AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್ ನೋಡಿ

ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್ ನೋಡಿ

ರಾಮ್​, ಮೈಸೂರು
| Edited By: |

Updated on: Nov 09, 2026 | 1:49 PM

Share

ಮೈಸೂರು ರಾಜಮನೆತನ ಮತ್ತು ಸರ್ಕಾರದ ನಡುವಿನ ಅರಮನೆ ಸಂಘರ್ಷದ ಕುರಿತು ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ವೈಯಕ್ತಿಕ ಟೀಕೆಗಳು ಮತ್ತು ಆಸ್ತಿ ವಿಷಯಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ದಸರಾ ಸುಧಾರಣೆಗೆ ರಾಜಕೀಯಾತೀತವಾಗಿ ಕೆಲಸ ಮಾಡಲು ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಕಳೆದ ದಸರಾದಲ್ಲಿ ಆದ ಲೋಪಗಳನ್ನು ಮುಂದಿನ ದಸರಾದಲ್ಲಿ ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು, ನವೆಂಬರ್ 09: ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಅರಮನೆ ವಿವಾದ ಹಾಗೂ ದಸರಾ ನಿರ್ವಹಣೆಯ ಕುರಿತು ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ವೈಯಕ್ತಿಕ ಟೀಕೆಗಳು ಮತ್ತು ಆಸ್ತಿ ವಿಷಯಗಳು ಸಾರ್ವಜನಿಕ ಚರ್ಚೆಗೆ ಅಪ್ರಸ್ತುತವಾಗಿದ್ದು, ಇವುಗಳ ಕುರಿತು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದಲ್ಲಿನ ಕಾನೂನು ಪ್ರಕಾರದ ಆದೇಶವೇ ಅಂತಿಮ ಸತ್ಯ ಎಂದಿದ್ದಾರೆ.

ದಸರಾ ಮಹೋತ್ಸವದ ಕುರಿತು ಮಾತನಾಡಿ, ಈ ಬಾರಿಯ ದಸರಾ ಮುಗಿದಿದ್ದು, ಅದರ ಲೋಪಗಳ ಚರ್ಚೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಅವರ ತಾಯಿ ಈಗಾಗಲೇ ಹೇಳಿದ್ದಾರೆ. ಆದಾಗ್ಯೂ, ಮುಂದಿನ ದಸರಾಗಳನ್ನು ಸುಧಾರಿಸುವ ದೃಷ್ಟಿಯಿಂದ ತಾವು ಕಾರ್ಯನಿರ್ವಹಿಸುವುದಾಗಿ ಯದುವೀರ್ ತಿಳಿಸಿದ್ದಾರೆ. ದಸರಾದಿಂದ ರಾಜಕೀಯ ಲಾಭದ ನಿರೀಕ್ಷೆ ಇಲ್ಲ ಎಂದು ಹೇಳಿದ ಅವರು, ದಸರಾ ಯಶಸ್ವಿಯಾದರೆ ಮೈಸೂರಿಗೇ ಲಾಭ ಎಂದಿದ್ದಾರೆ. ಅರಮನೆ ಆಸ್ತಿ ವಿವಾದಗಳು ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ, ನ್ಯಾಯಾಲಯದ ತೀರ್ಮಾನದ ನಂತರವೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಾಗಿ ಒಡೆಯರ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More