AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಟ್ ಮ್ಯಾನ್ ಈಸ್ ಬ್ಯಾಕ್: ರೋಹಿತ್‌ ಶರ್ಮಾಗೆ ಮತ್ತೆ ಮುಂಬೈ ಇಂಡಿಯನ್ಸ್‌ ಕ್ಯಾಪ್ಟನ್ ಪಟ್ಟ

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ ಮುನ್ನ (ಐಪಿಎಲ್ 2027) ತಂಡಗಳಲ್ಲಿ ಮಹತ್ವ ಬದಲಾವಣೆಗಳಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಆದ ಬಳಿಕ ತೆರವಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಯಾರಾಗಬಹುದು ಎನ್ನುವ ಚರ್ಚೆಗಳು ಶುರುವಾಗಿದ್ದು, ಇದೀಗ ಇದೀಗ ಅದಕ್ಕೆ ತೆರೆ ಬಿದ್ದಿದೆ.

ಹಿಟ್ ಮ್ಯಾನ್ ಈಸ್ ಬ್ಯಾಕ್: ರೋಹಿತ್‌ ಶರ್ಮಾಗೆ ಮತ್ತೆ ಮುಂಬೈ ಇಂಡಿಯನ್ಸ್‌ ಕ್ಯಾಪ್ಟನ್ ಪಟ್ಟ
Rohit Sharma
ರಮೇಶ್ ಬಿ. ಜವಳಗೇರಾ
|

Updated on:Nov 27, 2026 | 7:16 PM

Share

ಐಪಿಎಲ್ 2027ರ ಸೀಸನ್‌ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. ಹೌದು…ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಆದ ಬಳಿಕ ತೆರವಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಸ್ಥಾನ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನ ಆಯ್ಕೆ ಮಾಡಲಾಗಿದೆ. ಮುಂಬರುವ ಐಪಿಎಲ್ 20ನೇ ಸೀಸನ್‌ನಲ್ಲಿ ರೋಹಿತ್ ಶರ್ಮಾ, ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ಮೂರು ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ಮತ್ತೆ ರೋಹಿತ್ ಶರ್ಮಾಗೆ ತಂಡದ ಕ್ಯಾಪ್ಟನ್ ಪಟ್ಟ ಕಟ್ಟಿದೆ.

ಪಾಂಡ್ಯ ನಿರ್ಗಮನದಿಂದ ರೋಹಿತ್‌ಗೆ ಮಣೆ

2024ರಿಂದ 2026ರವರೆಗೆ ಮೂರು ಸೀಸನ್‌ಗಳಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಫ್ರಾಂಚೈಸಿ ಟ್ರೇಡ್ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಿಟ್ಟುಕೊಟ್ಟಿದೆ. ಹಾರ್ದಿಕ್ ಬದಲಿಗೆ ಟೀಮ್ ಇಂಡಿಯಾದ ಸ್ಟಾರ್ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.   ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ತೋರಿತ್ತು. 2024ರ ಸೀಸನ್‌ನಲ್ಲಿ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. 2025ರಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿದರೂ, 2026ರ ಸೀಸನ್‌ನಲ್ಲಿ ಮತ್ತದೇ ನೀರಸ ಪ್ರದರ್ಶನದೊಂದಿಗೆ 10 ತಂಡಗಳ ಪೈಕಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.  ಹೀಗಾಗಿ ತಂಡದ ನಾಯತ್ವದ ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ಇದೀಗ ಮತ್ತೆ ರೋಹಿತ್ ನಾಯಕನಾಗಿ ಮರಳುತ್ತಿರುವುದು ತಂಡದ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಮುಂಬೈ ವಿದಾಯ; ಅರ್ಷದೀಪ್ ಸಿಂಗ್‌ಗೆ ಅದ್ಧೂರಿ ಸ್ವಾಗತ

2028ರ ಮೆಗಾ ಹರಾಜಿಗೂ ಮುನ್ನ ನಡೆಯುತ್ತಿರುವ ಕೊನೆಯ ಸೀಸನ್ ಇದಾಗಿರುವುದರಿಂದ, ತಂಡವನ್ನು ಮತ್ತೆ ಗೆಲುವಿನ ಹಳಿಗೆ ತರಲು ಫ್ರಾಂಚೈಸಿ ಅನುಭವಿ ನಾಯಕನ ಮೊರೆ ಹೋಗಿದೆ. ತಂಡದಲ್ಲಿ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರಂತಹ ನಾಯಕತ್ವದ ಆಯ್ಕೆಗಳಿದ್ದರೂ, ಆಡಳಿತ ಮಂಡಳಿ ಮತ್ತೆ ‘ಹಿಟ್‌ಮ್ಯಾನ್’ ಮೇಲೆ ಭರವಸೆ ಇಟ್ಟು ಈ ನಿರ್ಧಾರ ಕೈಗೊಂಡಿದೆ.

ಮುಂಬೈಗೆ 5 ಐಪಿಎಲ್ ಟ್ರೋಫಿ ತಂದುಕೊಟ್ಟ ನಾಯಕ

2013ರಿಂದ 2023ರವರೆಗೆ ಮುಂಬೈ ಇಂಡಿಯನ್ಸ್ ಮುನ್ನಡೆಸಿದ್ದ ರೋಹಿತ್ ಶರ್ಮಾ, ತಂಡಕ್ಕೆ ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. 2013, 2015, 2017, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್  ಐದು ಬಾರಿ ಚಾಂಪಿಯನ್ ಆಗುವಲ್ಲಿ ರೋಹಿತ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ರೋಹಿತ್, ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದರು. ಆದ್ರೆ, ಕೆಲ ಕಾರಣಾಂತರಗಳಿಂದ 2024ರ ಆವೃತ್ತಿಗೂ ಮುನ್ನ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಆಗಿರುವ ಹಿನ್ನೆಲೆಯಲ್ಲಿ 2027ರ ಐಪಿಎಲ್ ಟೂರ್ನಿಗೆ ರೋಹಿತ್ ಮತ್ತೆ ನಾಯಕತ್ವ ವಹಿಸಿಕೊಂಡಿದ್ದು,  ಆರನೇ ಪ್ರಶಸ್ತಿ ಗೆಲ್ಲುವ ಸವಾಲು ಅವರ ಮುಂದಿದೆ.

2027ರ ಐಪಿಎಲ್​​ಗೆ ಮುಂಬೈ ಫ್ರಾಂಚೈಸಿ ಒಟ್ಟು 16 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದ್ದು (ರಿಟೈನ್), ಬಲಿಷ್ಠ ತಂಡವನ್ನು ಕಟ್ಟಿಕೊಂಡಿದೆ. ಹರಾಜಿನಲ್ಲಿ ಇನ್ನೂ 9 ಸ್ಥಾನಗಳನ್ನು (ವಿದೇಶಿ ಆಟಗಾರರೂ ಸೇರಿದಂತೆ) ತುಂಬಲು ಮುಂಬೈ ಬಳಿ 32.60 ಕೋಟಿ ರೂ. ಪರ್ಸ್ ಮೊತ್ತ ಬಾಕಿ ಇದೆ.

MI ರಿಟೈನ್ ಮಾಡಿರುವ ಆಟಗಾರರ ಪಟ್ಟಿ

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್, ಶಾರ್ದೂಲ್ ಠಾಕೂರ್, ನಮನ್ ಧೀರ್, ಅಶ್ವಿನಿ ಕುಮಾರ್, ರಾಜ್ ಅಂಗದ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ವಿಲ್ ಜ್ಯಾಕ್ಸ್, ಶೆರ್ಫೇನ್ ರುದರ್‌ಫೋರ್ಡ್ ಮತ್ತು ಕಾರ್ಬಿನ್ ಬಾಷ್.

ಒಟ್ಟಿನಲ್ಲಿ ಹಾರ್ದಿಕ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಹೀನಾಯ ಪ್ರದರ್ಶನ ತೋರಿದ್ದು, ಇದೀಗ ಮತ್ತೆ ಹಿಟ್ ಮ್ಯಾನ್ ನೇತೃತ್ವದಲ್ಲಿ ಮುಂಬರುವ ಐಪಿಎಲ್ ಸೀಸನ್​​ನಲ್ಲಿ ಪುಟಿದೇಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Fri, 27 November 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಕೇಸ್: ಮಿಮ್ಸ್ ನಿರ್ದೇಶಕರಿಗೆ ನೋಟಿಸ್
ಮೋದಿ, ಹೆಚ್​ಡಿಕೆ ಫೋಟೋಗೆ ಟೇಪ್‌ ಕೇಸ್: ಮಿಮ್ಸ್ ನಿರ್ದೇಶಕರಿಗೆ ನೋಟಿಸ್
ಒಳಚರಂಡಿ ಕಾಮಗಾರಿ ವೇಳೆ ಪೈಪ್‌ಲೈನ್ ಎಡವಟ್ಟು
ಒಳಚರಂಡಿ ಕಾಮಗಾರಿ ವೇಳೆ ಪೈಪ್‌ಲೈನ್ ಎಡವಟ್ಟು
ವಿಧಾನಸಭೆ ಚುನಾವಣೆ 2029ಕ್ಕೆ, 2028ರಲ್ಲಿ ನಡೆಯಲ್ಲ: ಶಾಸಕ ಶಾಕಿಂಗ್ ಮಾತು
ವಿಧಾನಸಭೆ ಚುನಾವಣೆ 2029ಕ್ಕೆ, 2028ರಲ್ಲಿ ನಡೆಯಲ್ಲ: ಶಾಸಕ ಶಾಕಿಂಗ್ ಮಾತು
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
‘ಮಿಸ್ಟರ್ ಜ್ಯಾಕ್’ ಚಿತ್ರದ ಮೂಲಕ ಬರಲು ರೆಡಿ ಆದ ತಪಸ್ವಿನಿ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಕೊಲೆ ಬೆದರಿಕೆ ನಡುವೆಯೂ ಪ್ರೇಮ ವಿವಾಹ; ಜೋಡಿಗೆ ರಕ್ಷಣೆ ನೀಡಿದ ಪೊಲೀಸರು
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಡಿಕೆಶಿ- ಆನಂದ್ ಸಿಂಗ್ ಪ್ರತ್ಯೇಕ ಚರ್ಚೆ: ಕುತೂಹಲ ಮೂಡಿಸಿದ ನಡೆ
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಆಸ್ತಿ ವಿವಾದಕ್ಕೆ ಅತ್ತೆ, ಅಳಿಯನ ಕೊಲೆ; ಕೊಡಲಿಯಿಂದ ಕೊಚ್ಚಿ ಡಬಲ್ ಮರ್ಡರ್!
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ