20 ವರ್ಷದ ಹಿಂದೆ ‘ರಾಮಾಯಣ’ ಸಿನಿಮಾ ಘೋಷಿಸಿದ್ದ ಸಲ್ಲು, ನಿಲ್ಲಿಸಿದ್ದು ಏಕೆ?
ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ ಸಿನಿಮಾ 500 ಕೋಟಿ ಕ್ಲಬ್ ಸೇರಿಕೊಂಡಿದ್ದು, ಈ ವಾರದ ಅಂತ್ಯದೊಳಗಾಗಿ ಸಿನಿಮಾ 1000 ಕೋಟಿ ಕಲೆಕ್ಷನ್ ಗಡಿ ದಾಟುವುದು ಖಾತ್ರಿ ಎನ್ನಲಾಗುತ್ತಿದೆ. ಭಾರಿ ಅದ್ಧೂರಿಯಾಗಿ ‘ರಾಮಾಯಣ’ ಸಿನಿಮಾ ಅನ್ನು ತೆರೆಗೆ ತರಲಾಗಿದೆ. ಸಿನಿಮಾದ ಗುಣಮಟ್ಟದ ಬಗ್ಗೆ, ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿರುವ ಕಲಾವಿದರ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಂದಹಾಗೆ ಸುಮಾರು 20 ವರ್ಷಗಳ ಹಿಂದೆ ಸಲ್ಮಾನ್ ಖಾನ್ ಸಹ ‘ರಾಮಾಯಣ’ ಸಿನಿಮಾ ಮಾಡಲು ಮುಂದಾಗಿ, ಘೋಷಣೆ ಸಹ ಮಾಡಿದ್ದರಂತೆ.

ಮುಖ್ಯಾಂಶಗಳು
- ‘ರಾಮಾಯಣ’ ಸಿನಿಮಾ ಬಗ್ಗೆ ಸಲ್ಮಾನ್ ಖಾನ್
- ರಾಮಾಯಣ ಸಿನಿಮಾ ಮಾಡಲು ಇಚ್ಛಿಸಿದ್ದ ಸಲ್ಮಾನ್ ಖಾನ್
- 20 ರ್ಷಗಳ ಹಿಂದಿನ ಸಿನಿಮಾ
ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟನೆ ಮಾಡಿರುವ ‘ರಾಮಾಯಣ’ ಸಿನಿಮಾ ಪ್ರಸ್ತುತ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ ಸಿನಿಮಾ 500 ಕೋಟಿ ಕ್ಲಬ್ ಸೇರಿಕೊಂಡಿದ್ದು, ಈ ವಾರದ ಅಂತ್ಯದೊಳಗಾಗಿ ಸಿನಿಮಾ 1000 ಕೋಟಿ ಕಲೆಕ್ಷನ್ ಗಡಿ ದಾಟುವುದು ಖಾತ್ರಿ ಎನ್ನಲಾಗುತ್ತಿದೆ. ಭಾರಿ ಅದ್ಧೂರಿಯಾಗಿ ‘ರಾಮಾಯಣ’ ಸಿನಿಮಾ ಅನ್ನು ತೆರೆಗೆ ತರಲಾಗಿದೆ. ಸಿನಿಮಾದ ಗುಣಮಟ್ಟದ ಬಗ್ಗೆ, ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿರುವ ಕಲಾವಿದರ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಂದಹಾಗೆ ಸುಮಾರು 20 ವರ್ಷಗಳ ಹಿಂದೆ ಸಲ್ಮಾನ್ ಖಾನ್ ಸಹ ‘ರಾಮಾಯಣ’ ಸಿನಿಮಾ ಮಾಡಲು ಮುಂದಾಗಿ, ಘೋಷಣೆ ಸಹ ಮಾಡಿದ್ದರಂತೆ.
ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಡಿಸೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರದಲ್ಲಿ ಸಲ್ಮಾನ್ ಖಾನ್ ತೊಡಗಿಕೊಂಡಿದ್ದಾರೆ. ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಲ್ಮಾನ್ ಖಾನ್ ಅವರಿಗೆ ‘ರಾಮಾಯಣ’ ಸಿನಿಮಾದ ಬಗ್ಗೆ ಪ್ರಶ್ನೆ ಕೇಳಲಾಯ್ತು. ಆಗ, ತಾವು 20 ವರ್ಷಗಳ ಹಿಂದೆ ‘ರಾಮಾಯಣ’ ಸಿನಿಮಾ ಘೋಷಣೆ ಮಾಡಿದ್ದಾಗಿಯೂ ಹಾಗೂ ಆ ಸಿನಿಮಾ ಸೆಟ್ಟೇರುವ ಮೊದಲೇ ನಿಂತು ಹೋಗಿದ್ದಾಗಿಯೂ ಹೇಳಿದ್ದಾರೆ.
ರಾಮಾಯಣದಲ್ಲಿ ಎಂದಾದರೂ ಅವಕಾಶ ಸಿಕ್ಕರೆ ಭಗವಾನ್ ರಾಮನ ಪಾತ್ರವನ್ನು ಮಾಡಲು ಇಷ್ಟಪಡುತ್ತೀರಾ ಎಂದು ಸಲ್ಮಾನ್ ಖಾನ್ ಅನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಲ್ಮಾನ್, ‘ನಿಮಗೆ (ಪತ್ರಕರ್ತರಿಗೆ) ಬಹುಶಃ ನೆನಪಿರಬಹುದು, 20 ವರ್ಷಗಳ ಹಿಂದೆ ನಾವು ‘ರಾಮಾಯಣ’ ಚಿತ್ರವನ್ನು ಮಾಡಬೇಕಿತ್ತು. ನಾನೂ ಮತ್ತು ನನ್ನ ಸಹೋದರ (ಸೊಹೈಲ್ ಖಾನ್) ಒಂದು ರಾತ್ರಿ ಚಿತ್ರವನ್ನು ಘೋಷಿಸಿ ಹೊರಟೆವು ಮತ್ತು ಕೆಲವು ಪತ್ರಕರ್ತರು ಮಾರನೇಯ ದಿನ ಪತ್ರಿಕೆಗಳಲ್ಲಿ ನನ್ನ ಹಾಗೂ ನನ್ನ ತಮ್ಮನ ಚಿತ್ರಗಳನ್ನು ಮುದ್ರಿಸಿ, ನಮ್ಮ ತಲೆಯ ಮೇಲೆ ಎರಡು ಕಿರೀಟಗಳನ್ನು ಕೊಂಚ ವಕ್ರವಾಗಿ ಇರಿಸಿ, ‘ಇವರೇ ನಮ್ಮ ರಾಮ ಮತ್ತು ಇವರೇ ನಮ್ಮ ಲಕ್ಷ್ಮಣ’ ಎಂದು ವ್ಯಂಗ್ಯವಾಗ ಬರೆದರು. ಹಾಗಾಗಿ ನಾವು ಅಲ್ಲೇ ಆ ಚಿತ್ರವನ್ನು ಕೈಬಿಟ್ಟೆವು’ ಎಂದರು.
ಇದನ್ನೂ ಓದಿ:‘ಯಶ್ ಪ್ರೀತಿಯ ವಿಲನ್’; ರಾವಣನ ಪಾತ್ರ ನೋಡಿ ಖ್ಯಾತ ನಿರ್ದೇಶಕ ಫಿದಾ
ಸಲ್ಮಾನ್ ಖಾನ್ ಅವರು ‘ರಾಮಾಯಣ’ ಸಿನಿಮಾ ಅನ್ನು ಮಾಡಲು ಬಯಸಿದ್ದರಂತೆ. ಆದರೆ ಪತ್ರಕರ್ತರು ಅವರನ್ನು ರಾಮನ ಪಾತ್ರದಲ್ಲಿ ನೋಡಲು ಇಷ್ಟಪಡಲಿಲ್ಲ ಬದಲಿಗೆ ಟೀಕೆ ಸಹ ಮಾಡಿದ್ದರು. ಹಾಗಾಗಿ ಅವರು ಆ ಸಿನಿಮಾ ಅನ್ನು ನಿಲ್ಲಿಸಲಾಯ್ತಂತೆ. ಇತ್ತೀಚೆಗೆ ಸಹ ಸಲ್ಮಾನ್ ಖಾನ್ ಅವರು ‘ರಾಮಾಯಣ’ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಅದೇ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರಿಗೆ ಅವರದ್ದೇ ಜೀವನ ಆಧರಿಸಿದ ಸಿನಿಮಾ ಬರುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಲಾಯ್ತು. ಆದರೆ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ ಸಲ್ಮಾನ್ ಖಾನ್, ‘ನನ್ನ ಜೀವನದ ಸಿನಿಮಾ ಮಾಡಿದರೆ ಬಹಳ ಜನ ಮುಳುಗಿ ಹೋಗುತ್ತಾರೆ’ ಎಂದು ವ್ಯಂಗ್ಯವಾಗಿ ಏಳಿದ್ದಾರೆ.
ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಈ ಮೊದಲು ಈ ಸಿನಿಮಾಕ್ಕೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂದು ಹೆಸರಿಡಲಾಗಿತ್ತು. ಆದರೆ ಬಳಿಕ ಹೆಸರನ್ನು ಬದಲಾವಣೆ ಮಾಡಲಾಯ್ತು. ಹಲವು ಅಡೆ-ತಡೆಗಳ ಬಳಿಕ ಇದೀಗ ಡಿಸೆಂಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




