AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಜೆಟ್, ವಿಎಫ್​​ಎಕ್ಸ್ ಬಗ್ಗೆ ಚರ್ಚೆ ಸರಿಯಲ್ಲ’; ‘ರಾಮಾಯಣ’ ಬೆಂಬಲಿಸಿದ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ 'ರಾಮಾಯಣ' ಸಿನಿಮಾದ 4,000 ಕೋಟಿ ಬಜೆಟ್ ಚರ್ಚೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮಾಯಣವನ್ನು ಕೇವಲ ವಿಎಫ್‌ಎಕ್ಸ್ ಮತ್ತು ಹಣದ ಆಧಾರದಲ್ಲಿ ನೋಡಬಾರದು. ಅದನ್ನು ಶ್ರೀರಾಮ, ಸೀತೆ ಹಾಗೂ ರಾವಣನಂತಹ ಪವಿತ್ರ ಪಾತ್ರಗಳು ಮತ್ತು ಮಹಾಕಾವ್ಯದ ಮೌಲ್ಯಗಳ ಹಿನ್ನೆಲೆಯಲ್ಲಿ ಚರ್ಚಿಸಬೇಕು ಎಂದು ಸಲ್ಲು ಅಭಿಪ್ರಾಯಪಟ್ಟಿದ್ದಾರೆ.

‘ಬಜೆಟ್, ವಿಎಫ್​​ಎಕ್ಸ್ ಬಗ್ಗೆ ಚರ್ಚೆ ಸರಿಯಲ್ಲ’; ‘ರಾಮಾಯಣ’ ಬೆಂಬಲಿಸಿದ ಸಲ್ಮಾನ್ ಖಾನ್
ಸಲ್ಮಾನ್​-ಯಶ್
ರಾಜೇಶ್ ದುಗ್ಗುಮನೆ
|

Updated on:Nov 07, 2026 | 7:28 AM

Share

ಮುಖ್ಯಾಂಶಗಳು

  • ರಾಮಾಯಣ ಬಜೆಟ್ ಚರ್ಚೆಗೆ ಸಲ್ಲು ಬ್ರೇಕ್
  • ಬೊಂಬಾಟ್ ಹೇಳಿಕೆ ನೀಡಿದ ಬಾಲಿವುಡ್ ಸುಲ್ತಾನ್
  • ಮಾತೃಭೂಮಿ ವೇದಿಕೆಯಲ್ಲಿ ಸಲ್ಮಾನ್ ಖಾನ್

ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಬಿಗ್ ಬಜೆಟ್ ಎಂಬ ಕಾರಣಕ್ಕೆ ಚರ್ಚೆಯಲ್ಲಿದೆ. ಈ ಸಿನಿಮಾಗೆ ಎರಡು ಪಾರ್ಟ್​ಗಳಿಂದ ಸುಮಾರು 4,000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರ ಹೇಳಿದ್ದರು. ಈ ವಿಷಯವನ್ನು ಕೆಲವರು ಟೀಕೆ ಮಾಡಿದ್ದರು. ಈ ವಿಷಯದ ಬಗ್ಗೆ ನಟ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಬಜೆಟ್ ಕುರಿತ ಚರ್ಚೆಗಳ ಬಗ್ಗೆ ಅವರು ಅಸಮಧಾನ ಹೊರಹಾಕಿದ್ದಾರೆ. ಸಿನಿಮಾವನ್ನು ಕೇವಲ ಬಜೆಟ್ ಮತ್ತು ವಿಎಫ್‌ಎಕ್ಸ್ ಆಧಾರದ ಮೇಲೆ ಅಳೆಯುವುದು ಸರಿಯಲ್ಲ ಎಂದು ಸಲ್ಮಾನ್ ಹೇಳಿದ್ದಾರೆ.

ತಮ್ಮ ಮುಂಬರುವ ‘ ಮಾತೃಭೂಮಿ’ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಲು, ರಾಮಾಯಣ ಮಹಾಕಾವ್ಯದ ನಿಜವಾದ ಮೌಲ್ಯವನ್ನು ನೆನಪಿಸಿದ್ದಾರೆ. ‘ರಾಮಾಯಣ ಸಿನಿಮಾವನ್ನು ಅದರ ಕಥೆ ಮತ್ತು ಪಾತ್ರಗಳ ಆಧಾರದ ಮೇಲೆ ಚರ್ಚಿಸಬೇಕ ಹೊರತು, ಅದಕ್ಕೆ ತಗುಲಿದ ನಿರ್ಮಾಣ ವೆಚ್ಚ ಅಥವಾ ವಿಎಫ್‌ಎಕ್ಸ್ ಆಧಾರದ ಮೇಲಲ್ಲ. ಈ 4,000 ಕೋಟಿ ಬಜೆಟ್ ಹಾಗೂ ವಿಎಫ್‌ಎಕ್ಸ್ ಸುದ್ದಿ ಮಾಡುವುದು ನನಗೆ ಸರಿಯೆನಿಸುತ್ತಿಲ್ಲ. ಶ್ರೀರಾಮ, ಸೀತೆಯಂತಹ ಪವಿತ್ರ ಪಾತ್ರಗಳ ಹಿನ್ನೆಲೆಯಲ್ಲಿ ಈ ಚಿತ್ರದ ಚರ್ಚೆಯಾಗಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಶ್ರೀರಾಮನ ಗುಣಗಳನ್ನು ಸ್ಮರಿಸಿದ ಸಲ್ಮಾನ್ ಖಾನ್, ತಮ್ಮ ‘ಮಾತೃಭೂಮಿ’ ಚಿತ್ರದ ಪಾತ್ರಕ್ಕೂ ಶ್ರೀರಾಮನ ಆದರ್ಶಗಳಿಗೂ ಹೋಲಿಕೆ ಮಾಡಿದ್ದಾರೆ. ‘ಶ್ರೀರಾಮನಲ್ಲಿ ಶ್ರೇಷ್ಠ ಪತಿ, ಶ್ರೇಷ್ಠ ಮಗ, ಶ್ರೇಷ್ಠ ಸಹೋದರ ಹಾಗೂ ಅತ್ಯುತ್ತಮ ಯೋಧನ ಗುಣಗಳಿದ್ದವು. ನನ್ನ ಮುಂಬರುವ ಸಿನಿಮಾದ ಪಾತ್ರದಲ್ಲೂ ಸಹ ಇಂತಹದೇ ಅದ್ಭುತ ಗುಣಗಳನ್ನು ಕಾಣಬಹುದು’ ಎಂದು ಸಲ್ಮಾನ್ ಖಾನ್ ವಿವರಿಸಿದ್ದಾರೆ.

ತಮ್ಮ ಹಳೆಯ ನೆನಪೊಂದನ್ನು ಹಂಚಿಕೊಂಡ ಸಲ್ಲು, ಸುಮಾರು 20 ವರ್ಷಗಳ ಹಿಂದೆ ತಾವು ಮತ್ತು ತಮ್ಮ ಸಹೋದರ ರಾಮಾಯಣ ಆಧರಿತ ಸಿನಿಮಾದಲ್ಲಿ ನಟಿಸಬೇಕಿತ್ತು ಎಂದಿದ್ದಾರೆ. ‘20 ವರ್ಷಗಳ ಹಿಂದೆ ನಾವು ರಾಮಾಯಣ ಸಿನಿಮಾ ಮಾಡಲು ನಿರ್ಧರಿಸಿದ್ದೆವು. ಆದರೆ ಸಿನಿಮಾ ಪ್ರಕಟಿಸಿ ತಡರಾತ್ರಿ ಹೊರಬಂದ ನಮ್ಮ ಫೋಟೋಗಳಿಗೆ ಅಂದಿನ ಮಾಧ್ಯಮಗಳು ತಲೆಗೆ ಕಿರೀಟ ಹಾಕಿ ‘ಇವರೇ ನಮ್ಮ ರಾಮ-ಲಕ್ಷ್ಮಣ’ ಎಂದು ಬರೆದಿದ್ದವು. ಆ ವರದಿಯನ್ನು ನೋಡಿ ನಾವು ಆ ಸಿನಿಮಾವನ್ನೇ ಕೈಬಿಟ್ಟಿದ್ದೆವು’ ಎಂದು ಅವರು ಹಳೆಯ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎರಡೇ ದಿನಕ್ಕೆ 221 ಕೋಟಿ ರೂಪಾಯಿ ಗಳಿಸಿದ ‘ರಾಮಾಯಣ’ ಸಿನಿಮಾ; ಕನ್ನಡದಲ್ಲೆಷ್ಟು?

ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಆರಂಭದಲ್ಲಿ ನವೆಂಬರ್ 20 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ಬಾಕಿ ಇರುವ ಕಾರಣ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈಗ ಈ ಬಹುನಿರೀಕ್ಷಿತ ಚಿತ್ರವು ಡಿಸೆಂಬರ್ 4ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:27 am, Sat, 7 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More