AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

340 ಉದ್ಯೋಗಿಗಳ ಲೇಆಫ್​ಗೆ ಸ್ವಿಗ್ಗಿ ನಿರ್ಧಾರ; ಕ್ವಿಕ್ ಕಾಮರ್ಸ್ ವಿಭಾಗವಾದ ಇನ್ಸ್​ಟಾಮಾರ್ಟ್​ನಲ್ಲಿ ಕೆಲಸ ಮಾಡುವವರಿಗೆ ಸಂಕಟ

ಕ್ವಿಕ್ ಕಾಮರ್ಸ್ ಕಂಪನಿಯಾದ ಇನ್ಸ್​ಟಾಮಾರ್ಟ್​ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಆಘಾತಕಾರಿ ಸುದ್ದಿ ಇದು. ಇನ್ಸ್​ಟಮಾರ್ಟ್​ನಿಂದ 340 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ಸ್​ಟಾಮಾರ್ಟ್​ನಿಂದ ದಿನೇದಿನೇ ನಷ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಮಾತೃಸಂಸ್ಥೆಯಾದ ಸ್ವಿಗ್ಗಿಗೂ ಹಣಕಾಸು ಸಂಕಷ್ಟ ಎದುರಾಗಿದೆ.

340 ಉದ್ಯೋಗಿಗಳ ಲೇಆಫ್​ಗೆ ಸ್ವಿಗ್ಗಿ ನಿರ್ಧಾರ; ಕ್ವಿಕ್ ಕಾಮರ್ಸ್ ವಿಭಾಗವಾದ ಇನ್ಸ್​ಟಾಮಾರ್ಟ್​ನಲ್ಲಿ ಕೆಲಸ ಮಾಡುವವರಿಗೆ ಸಂಕಟ
ಸ್ವಿಗ್ಗಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2026 | 7:35 PM

Share

ಬೆಂಗಳೂರು, ನವೆಂಬರ್ 27: ಸ್ವಿಗ್ಗಿ ಸಂಸ್ಥೆಯ ಕ್ವಿಕ್ ಕಾಮರ್ಸ್ ವಿಭಾಗವಾದ ಇನ್​ಸ್ಟಮಾರ್ಟ್​ನಿಂದ 340 ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಬಹುದು ಎಂದು ಮನಿಕಂಟ್ರೋಲ್ ವೆಬ್​ಸೈಟ್ ವರದಿ ಮಾಡಿದೆ. ಸ್ವಿಗ್ಗಿ ಮತ್ತು ಇನ್ಸ್​ಟಾಮಾರ್ಟ್​ನಾದ್ಯಂತ ಎಐ ಅಳವಡಿಕೆ ಆಗುತ್ತಿರುವುದು ಹಣಕಾಸು ಸಂಕಷ್ಟ ಹೆಚ್ಚುವಂತೆ ಮಾಡಿದೆ. ಜೊತೆಗೆ, ಇನ್ಸ್​ಟಮಾರ್ಟ್​ನ ಬ್ಯುಸಿನೆಸ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದೂ ಈ ಲೇ ಆಫ್ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕ್ವಿಕ್ ಕಾಮರ್ಸ್ ಸೆಕ್ಷನ್​ನಲ್ಲಿ ಇನ್​ಸ್ಟಮಾರ್ಟ್ ತೀವ್ರ ಪೈಪೋಟಿ ಎದುರಿಸುತ್ತಿದೆ. ಬ್ಲಿಂಕಿಟ್, ಝೆಪ್ಟೋ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಇನ್​ಸ್ಟಮಾರ್ಟ್​ಗೆ ಸಾಧ್ಯವಾಗಿಲ್ಲ. ಫ್ಲಿಪ್​ಕಾರ್ಟ್ ಮತ್ತು ಅಮೇಜಾನ್ ಸಂಸ್ಥೆಗಳೂ ಕ್ವಿಕ್ ಕಾಮರ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಇನ್ಸ್​ಟಮಾರ್ಟ್ ಹಾದಿಗೆ ಇನ್ನಷ್ಟು ತೊಡರು ಉಂಟಾದಂತಾಗಿದೆ.

ಹಲವು ಕ್ವಾರ್ಟರ್​ಗಳಿಂದ ಸ್ವಿಗ್ಗಿ ಅನುಭವಿಸುತ್ತಿರುವ ನಷ್ಟ ಕಡಿಮೆ ಆಗುವುದರ ಬದಲು ಹೆಚ್ಚುತ್ತಿದೆ. ಇನ್ಸ್​ಟಮಾರ್ಟ್ ಮೇಲೆ ಹೆಚ್ಚಿನ ವೆಚ್ಚ ಮಾಡಿದ್ದುದು ಈ ನಷ್ಟಕ್ಕೆ ಕಾರಣ. ಸ್ಪರ್ಧೆಯಲ್ಲಿ ಉಳಿಯಲು ಇನ್​ಸ್ಟಮಾರ್ಟ್​ಗೆ ತನ್ನ ವೆಚ್ಚ ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ, ಉದ್ಯೋಗಿಗಳ ಲೇ ಆಫ್ ಕ್ರಮ ಯೋಜಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಸ್ಯಾಪ್ ಲೇ ಆಫ್ ಶಾಕ್; 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಸಾಫ್ಟ್​ವೇರ್ ಕಂಪನಿ

ಕಂಬ್ಯಾಕ್ ಮಾಡಲು ಇನ್ಸ್​ಟಮಾರ್ಟ್ ಪ್ರಯತ್ನ

ಅಪಾರ ನಷ್ಟದ ಹೊರತಾಗಿಯೂ ಸ್ವಿಗ್ಗಿ ಸಂಸ್ಥೆಯಲ್ಲಿ 13,500 ಕೋಟಿ ರೂ ಕ್ಯಾಷ್ ಬಂಡವಾಳ ಇದೆ. ಇದು ತಕ್ಕಮಟ್ಟಿಗೆ ಉತ್ತಮ ಬಂಡವಾಳ ಎನಿಸಿದೆ. ಇನ್ಸ್​ಟಮಾರ್ಟ್​ಗೆ ಚೇತರಿಕೆ ನೀಡಲು ಇದರಲ್ಲಿ ಒಂದಷ್ಟು ಭಾಗವನ್ನು ಉಪಯೋಗಿಸಬಹುದು. ಮೇಲಾಗಿ ಇನ್​ಸ್ಟಮಾರ್ಟ್​ಗೆ ನಂದಿತಾ ಸಿನ್ಹಾ ಅವರು ನೂತನ ಸಿಇಒ ಆಗಿದ್ದಾರೆ. ಅವರು ವಿನೂತನ ಬ್ಯುಸಿನೆಸ್ ಸ್ಟ್ರಾಟಿಜಿ ರೂಪಿಸಲು ಹೊರಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಕೇಸ್: ಮಿಮ್ಸ್ ನಿರ್ದೇಶಕರಿಗೆ ನೋಟಿಸ್
ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಕೇಸ್: ಮಿಮ್ಸ್ ನಿರ್ದೇಶಕರಿಗೆ ನೋಟಿಸ್
ಒಳಚರಂಡಿ ಕಾಮಗಾರಿ ವೇಳೆ ಪೈಪ್‌ಲೈನ್ ಎಡವಟ್ಟು
ಒಳಚರಂಡಿ ಕಾಮಗಾರಿ ವೇಳೆ ಪೈಪ್‌ಲೈನ್ ಎಡವಟ್ಟು
ವಿಧಾನಸಭೆ ಚುನಾವಣೆ 2029ಕ್ಕೆ, 2028ರಲ್ಲಿ ನಡೆಯಲ್ಲ: ಶಾಸಕ ಶಾಕಿಂಗ್ ಮಾತು
ವಿಧಾನಸಭೆ ಚುನಾವಣೆ 2029ಕ್ಕೆ, 2028ರಲ್ಲಿ ನಡೆಯಲ್ಲ: ಶಾಸಕ ಶಾಕಿಂಗ್ ಮಾತು
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ