AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಓವರ್‌ಗಳಲ್ಲಿ 3 ವಿಕೆಟ್ ಉಡೀಸ್; ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ

ವೆಲ್ಲಿಂಗ್ಟನ್ ಟೆಸ್ಟ್‌ನಂತೆ ಕ್ರೈಸ್ಟ್‌ಚರ್ಚ್‌ನಲ್ಲೂ ಭಾರತೀಯ ಬೌಲರ್‌ಗಳು ಅಬ್ಬರಿಸಿದರು. ಮೊದಲ ಸೆಷನ್ ನಿಧಾನಗತಿಯಲ್ಲಿದ್ದರೂ, ಎರಡನೇ ಸೆಷನ್‌ನಲ್ಲಿ ಆಕಾಶ್ ದೀಪ್ ಮತ್ತು ಅಂಶುಲ್ ಕಾಂಬೋಜ್ ಮಿಂಚಿದರು. ಕೇವಲ ಮೂರು ಓವರ್‌ಗಳಲ್ಲಿ ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡವನ್ನು 110/1 ರಿಂದ 110/4 ಕ್ಕೆ ಕುಸಿಯುವಂತೆ ಮಾಡಿದರು. ಇದು ದಿನದ ಎರಡನೇ ಅವಧಿಯಲ್ಲಿ ಭಾರತಕ್ಕೆ ಸಂಪೂರ್ಣ ಪ್ರಾಬಲ್ಯ ತಂದುಕೊಟ್ಟಿತು.

3 ಓವರ್‌ಗಳಲ್ಲಿ 3 ವಿಕೆಟ್ ಉಡೀಸ್; ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ
Team India
ಪೃಥ್ವಿಶಂಕರ
|

Updated on:Nov 27, 2026 | 11:07 AM

Share

ವೆಲ್ಲಿಂಗ್ಟನ್ ಟೆಸ್ಟ್‌ನ ಮೊದಲ ದಿನದ ಮೊದಲ ಸೆಷನ್​ನಲ್ಲಿ ಭಾರತೀಯ ಬೌಲರ್‌ಗಳು ಅಬ್ಬರಿಸಿದ್ದರೆ, ಕ್ರೈಸ್ಟ್‌ಚರ್ಚ್ ಟೆಸ್ಟ್‌ನ ಎರಡನೇ ಸೆಷನ್​ನಲ್ಲಿ ಇದೇ ರೀತಿಯ ಪ್ರದರ್ಶನ ನೀಡಿದರು. ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನ ವಿಕೆಟ್ ಪಡೆಯಲು ಭಾರತ ತಂಡದ ಬೌಲರ್‌ಗಳು ಸಾಕಷ್ಟು ಸಮಯ ಕಾಯಬೇಕಾಯಿತು. ಮೊದಲ ಸೆಷನ್​ ಅಂತ್ಯಕ್ಕೆ ಭಾರತಕ್ಕೆ ಸಿಕ್ಕಿದ್ದು ಕೇವಲ ಒಂದು ವಿಕೆಟ್ ಮಾತ್ರ. ಆದರೆ ಎರಡನೇ ಸೆಷನ್​ನಲ್ಲಿ ಭಾರತೀಯ ಬೌಲರ್‌ಗಳು ಭರ್ಜರಿ ಕಮ್‌ಬ್ಯಾಕ್ ಮಾಡಿದರು. ಆಕಾಶ್ ದೀಪ್ ಮತ್ತು ಅಂಶುಲ್ ಕಾಂಬೋಜ್ ಜೋಡಿ ಸತತ ಮೂರು ಓವರ್‌ಗಳಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.

ಎರಡನೇ ಸೆಷನ್​ನಲ್ಲಿ ಭಾರತ ತಂಡದ ಪ್ರಾಬಲ್ಯ

ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತ್ತು. ನಾಯಕ ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೆ ಅವರ ಆರಂಭಿಕ ಜೋಡಿ 77 ರನ್‌ಗಳ ಜೊತೆಯಾಟವಾಡಿತು. ಈ ನಡುವೆ ಲ್ಯಾಥಮ್ ಅವರಿಗೆ ಒಂದು ಜೀವದಾನವೂ ಸಿಕ್ಕಿತ್ತು. ಕೆ.ಎಲ್. ರಾಹುಲ್ ಅವರು ಲ್ಯಾಥಮ್ ನೀಡಿದ್ದ ಕ್ಯಾಚ್ ಕೈಚೆಲ್ಲಿದ್ದರು. ಇದರ ಲಾಭ ಪಡೆದ ಆರಂಭಿಕ ಜೋಡಿ ಅರ್ಧಶತಕದ ಜೊತೆಯಾಟ ಪೂರ್ಣಗೊಳಿಸಿತು.

ಆದರೆ ಮೊದಲ ಸೆಷನ್​ನ ಕೊನೆಯ ಎಸೆತದಲ್ಲಿ ಈ ಜೊತೆಯಾಟಕ್ಕೆ ತೆರೆ ಬಿತ್ತು. ಪದಾರ್ಪಣೆ ಪಂದ್ಯವನ್ನಾಡುತ್ತಿರುವ ವೇಗದ ಬೌಲರ್ ಗುರ್‌ನೂರ್ ಬ್ರಾರ್ ಅವರು ಡೆವೊನ್ ಕಾನ್ವೆ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ವಿಕೆಟ್ ತಂದುಕೊಟ್ಟರು. ವಿಕೆಟ್ ಕಳೆದುಕೊಂಡರೂ ನ್ಯೂಜಿಲೆಂಡ್ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಎರಡನೇ ಸೆಷನ್​ನಲ್ಲೂ ಇದೇ ಲಯ ಮುಂದುವರಿಸುವ ಸೂಚನೆ ನೀಡಿತ್ತು. ಟಾಮ್ ಲ್ಯಾಥಮ್ ಅರ್ಧಶತಕ ಪೂರೈಸಿದ್ದರು. ಹೆನ್ರಿ ನಿಕೋಲ್ಸ್ ಜೊತೆಗೂಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದರು.

ಈ ಹಂತದಲ್ಲಿ ಭಾರತಕ್ಕೆ ವಿಕೆಟ್‌ಗಳ ಅಗತ್ಯವಿತ್ತು. 42ನೇ ಓವರ್‌ನಿಂದ ಟೀಂ ಇಂಡಿಯಾದ ಬೌಲರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಆಕಾಶ್ ದೀಪ್ ಮತ್ತು ಅಂಶುಲ್ ಕಾಂಬೋಜ್ ಸತತ ಮೂರು ಓವರ್‌ಗಳಲ್ಲಿ ಮೂರು ವಿಕೆಟ್ ಕಬಳಿಸಿದರು. ವಿಶೇಷವೆಂದರೆ, ಈ ಮೂರು ಓವರ್‌ಗಳಲ್ಲಿ ಎದುರಾಳಿ ತಂಡಕ್ಕೆ ಒಂದೇ ಒಂದು ರನ್ ನೀಡಲಿಲ್ಲ.

ಆಕಾಶ್-ಅಂಶುಲ್ ಬೌಲಿಂಗ್‌ಗೆ ನ್ಯೂಜಿಲೆಂಡ್ ತತ್ತರ

ಆಕಾಶ್ ದೀಪ್ ಅವರ ಓವರ್‌ನ ಮೂರನೇ ಎಸೆತದೊಂದಿಗೆ ವಿಕೆಟ್ ಬೇಟೆ ಆರಂಭವಾಯಿತು. ಆಫ್ ಸ್ಟಂಪ್‌ನ ನೇರ ಗೆರೆಯಲ್ಲಿ ಬಂದ ಚೆಂಡು ಪಿಚ್ ಆದ ಬಳಿಕ ಸ್ವಲ್ಪ ಹೊರಭಾಗಕ್ಕೆ ಚಲಿಸಿತು. ಟಾಮ್ ಲ್ಯಾಥಮ್ ಚೆಂಡನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಬ್ಯಾಟ್‌ನ ಅಂಚಿಗೆ ತಗುಲಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತು. ಈ ಮೂಲಕ ನ್ಯೂಜಿಲೆಂಡ್ ನಾಯಕನ ವಿಕೆಟ್ ಪತನವಾಯಿತು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಅಂಶುಲ್ ಕಾಂಬೋಜ್ ಮತ್ತೊಂದು ವಿಕೆಟ್ ಕಬಳಿಸಿದರು. ಹೆನ್ರಿ ನಿಕೋಲ್ಸ್ ಅವರಿಗೆ ಶಾರ್ಟ್ ಪಿಚ್ ಎಸೆತವನ್ನು ಎಸೆದ ಕಾಂಬೋಜ್, ಅವರನ್ನು ಪುಲ್ ಶಾಟ್ ಆಡಲು ಪ್ರೇರೇಪಿಸಿದರು. ಆದರೆ ನಿಕೋಲ್ಸ್ ಹೊಡೆತಕ್ಕೆ ಹೆಚ್ಚಿನ ಬಲ ಸಿಗಲಿಲ್ಲ. ಡೀಪ್ ಫೈನ್ ಲೆಗ್‌ನಲ್ಲಿದ್ದ ಫೀಲ್ಡರ್ ಆಕಾಶ್ ದೀಪ್ ಸುಲಭವಾಗಿ ಕ್ಯಾಚ್ ಹಿಡಿದರು. ಈ ಮೂಲಕ ಅಂಶುಲ್ ಕಾಂಬೋಜ್ ಪಂದ್ಯದಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು.

ಟಾಸ್ ಗೆದ್ದ ಟೀಂ ಇಂಡಿಯಾ; ಸಿರಾಜ್‌ಗೆ ಮತ್ತೆ ಕೊಕ್, ಗುರ್‌ನೂರ್ ಬ್ರಾರ್‌ಗೆ ಪಾದಾರ್ಪಣೆ ಭಾಗ್ಯ

ಇದಾದ ಬಳಿಕ 44ನೇ ಓವರ್‌ನ ಕೊನೆಯ ಎಸೆತದಲ್ಲಿ ಆಕಾಶ್ ದೀಪ್ ಮತ್ತೊಂದು ಆಘಾತ ನೀಡಿದರು. ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡಿದ ರೀತಿಯಲ್ಲೇ ರಚಿನ್ ರವೀಂದ್ರ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ರಚಿನ್ ರವೀಂದ್ರ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಹೀಗೆ ಕೇವಲ ಮೂರು ಓವರ್‌ಗಳ ಅಂತರದಲ್ಲಿ ನ್ಯೂಜಿಲೆಂಡ್ ತಂಡದ ಸ್ಕೋರ್ 110/1ರಿಂದ 110/4ಕ್ಕೆ ಕುಸಿಯಿತು. ಈ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಎರಡನೇ ಸೆಷನ್ ಸಂಪೂರ್ಣವಾಗಿ ಭಾರತ ತಂಡದ ಪಾಲಾಯಿತು. ಈ ಸೆಷನ್​ನಲ್ಲಿ ನ್ಯೂಜಿಲೆಂಡ್ ಕೇವಲ 54 ರನ್ ಗಳಿಸಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

Published On - 10:50 am, Fri, 27 November 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಮಷಿನ್​ಗಳಿದ್ರೂ ಆಪರೇಟರ್ಸ್ ಇಲ್ಲ; ಖಾಸಗಿ ಲ್ಯಾಬ್ ಜೊತೆ ಶಾಮಿಲಾದ್ರ ಸರ್ಕಾರಿ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್
ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ