಕ್ಕೆ ಇನ್ಯಾರ ನಡುವೆಯೋ ಜಗಳಗಳು ನಡೆದು ಹೋದವು. ಧನುಶ್, ಗಾನವಿಯನ್ನು ನಂಬಿದ ಕಾರಣಕ್ಕೆ ಸಿಂಹದ ಕಿರೀಟ ತಪ್ಪಿಹೋಗಿ ಯಶಸ್​ ಮುಡಿಗೇರಿತು. ಇದು ಧನುಶ್ ಮತ್ತು ಶಾಸ್ತ್ರಿ ನಡುವಿನ ಜಗಳಕ್ಕೆ ಕಾರಣವಾಯ್ತು.

ಶಾಸ್ತ್ರಿ ಪ್ರತಿಬಾರಿಯಂತೆ ಧನುಶ್ ಅನ್ನು ಆತನ ದಡ್ಡತನದ ಕಾರಣಕ್ಕೆ ರೇಗಿಸಲು ಪ್ರಾರಂಭಿಸಿದ. ಅದಾಗಲೇ ಗಗನ್, ತಾಂಡವ್ ಅವರಿಂದಲೂ ಟೀಕೆ ಎದುರಿಸಿದ್ದ ಧನುಶ್​​, ಒಮ್ಮೆಲೆ ಶಾಸ್ತ್ರಿ ಮೇಲೆ ಸಿಟ್ಟಿನಿಂದ ಉರಿದು ಬಿದ್ದ. ಈ ವೇಳೆ ಧನುಶ್ ಅಂತೂ ‘ಲೋ..’ ಪದಗಳು, ಕನ್ನಡದ ಕೆಲ ಬೈಗುಳದ ಪದಗಳನ್ನು ಶಾಸ್ತ್ರಿಯ ವಿರುದ್ಧ ಬಳಕೆ ಮಾಡಿದರು. ಶಾಸ್ತ್ರಿ ಸಹ ಸುಮ್ಮನೆ ಕೂರಲಿಲ್ಲ, ಪ್ರತಿಯಾಗಿ ಶಾಸ್ತ್ರಿಯೂ ಸಹ ಬೈಗುಳದ ಸುರಿಮಳೆ ಮಾಡಿದರು. ‘ನಾಯಿ‘, ‘ಹುಚ್ಚ ನಾಯಿ’, ‘ಹಚ್ಚ’, ‘ಹುಡುಗಿಯರ ಕಾಲು ನೆಕ್ಕುವವ’ ಹೀಗೆ ಹಲವು ಬೈಗುಳಗಳ ಸುರಿಮಳೆ ಮಾಡಿದರು. ಕೊನೆಗೆ ಧನುಶ್ ಮಾಡಿರುವ ಗಿನ್ನೀಸ್ ರೆಕಾರ್ಡ್​​ ಅನ್ನು ಸಹ ಟೀಕೆ ಮಾಡಿದರು.

ಇದನ್ನೂ ಓದಿ:ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’

ಜಗಳ ಯಾವ ಮಟ್ಟಿಗೆ ಹೋಯ್ತೆಂದರೆ ಧನುಶ್ ಅಂತೂ ಶಾಸ್ತ್ರಿ ಜೊತೆಗೆ ಕೈ-ಕೈ ಮಿಲಾಯಿಸಲು ರೆಡಿಯಾಗಿಬಿಟ್ಟರು. ‘ತಾಕತ್ತಿದ್ದರೆ ಬಾರೋ ನೋಡೋಣ’ ಎನ್ನುತ್ತಾ, ಶಾಸ್ತ್ರಿ ಮೇಲೆ ಜಗಳಕ್ಕೆ ಏರಿ ಹೋದರು. ಶಾಸ್ತ್ರಿ ಬೀನ್ ಬೇನ್ ಮಲಗಿಕೊಂಡೇ ಖಾರವಾದ ಉತ್ತರಗಳನ್ನು ಕೊಡುತ್ತಾ ಧನುಶ್ ಅನ್ನು ಇನ್ನಷ್ಟು ಕೆಣಕಿದರು. ಬಳಿಕ ಗಗನ್ ಮತ್ತು ತಾಂಡವ್ ರಾಮ್ ಅವರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಬೇಕಾಯ್ತು. ಮಾಡರ್ನ್ ಕವಿ ಮಂಜನಷ್ಟು ಹೊಲಸು ಮಾತುಗಳನ್ನು ಧನುಶ್ ಮತ್ತು ಶಾಸ್ತ್ರಿ ಆಡಲಲ್ಲವಾದರೂ ಕೆಲ ಅವಾಚ್ಯ ಪದಗಳನ್ನಂತೂ ಪರಸ್ಪರ ಬಳಸಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು