‘ಮಚ್ಚಿಲ್ಲ-ಕೊಚ್ಚಲ್ಲ, ಲವ್ ಇಲ್ಲ-ಗೋಳಲ್ಲ‘: ಇದು ಸುದೀಪ್-ಪ್ರೇಮ್ ಹೊಸ ಸಿನಿಮಾ
ಸುದೀಪ್ ಹಾಗೂ ಪ್ರೇಮ್ ಅವರ ಈ ಸಿನಿಮಾಕ್ಕೆ ‘ದಾದಾ ಆನ್ ಹಾಲಿಡೇ’ ಎಂದು ಹೆಸರಿಡಲಾಗಿದೆ. ಟೈಟಲ್ ಪೋಸ್ಟರ್ನಲ್ಲಿ ಸುದೀಪ್ ಅವರು ಲುಂಗಿ ಕಟ್ಟಿ, ಅದಕ್ಕೊಂದು ದಪ್ಪ ಬೆಲ್ಟು ಕಟ್ಟಿ, ಬಣ್ಣ ಬಣ್ಣದ ಶರ್ಟು ಧರಿಸಿ, ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಥೇಟ್ ಹಳೆಯ ಕಾಲದ ರೌಡಿ ರೀತಿ ಕಾಣುತ್ತಿದ್ದಾರೆ. ಪೋಸ್ಟರ್ನಲ್ಲಿ ನಾಯಿ ಸಹ ಒಂದಿದೆ. ಜೊತೆಗೆ ಒಂದು ಬೋರ್ಡ್ ಸಹ ಇದ್ದು, ಬೋರ್ಡ್ ಮೇಲೆ ದಾದನಿಗೆ ಕೆಲವು ನಿಯಮಗಳನ್ನು ಸಹ ಬರೆಯಲಾಗಿದೆ.

ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ನಟನೆ ಮಾಡುತ್ತಿರುವ ವಿಷಯ ಹಳೆಯದ್ದೆ. ಕಳೆದ ಕೆಲವಾರು ದಿನಗಳಿಂದಲೂ ಸಿನಿಮಾದ ಟೈಟಲ್ ಘೋಷಣೆ ಬಗ್ಗೆ ಪ್ರಚಾರ ಮಾಡಲಾಗುತ್ತಿತ್ತು. ನವೆಂಬರ್ 27ಕ್ಕೆ ಅಂತಿಮ ದಿನಾಂಕ ನಿಗದಿ ಆಗಿತ್ತು. ಅಂತೆಯೇ ಇಂದು ಒರಾಯನ್ ಮಾಲ್ನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಸಿನಿಮಾದ ಟೈಟಲ್ ಟೀಸರ್ ಲಾಂಚ್ ಮಾಡಲಿದ್ದಾರೆ. ಇದರ ನಡುವೆ ಆನಂದ್ ಆಡಿಯೋನಲ್ಲಿ ಸಿನಿಮಾದ ಟೈಟಲ್ ಅನ್ನು ಮುಂಚಿತವಾಗಿ ಪ್ರಕಟಿಸಲಾಗಿದ್ದು, ಪ್ರೇಮ್ ಅವರ ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾಗಿ ಈ ಸಿನಿಮಾ ಇರಲಿದೆ ಎಂಬ ಸುಳಿವನ್ನು ಟೀಸರ್ ನೀಡುತ್ತಿದೆ.
ಅಂದಹಾಗೆ, ಸುದೀಪ್ ಹಾಗೂ ಪ್ರೇಮ್ ಅವರ ಈ ಸಿನಿಮಾಕ್ಕೆ ‘ದಾದಾ ಆನ್ ಹಾಲಿಡೇ’ ಎಂದು ಹೆಸರಿಡಲಾಗಿದೆ. ಟೈಟಲ್ ಪೋಸ್ಟರ್ನಲ್ಲಿ ಸುದೀಪ್ ಅವರು ಲುಂಗಿ ಕಟ್ಟಿ, ಅದಕ್ಕೊಂದು ದಪ್ಪ ಬೆಲ್ಟು ಕಟ್ಟಿ, ಬಣ್ಣ ಬಣ್ಣದ ಶರ್ಟು ಧರಿಸಿ, ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಥೇಟ್ ಹಳೆಯ ಕಾಲದ ರೌಡಿ ರೀತಿ ಕಾಣುತ್ತಿದ್ದಾರೆ. ಪೋಸ್ಟರ್ನಲ್ಲಿ ನಾಯಿ ಸಹ ಒಂದಿದೆ. ಜೊತೆಗೆ ಒಂದು ಬೋರ್ಡ್ ಸಹ ಇದ್ದು, ಬೋರ್ಡ್ ಮೇಲೆ ದಾದನಿಗೆ ಕೆಲವು ನಿಯಮಗಳನ್ನು ಸಹ ಬರೆಯಲಾಗಿದೆ.
‘ಅಜ್ಜಿಯನ್ನು ಗೌರವಿಸಬೇಕು’, ‘ಯಾವುದೇ ಅಪರಾಧ ಮಾಡುವಂತಿಲ್ಲ’, ‘ಸಂಜೆ 7 ಗಂಟೆಗೆ ಮನೆಗೆ ಬರಬೇಕು’ ಮತ್ತು ‘ಕುಟುಂಬವೇ ಮೊದಲು’ ಎಂಬ ನಿಯಮಗಳು ಆ ಬೋರ್ಡ್ನಲ್ಲಿವೆ. ಒಟ್ಟಾರೆ ಈ ಪೋಸ್ಟರ್ ನೋಡಿದರೆ ಇದೊಂದು ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ರೀತಿ ಕಾಣುತ್ತಿದೆ. ಹಳೆಯ ರೌಡಿಯೊಬ್ಬ ಎಲ್ಲವನ್ನೂ ಬಿಟ್ಟು ಒಳ್ಳೆಯತನಕ್ಕೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿರುವ ಕತೆ ಇದರಲ್ಲಿರುವಂತೆ ಕಾಣುತ್ತಿದೆ.
ಇದನ್ನೂ ಓದಿ:ರೇಸಿಂಗ್ ಟ್ರ್ಯಾಕ್‌ನಲ್ಲಿ ಸುದೀಪ್ ಮಿಂಚು; ಹರ್ಷ ವ್ಯಕ್ತಪಡಿಸಿದ ಕಿಚ್ಚ
ಟೈಟಲ್ ಟೀಸರ್ ಸಹ ರಿಲೀಸ್ ಆಗಿದ್ದು, ಟೀಸರ್ನ ಆರಂಭದಲ್ಲಿ ಪೊಲೀಸರು ನಿರ್ದೇಶಕ ಪ್ರೇಮ್ ಅನ್ನು ಎತ್ತಿಕೊಂಡು ಬಂದಿರುತ್ತಾರೆ. ಅಲ್ಲಿ ಪ್ರೇಮ್ ತಮ್ಮ ಹೊಸ ಸಿನಿಮಾ ಮತ್ತು ಹೀರೋ ಬಗ್ಗೆ ಇಂಟ್ರೊಡಕ್ಷನ್ ಕೊಡುತ್ತಾರೆ. ಅದಾದ ಬಳಿಕ ಸುದೀಪ್ ಅವರು ಪೊಲೀಸ್ ಠಾಣೆಗೆ ಅದೇ ತಮ್ಮ ರೌಡಿ ವೇಷದಲ್ಲಿ ಬಂದು ಪಾಸ್ಪೋರ್ಟ್ ಪಡೆದುಕೊಳ್ಳುತ್ತಾರೆ. ಜೊತೆಗೆ ಒಂದು ಸೂಟ್ಕೇಸ್ ಮೇಲೆ ಕೂತು ಖುಷಿಯಾಗಿ ಹೊರಡುತ್ತಾರೆ. ಟೀಸರ್ ಸಹ ಟೈಟಲ್ ಪೋಸ್ಟರ್ ರೀತಿಯೇ ಮಜವಾಗಿದೆ.
‘ದಾದಾ ಆನ್ ಹಾಲಿಡೇ’ ಸಿನಿಮಾ ಟೈಟಲ್ ಟೀಸರ್
ವಿದೇಶಕ್ಕೆ ಹೋಗುವ ಆಸೆಯಿಂದ ರೌಡಿಸಂಗೆ ವಿದಾಯ ಹೇಳುವ ರೌಡಿಯ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆಯೇ ಎಂಬ ಅನುಮಾನ ಈ ಟೀಸರ್ನ ಮತ್ತು ಸಿನಿಮಾದ ಟೈಟಲ್ನಿಂದ ಬರುತ್ತಿದೆ. ಆದರೆ ಸುದೀಪ್ ವಿದೇಶಕ್ಕೆ ಹೋಗುವ ಅನಿವಾರ್ಯತೆ ಏನಿದೆ? ವಿದೇಶದಲ್ಲಿ ಯಾರಿದ್ದಾರೆ? ಯಾರಿಗಾಗಿ ಸುದೀಪ್ ವಿದೇಶಕ್ಕೆ ಹೋಗಬೇಕಿದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 pm, Fri, 27 November 26




