AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಶ್​ ಪ್ರೀತಿಯ ವಿಲನ್’; ರಾವಣನ ಪಾತ್ರ ನೋಡಿ ಖ್ಯಾತ ನಿರ್ದೇಶಕ ಫಿದಾ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಶಂಕರ್ ಕೊಂಡಾಡಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಅಭಿನಯವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ದೃಶ್ಯ ವೈಭವವನ್ನು ತಾವು ಎಂದೂ ನೋಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಅವರ ವಿಮರ್ಶೆಗೆ ಮೆಚ್ಚುಗೆ ಸಿಕ್ಕಿದೆ.

‘ಯಶ್​ ಪ್ರೀತಿಯ ವಿಲನ್’; ರಾವಣನ ಪಾತ್ರ ನೋಡಿ ಖ್ಯಾತ ನಿರ್ದೇಶಕ ಫಿದಾ
ಯಶ್
ರಾಜೇಶ್ ದುಗ್ಗುಮನೆ
|

Updated on:Nov 07, 2026 | 11:53 AM

Share

ಮುಖ್ಯಾಂಶಗಳು

  • ಯಶ್ ನಟನೆಗೆ ಶಂಕರ್ ಫಿದಾ
  • ಅಂತಾರಾಷ್ಟ್ರೀಯ ಮಟ್ಟದ ದೃಶ್ಯ ವೈಭವ
  • 2028ಕ್ಕೆ ಬರಲಿದೆ ಎರಡನೇ ಭಾಗ

‘ರಾಮಾಯಣ’ ಸಿನಿಮಾದಲ್ಲಿ ನಟ ಯಶ್ ಅವರ ನಟನೆಯನ್ನು ಅನೇಕರು ಮೆಚ್ಚಿಕೊಳ್ಳುತ್ತಿದ್ದಾರೆ. ರಾವಣನಾಗಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈಗ ತಮಿಳು ನಿರ್ದೇಶಕ ಶಂಕರ್ ಅವರ ಸರದಿ. ನಿತೇಶ್ ತಿವಾರಿ ನಿರ್ದೇಶನ, ಯಶ್ ಅವರ ಅಭಿನಯ ಹಾಗೂ ದೃಶ್ಯ ವೈಭವವನ್ನು ಅವರು ಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.

‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ನವೆಂಬರ್ 5 ರಂದು ಬಿಡುಗಡೆಯಾಗಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ಉತ್ತಮ ಗಳಿಕೆ ಕಾಣುತ್ತಿದೆ. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಿದೆ.

ಸಿನಿಮಾ ವೀಕ್ಷಿಸಿದ ಬಳಿಕ ಶಂಕರ್ ತಮ್ಮ ಎಕ್ಸ್ ಖಾತೆಯಲ್ಲಿ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಭಾರತೀಯ ಸಿನಿಮಾದಲ್ಲಿ ಇಂತಹ ದೃಶ್ಯಗಳನ್ನು ತಾವು ಎಂದೂ ನೋಡಿಲ್ಲ ಎಂದಿದ್ದಾರೆ. ಪ್ರತಿಯೊಂದು ಚೌಕಟ್ಟಿನಲ್ಲೂ ಯಶ್ ನಟನೆ ಅದ್ಭುತವಾಗಿದೆ. ರಾವಣನ ಪಾತ್ರದಲ್ಲಿ ಯಶ್ ಎಲ್ಲರಿಗೂ ಇಷ್ಟವಾಗುತ್ತಾರೆ. ಅವರು ಲವೆಬಲ್ ವಿಲನ್’ ಎಂದಿದ್ದಾರೆ.

ಚಿತ್ರದ ಗ್ರಾಫಿಕ್ಸ್ ಮತ್ತು ನಿರ್ಮಾಣ ಮೌಲ್ಯವನ್ನು ಶಂಕರ್ ಕೊಂಡಾಡಿದ್ದಾರೆ. ಎ.ಆರ್. ರೆಹಮಾನ್ ಮತ್ತು ಹಾನ್ಸ್ ಝಿಮ್ಮರ್ ಅವರ ಸಂಗೀತವನ್ನು ಶ್ಲಾಘಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರ ಪ್ರಯತ್ನಕ್ಕೆ ಧನ್ಯವಾದ ತಿಳಿಸಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ: ‘ಬಜೆಟ್, ವಿಎಫ್​​ಎಕ್ಸ್ ಬಗ್ಗೆ ಚರ್ಚೆ ಸರಿಯಲ್ಲ’; ‘ರಾಮಾಯಣ’ ಬೆಂಬಲಿಸಿದ ಸಲ್ಮಾನ್ ಖಾನ್

ಈ ಹಿಂದೆ ಎಸ್.ಎಸ್. ರಾಜಮೌಳಿ ಮತ್ತು ಸಂದೀಪ್ ರೆಡ್ಡಿ ವಂಗ ಕೂಡ ಚಿತ್ರವನ್ನು ಹೊಗಳಿದ್ದರು. ಬೃಹತ್ ಮಟ್ಟದಲ್ಲಿ ಸಿನಿಮಾವನ್ನು ತೆರೆಗೆ ತಂದಿದ್ದಕ್ಕಾಗಿ ತಂಡಕ್ಕೆ ಶುಭಾಶಯ ತಿಳಿಸಿದ್ದರು. ಚಿತ್ರದ ಕೊನೆಯಲ್ಲಿ ಸನ್ನಿ ಡಿಯೋಲ್ ಅವರ ಹನುಮಂತನ ಪಾತ್ರದ ಪರಿಚಯವಿದೆ. ರಾಮಾಯಣ ಎರಡನೇ ಭಾಗವು 2028 ರಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:50 am, Sat, 7 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಏರ್​ಪೋರ್ಟ್ ಪ್ರಯಾಣಿಕರಿಗೆ ಇಂದಿನಿಂದ ತಟ್ಟಲಿದೆ ಟ್ರಾಫಿಕ್ ಬಿಸಿ
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಇಂದು ಈ ರಾಶಿಯವರು ನಿಮ್ಮ ಕೋಪವನ್ನು ಹತೋಟಿಯಲ್ಲಿಡಲೇಬೇಕು!
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ