AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೇ ದಿನಕ್ಕೆ 221 ಕೋಟಿ ರೂಪಾಯಿ ಗಳಿಸಿದ ‘ರಾಮಾಯಣ’ ಸಿನಿಮಾ; ಕನ್ನಡದಲ್ಲೆಷ್ಟು?

ರಾಮಾಯಣ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 221.05 ಕೋಟಿ ರೂಪಾಯಿ ಗ್ರಾಸ್ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಭಾರತದಲ್ಲೇ 112.90 ಕೋಟಿ ರೂಪಾಯಿ ನೆಟ್ ಸಂಗ್ರಹಿಸಿದ್ದು, ಶನಿವಾರ, ಭಾನುವಾರ ಹಾಗೂ ಮುಂಬರುವ ಹಬ್ಬದ ರಜಾದಿನಗಳಲ್ಲಿ ಈ ಗಳಿಕೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸುನಾಮಿ ನಿರೀಕ್ಷೆಯನ್ನು ಚಲನಚಿತ್ರ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.

ಎರಡೇ ದಿನಕ್ಕೆ 221 ಕೋಟಿ ರೂಪಾಯಿ ಗಳಿಸಿದ ‘ರಾಮಾಯಣ’ ಸಿನಿಮಾ; ಕನ್ನಡದಲ್ಲೆಷ್ಟು?
ರಾಮಾಯಣ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Nov 07, 2026 | 6:57 AM

Share

ಮುಖ್ಯಾಂಶಗಳು

  • ಬಾಕ್ಸ್ ಆಫೀಸ್‌ನಲ್ಲಿ ರಾಮಾಯಣ ಹೊಸ ದಾಖಲೆ
  • ಭಾಷಾವಾರು ಕಲೆಕ್ಷನ್‌ನಲ್ಲೂ ಅಬ್ಬರ
  • ಕನ್ನಡಿಗರ ಮೆಚ್ಚುಗೆ, ಮಲಯಾಳಂನಲ್ಲಿ ಬಂಪರ್ ಆಕ್ಯುಪೆನ್ಸಿ

‘ರಾಮಾಯಣ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 221.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ದೇಶಾದ್ಯಂತ 23,316 ಪ್ರದರ್ಶನಗಳನ್ನು ಕಂಡ ಈ ಸಿನಿಮಾ ಎರಡನೇ ದಿನ ಭಾರತದಲ್ಲಿ ಒಟ್ಟು 48.05 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದೆ. ಇದರೊಂದಿಗೆ ಭಾರತದಲ್ಲಿ ಇದುವರೆಗೆ ಒಟ್ಟು 134.80 ಕೋಟಿ ರೂಪಾಯಿ ಗ್ರಾಸ್ ಹಾಗೂ 112.90 ಕೋಟಿ ರೂಪಾಯಿ ನೆಟ್ ಸಂಗ್ರಹವಾಗಿದೆ.

ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಎರಡನೇ ದಿನ ಹಿಂದಿ ಆವೃತ್ತಿಯು 19,859 ಪ್ರದರ್ಶನಗಳಿಂದ ಅತ್ಯಧಿಕ ಅಂದರೆ 35.50 ಕೋಟಿ ಗಳಿಸಿದೆ. ಕನ್ನಡ ಆವೃತ್ತಿಯು 904 ಪ್ರದರ್ಶನಗಳಿಂದ 5.15 ಕೋಟಿ ರೂಪಾಯಿ ಬಾಚಿಕೊಂಡಿದೆ. ತೆಲುಗು ಆವೃತ್ತಿ 1,530 ಪ್ರದರ್ಶನಗಳಿಂದ 4.75 ಕೋಟಿ ರೂಪಾಯಿ ಗಳಿಸಿದೆ. ಉಳಿದಂತೆ ತಮಿಳು ಆವೃತ್ತಿ 577 ಪ್ರದರ್ಶನಗಳಿಂದ 1.50 ಕೋಟಿ ರೂಪಾಯಿ ಮತ್ತು ಮಲಯಾಳಂ ಆವೃತ್ತಿ 446 ಪ್ರದರ್ಶನಗಳಿಂದ ಶೇ. 65.0ರಷ್ಟು ಆಕ್ಯುಪೆನ್ಸಿಯೊಂದಿಗೆ 1.15 ಕೋಟಿ ಗಳಿಕೆ ತಂದುಕೊಟ್ಟಿದೆ.

ವಿದೇಶಿ ಮಾರುಕಟ್ಟೆಯಲ್ಲೂ ರಾಮಾಯಣ ಚಿತ್ರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಎರಡನೇ ದಿನ ವಿದೇಶಗಳಲ್ಲಿ 35.00 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರಿಂದಾಗಿ ವಿದೇಶಿ ಮಾರುಕಟ್ಟೆಯ ಒಟ್ಟು ಗ್ರಾಸ್ ಗಳಿಕೆ 86.25 ಕೋಟಿ ರೂಪಾಯಿಗೆ ತಲುಪಿದೆ. ಮೊದಲ ದಿನ ಭಾರತದಲ್ಲಿ 64.85 ಕೋಟಿ ನೆಟ್ ಗಳಿಸಿದ್ದ ಸಿನಿಮಾ, ಎರಡನೇ ದಿನ ಶುಕ್ರವಾರ ಕೆಲಸದ ದಿನವಾಗಿದ್ದರಿಂದ ಶೇ. 25.9 ರಷ್ಟು ಸಣ್ಣ ಕುಸಿತ ಕಂಡಿದೆಯಾದರೂ ಗಳಿಕೆಯಲ್ಲಿ ಓಟವನ್ನು ಮುಂದುವರಿಸಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್: ಮೊದಲ ದಿನ ‘ಆದಿಪುರುಷ್’ ಮುಂದೆ ‘ರಾಮಾಯಣ’ ಸೋತಿದ್ದು ಏಕೆ?

ಮುಂದಿನ ದಿನಗಳಲ್ಲಿ ಈ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇಂದಿನಿಂದ ಆರಂಭವಾಗುವ ವಾರಾಂತ್ಯದ ರಜಾದಿನಗಳಲ್ಲಿ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹರಿಯುವ ಸಾಧ್ಯತೆಯಿದ್ದು, ಭಾರಿ ಕಲೆಕ್ಷನ್ ನಿರೀಕ್ಷಿಸಲಾಗಿದೆ. ಜೊತೆಗೆ ಮುಂಬರುವ ಹಬ್ಬದ ಸಾಲಿನ ಸೋಮವಾರ ಮತ್ತು ಮಂಗಳವಾರ ಸಹ ಸಾಲು ಸಾಲು ರಜೆಗಳಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ರಾಮಾಯಣ ಸಿನಿಮಾದ ಗಳಿಕೆಯ ಸುನಾಮಿ ಮುಂದುವರಿಯಲಿದೆ ಎಂದು ಚಲನಚಿತ್ರ ವಿಶ್ಲೇಷಕರು ಅಂದಾಜಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More