AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಬಗೆಯ ವೇಷ ಹಾಕಿ, 3 ಪಕ್ಷದ ನಾಮಪತ್ರ ಸಲ್ಲಿಸಿದ ಮಹಿಳೆ; ರಾಜಸ್ಥಾನ ಚುನಾವಣೆಯಲ್ಲೊಂದು ಅಚ್ಚರಿಯ ಘಟನೆ

ರಾಜಸ್ಥಾನದ ಗ್ರಾಮವೊಂದರಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯ ಗಳಿಸಿದ ಮಹಿಳೆಯೊಬ್ಬರು 3 ನಾಮಪತ್ರಗಳನ್ನು ಸಲ್ಲಿಸಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಇದರಲ್ಲಿ 2 ನಾಮಪತ್ರಗಳು ಪ್ರಮುಖ ವಿರೋಧಿ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಲ್ಲಿಕೆಯಾಗಿದ್ದರೆ, ಮತ್ತೊಂದು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಕೆಯಾಗಿದೆ. ವತಿ ಕುಮಾರಿ ಎಂಬ ಮಹಿಳೆ ಕೆಂಪು ಬಣ್ಣದ ಸೀರೆ, ಹಸಿರು ಸಲ್ವಾರ್, ಹಳದಿ ಬಣ್ಣದ ಸೀರೆ ಹೀಗೆ 3 ಬಗೆಯ ಡ್ರೆಸ್ ಧರಿಸಿ ಬಂದು ಮುಖ ಮುಚ್ಚಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ. ಈ ಮಹಿಳೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜಯಗಳಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿರುವುದು ವಿಪರ್ಯಾಸ ಹಾಗೂ ವಿಚಿತ್ರ!

3 ಬಗೆಯ ವೇಷ ಹಾಕಿ, 3 ಪಕ್ಷದ ನಾಮಪತ್ರ ಸಲ್ಲಿಸಿದ ಮಹಿಳೆ; ರಾಜಸ್ಥಾನ ಚುನಾವಣೆಯಲ್ಲೊಂದು ಅಚ್ಚರಿಯ ಘಟನೆ
Vati Kumari
ಸುಷ್ಮಾ ಚಕ್ರೆ
|

Updated on: Nov 27, 2026 | 5:49 PM

Share

ಜೈಪುರ, ನವೆಂಬರ್ 27: ಕೆಂಪು ಸೀರೆ, ಹಸಿರು ಸಲ್ವಾರ್ ಸೂಟ್ ಮತ್ತು ಹಳದಿ ಸೀರೆ ಹೀಗೆ 3 ಬಗೆಯ ಡ್ರೆಸ್ ಧರಿಸಿ ಬಂದ ರಾಜಸ್ಥಾನದ ಮಹಿಳೆಯೊಬ್ಬರು ಸ್ಥಳೀಯ ಸಂಸ್ಥೆ ಚುನಾವಣೆಗೆ 3 ಪಕ್ಷಗಳಿಂದ ನಾಮಪತ್ರ ಸಲ್ಲಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿಯಿಂದಲೂ ಇದೇ ಮಹಿಳೆ ಸ್ಪರ್ಧಿಸಿದ್ದು, ಕಾಂಗ್ರೆಸ್​ನಿಂದಲೂ ಈಕೆ ನಾಮಪತ್ರ ಸಲ್ಲಿಸಿದ್ದರು. ಬಳಿಕ, ಪಕ್ಷೇತರ ಅಭ್ಯರ್ಥಿಯಾಗಿಯೂ ಈಕೆ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಥಳೀಯ ಚುನಾವಣೆಯಲ್ಲಿ ಈಕೆ ಗೆಲುವು ಸಾಧಿಸಿದ್ದಾರೆ. ಆದರೆ, ಚುನಾವಣೆ ಮುಗಿದು, ಫಲಿತಾಂಶ ಪ್ರಕಟವಾಗುವವರೆಗೂ ಈಕೆಯ ಈ ತ್ರಿಬಲ್ ಆ್ಯಕ್ಟಿಂಗ್ ಯಾರ ಗಮನಕ್ಕೂ ಬರಲಿಲ್ಲವೇ? ಎಂಬ ದೊಡ್ಡ ಪ್ರಶ್ನೆ ಎದ್ದಿದೆ.

ವತಿ ಕುಮಾರಿ ಎಂಬ ಮಹಿಳೆ ಮಾಜಿ ಕಾಂಗ್ರೆಸ್ ಶಾಸಕ ವಾಜಿಬ್ ಅಲಿ ಅವರ ಸಮ್ಮುಖದಲ್ಲಿ ತಮ್ಮ ಮೊದಲ ನಾಮಪತ್ರವನ್ನು ಸಲ್ಲಿಸಿದರು. ಕೆಂಪು ಸೀರೆ ಧರಿಸಿದ್ದ ಕುಮಾರಿ, ನಾಮಪತ್ರ ದಾಖಲೆಗಳಿಗೆ ಸಹಿ ಹಾಕುವಾಗ ಸೀರೆಯ ಸೆರಗಿನಿಂದ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು. ನಂತರ ಮತ್ತೊಂದು ನಾಮಪತ್ರ ಸಲ್ಲಿಸಲು ಮರಳಿದ ಅವರು, ಈ ಬಾರಿ ಹಸಿರು ಸಲ್ವಾರ್ ಸೂಟ್ ಧರಿಸಿದ್ದರು. ದುಪಟ್ಟಾದ ಹಿಂದೆ ಮುಖವನ್ನು ಮರೆಮಾಚಿಕೊಂಡಿದ್ದ ಅವರು, ಶಾಸಕ ಜವಾಹರ್ ಸಿಂಗ್ ಬೇಧಮ್ ಅವರ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದರು. ಮೂರನೇ ಬಾರಿ ಅವರು ಹಳದಿ ಸೀರೆಯಲ್ಲಿ ಕಾಣಿಸಿಕೊಂಡರು. ಈ ವೇಳೆ ಕುಮಾರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಬಾರಿ ಆಕೆ ತಮ್ಮ ಮುಖವನ್ನು ಮುಚ್ಚಿಕೊಂಡಿರಲಿಲ್ಲ.

ಇದನ್ನೂ ಓದಿ: ‘ಉತ್ತರ ಪ್ರದೇಶಕ್ಕೆ ಮುಸ್ಲಿಂ ಉಪಮುಖ್ಯಮಂತ್ರಿ’; ಚುನಾವಣೆಗೂ ಮುನ್ನ ಚಂದ್ರಶೇಖರ್ ಆಜಾದ್, ಓವೈಸಿ ದೊಡ್ಡ ಭರವಸೆ

ಈ ಹಿಂದೆ ಬ್ರಜ್‌ನಗರ ಪಂಚಾಯತ್ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಈ ಮಹಿಳೆಯ ಮಾವ ಅರ್ಜುನ್ ಪ್ರಧಾನ್ ಅವರೇ ಈ ಚುನಾವಣಾ ವ್ಯವಸ್ಥೆಗಳನ್ನು ನಿರ್ವಹಿಸಿದ್ದರು. ಬಿಜೆಪಿಯೂ ಕುಮಾರಿ ಅವರಿಗೆ ಬೆಂಬಲ ನೀಡಿತ್ತು ಎಂದು ವರದಿಯಾಗಿದ್ದು, ತದನಂತರ ಅವರಿಗೆ ಗೆಲುವಿನ ಪ್ರಮಾಣಪತ್ರವನ್ನು ನೀಡಲಾಯಿತು. ವರದಿಗಳ ಪ್ರಕಾರ, ಒಂದೇ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಕುಮಾರಿ ಅವರಿಗೆ ಆತ್ಮವಿಶ್ವಾಸ ಇರಲಿಲ್ಲ. ಹೀಗಾಗಿ, ಅವರು ಇನ್ನೂ 2 ನಾಮಪತ್ರಗಳನ್ನು ಸಲ್ಲಿಸಲು ನಿರ್ಧರಿಸಿದರು ಎನ್ನಲಾಗಿದೆ.

ಇದನ್ನೂ ಓದಿ: ಯುವಕರಿಗೆ 5 ಸಾವಿರ ರೂ. ನಿರುದ್ಯೋಗ ಭತ್ಯೆ, 25 ಲಕ್ಷ ಸರ್ಕಾರಿ ಉದ್ಯೋಗ; ಯುಪಿ ಚುನಾವಣೆಗೆ ಸಮಾಜವಾದಿ ಪಕ್ಷ ಪ್ರಣಾಳಿಕೆ ಬಿಡುಗಡೆ

ನಿಯಮಗಳ ಪ್ರಕಾರ, ಒಬ್ಬ ಅಭ್ಯರ್ಥಿಯು ಒಂದೇ ವಾರ್ಡ್ ಅಥವಾ ಕ್ಷೇತ್ರಕ್ಕೆ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಆದರೆ, ಅವರು ಕೇವಲ ಒಂದು ರಾಜಕೀಯ ಪಕ್ಷವನ್ನು ಮಾತ್ರ ಪ್ರತಿನಿಧಿಸಬಹುದು ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು. ಆದರೆ, ಈ ಮಹಿಳೆ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು