AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂಗ್ ಕಿಚ್ಚ: ಸುದೀಪ್​​ಗೆ ಹೊಸ ಬಿರುದು ಕೊಟ್ಟ ಪ್ರೇಮ್, ಕಾರಣವೇನು?

ಸುದೀಪ್ ಅವರಿಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದನ್ನು ಪ್ರೇಮ್ ನೀಡಿದ್ದಾರೆ. ‘ದಾದಾ ಆನ್ ಹಾಲಿಡೇ’ ಸಿನಿಮಾದ ಟೈಟಲ್ ಕಾರ್ಡ್​​ನಲ್ಲಿ ಸುದೀಪ್ ಅವರ ಹೆಸರು ಕಿಂಗ್ ಕಿಚ್ಚ ಸುದೀಪ್ ಎಂದೇ ಇರಲಿದೆ. ಸುದೀಪ್ ಅವರ ವ್ಯಕ್ತಿತ್ವ ನೋಡಿ ತಾವು ಈ ಹೆಸರು ಅವರಿಗೆ ನೀಡಿದ್ದು ಎಂದು ಪ್ರೇಮ್ ಹೇಳಿದರು. ಸುದೀಪ್ ರಾಜ, ಮಹಾರಾಜ ಎಂದೇನೂ ಈ ಹೆಸರನ್ನು ನೀಡಿಲ್ಲ. ಅವರ ಗುಣಗಳಿಂದ ಪ್ರೇರಿತರಾಗಿ ಈ ಹೆಸರು ನೀಡಿದ್ದಾಗಿ ಹೇಳಿದರು.

ಕಿಂಗ್ ಕಿಚ್ಚ: ಸುದೀಪ್​​ಗೆ ಹೊಸ ಬಿರುದು ಕೊಟ್ಟ ಪ್ರೇಮ್, ಕಾರಣವೇನು?
Sudeep Prem
ಮಂಜುನಾಥ ಸಿ.
|

Updated on: Nov 27, 2026 | 10:45 PM

Share

ಮುಖ್ಯಾಂಶಗಳು

  • ಸುದೀಪ್​​ಗೆ ಹೊಸ ಬಿರುದು ಕೊಟ್ಟ ಪ್ರೇಮ್
  • ಈ ಮುಂದೆ ಸುದೀಪ್ ‘ಕಿಂಗ್ ಕಿಚ್ಚ’
  • ಅವರ ವ್ಯಕ್ತಿತ್ವ ಆಧರಿಸಿ ಹೆಸರು ಕೊಟ್ಟಿರುವ ಪ್ರೇಮ್

ನಟ ಸುದೀಪ್ ಅವರಿಗೆ ಅವರ ಅಭಿಮಾನಿಗಳು ಹಲವು ಬಿರುದುಗಳನ್ನು ನೀಡಿದ್ದಾರೆ. ‘ಬಾದ್‌ಷಾ’, ‘ಕಿಚ್ಚ’, ‘ಕರುನಾಡ ಚಕ್ರವರ್ತಿ’ ಇನ್ನೂ ಏನೇನೋ. ಆದರೆ ಇದೀಗ ನಿರ್ದೇಶಕ ಪ್ರೇಮ್ ಅವರು ಸುದೀಪ್ ಅವರಿಗಾಗಿ ಹೊಸ ಬಿರುದೊಂದನ್ನು ನೀಡಿದ್ದಾರೆ. ಪ್ರೇಮ್ ನಿರ್ದೇಶನದ ‘ದಾದಾ ಆನ್ ಹಾಲಿಡೇ’ ಸಿನಿಮಾದಲ್ಲಿ ಸುದೀಪ್ ನಟನೆ ಮಾಡುತ್ತಿದ್ದು, ಇಂದು (ನವೆಂಬರ್ 27) ಸಿನಿಮಾದ ಟೈಟಲ್ ಟೀಸರ್ ಲಾಂಚ್ ಮಾಡಲಾಯಿತು. ಈ ವೇಳೆ ಹಾಕಲಾಗಿದ್ದ ಪೋಸ್ಟರ್​​ಗಳಲ್ಲಿ ಸುದೀಪ್ ಅವರ ಹೆಸರನ್ನು ಅವರ ಹೊಸ ಬಿರುದಿನೊಂದಿಗೆ ಸೇರಿಸಿ ಹಾಕಲಾಗಿತ್ತು.

ಸುದೀಪ್ ಅವರಿಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದನ್ನು ಪ್ರೇಮ್ ನೀಡಿದ್ದಾರೆ. ‘ದಾದಾ ಆನ್ ಹಾಲಿಡೇ’ ಸಿನಿಮಾದ ಟೈಟಲ್ ಕಾರ್ಡ್​​ನಲ್ಲಿ ಸುದೀಪ್ ಅವರ ಹೆಸರು ಕಿಂಗ್ ಕಿಚ್ಚ ಸುದೀಪ್ ಎಂದೇ ಇರಲಿದೆ. ಸುದೀಪ್ ಅವರ ವ್ಯಕ್ತಿತ್ವ ನೋಡಿ ತಾವು ಈ ಹೆಸರು ಅವರಿಗೆ ನೀಡಿದ್ದು ಎಂದು ಪ್ರೇಮ್ ಹೇಳಿದರು. ಸುದೀಪ್ ರಾಜ, ಮಹಾರಾಜ ಎಂದೇನೂ ಈ ಹೆಸರನ್ನು ನೀಡಿಲ್ಲ. ಅವರ ಗುಣಗಳಿಂದ ಪ್ರೇರಿತರಾಗಿ ಈ ಹೆಸರು ನೀಡಿದ್ದಾಗಿ ಹೇಳಿದರು.

‘ಸುದೀಪ್ ಅವರು ಎಂದಿಗೂ ಹೇಳಿಕೊಟ್ಟವರ ಮಾತು ಕೇಳುವವರಲ್ಲ. ಅವರ ಬಳಿಗೆ ಸಹಾಯ ಎಂದು ಹೋಗುವ ಯಾರನ್ನೇ ಆಗಲಿ ಬರಿಗೈಲಿ ಕಳಿಸಿದವರಲ್ಲ. ವ್ಯಕ್ತಿತ್ವ, ಸ್ವಾಭಿಮಾನ ಎಲ್ಲದರಲ್ಲೂ ಅವರದ್ದು ವಿಶೇಷವಾದ ನಿಲುವು, ಇದೇ ಕಾರಣಕ್ಕೆ ಅವರಿಗೆ ಈ ಹೆಸರು ಕೊಟ್ಟಿದ್ದೇನೆ. ಅಷ್ಟು ಮಾತ್ರವೇ ಅಲ್ಲ, ‘ದಾದಾ ಆನ್ ಹಾಲಿಡೇ’ ಸಿನಿಮಾದ ಕಥೆಗೂ ಸಹ ಸುದೀಪ್ ಅವರ ವ್ಯಕ್ತಿತ್ವವೇ ಸ್ಫೂರ್ತಿ. ಅವರ ವ್ಯಕ್ತಿತ್ವದಿಂದ ಗುಣಗಳನ್ನು ಆರಿಸಿ ಈ ಕಥೆ ಹೆಣೆಯಲಾಗಿದೆ’ ಎಂದರು.

‘ಸುದೀಪ್ ಅವರ ವ್ಯಕ್ತಿತ್ವವನ್ನು ಗಮನಿಸಿಯೇ ಈ ಸಿನಿಮಾದಲ್ಲಿ ಹಾಡೊಂದನ್ನು ಸಹ ಬರೆದಿದ್ದೇನೆ, ‘ಹೋಲಿಕೆ ಯಾರೂ ಇಲ್ಲ ಇವನ ಸಮ’ ಎಂದು. ಅವರು ನಿಜ ಜೀವನದಲ್ಲಿ ಇರುವ ಗುಣಗಳನ್ನೇ ಪೋಣಿಸಿ ಹಾಡು ಮಾಡಿದ್ದೇನೆ. ಆ ಹಾಡು ಜನವರಿಯಲ್ಲಿ ರಿಲೀಸ್ ಆಗಲಿದೆ. ‘ದಾದಾ ಆನ್ ಹಾಲಿಡೇ’ ಸಿನಿಮಾ ಮ್ಯೂಸಿಕ್, ಫ್ಯಾಮಿಲಿ, ಎಮೋಷನ್, ಮನೆ-ಮನಗಳಿಗೆ ಮುಟ್ಟುವ ಕಥೆಯನ್ನು ಒಳಗೊಂಡಿರಲಿದೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಮಾಡುತ್ತೇವೆ. ಆದಷ್ಟು ಬೇಗ ಸಿನಿಮಾ ಮುಗಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುತ್ತೇವೆ’ ಎಂದರು ಪ್ರೇಮ್.

ಇದನ್ನೂ ಓದಿ:‘ಮಚ್ಚಿಲ್ಲ-ಕೊಚ್ಚಲ್ಲ, ಲವ್ ಇಲ್ಲ-ಗೋಳಲ್ಲ‘: ಇದು ಸುದೀಪ್-ಪ್ರೇಮ್ ಹೊಸ ಸಿನಿಮಾ

‘ಸುದೀಪ್ ಅವರು ಸಿನಿಮಾವನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ. ಅವರನ್ನು ಭೇಟಿ ಆದಾಗೆಲ್ಲ ನಾವು ಸಿನಿಮಾ ಬಗ್ಗೆ ಮಾತನಾಡುತ್ತೇವೆ. ಅವರಿಂದ ಬೈಸಿಕೊಂಡಿದ್ದೇನೆ, ಅವರನ್ನು ಖುಷಿ ಪಡಿಸಿದ್ದೇನೆ, ಒಟ್ಟಾರೆ ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಖುಷಿ. ಸಿನಿಮಾಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುವ ವ್ಯಕ್ತಿ ಅವರು. ನಟನೆಯಲ್ಲಿ ನಂಬರ್ 1, ನಟನೆಯಲ್ಲಿ ಕಮಲ್ ಹಾಸನ್ ಎದುರು ನಿಲ್ಲಬೇಕು ಎಂದರೆ ಸುದೀಪ್ ಒಬ್ಬರೇ ಅಂತಹ ಅದ್ಭುತ ನಟ ಅವರು’ ಎಂದು ಸುದೀಪ್ ನಟನೆಯನ್ನು ಕೊಂಡಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More