ಸಿದ್ದರಾಮಯ್ಯರೊಂದಿಗೆ ಡಿಕೆ ಶಿವಕುಮಾರ್ ಗುಪ್ತ ಚರ್ಚೆ: ಕೆಲ ವಿಚಾರಗಳನ್ನ ತಿಳಿಸಿದ್ದೇನೆ ಎಂದ ಸಿಎಂ
ಮುಖ್ಯಾಂಶಗಳು
- ಸಿಎಂ ಡಿ.ಕೆ.ಶಿವಕುಮಾರ್ರಿಂದ ಸಿದ್ದರಾಮಯ್ಯ ಭೇಟಿ ವಿಚಾರ
- ನಮ್ಮ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇನೆ ಎಂದ ಸಿಎಂ
- ಯಾವ ಮುನಿಸು ಇಲ್ಲ ಎಂದ ಡಿಕೆ ಶಿವಕುಮಾರ್
ದೀಪಾವಳಿ ಶುಭಾಶಯ ಕೋರಲು ಸಿಎಂ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಭೇಟಿ ಮಾಡಿದರು. ಒಂದೂವರೆ ಗಂಟೆಗೂ ಹೆಚ್ಚು ನಡೆದ ಈ ಭೇಟಿ ಕೇವಲ ಶುಭಾಶಯಕ್ಕೆ ಸೀಮಿತವಾಗಿಲ್ಲ. ಸ್ಟಿಂಗ್ ಆಪರೇಷನ್ ಕುರಿತ ಮುನಿಸಿನ ವಿಚಾರವನ್ನು ಡಿಕೆ ಶಿವಕುಮಾರ್ ಅಲ್ಲಗಳೆದರು. ವಿರೋಧಿಗಳು ಸುಳ್ಳು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದ ಸಿಎಂ, ಪರೋಕ್ಷವಾಗಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು.
ಬೆಂಗಳೂರು, ನವೆಂಬರ್ 09: ದೀಪಾವಳಿ ಹಬ್ಬದಶುಭ ಕೋರಲು ಸಿಎಂ ಡಿಕೆ ಶಿವಕುಮಾರ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ತೆರಳಿದರು. ಭೇಟಿ ಕೇವಲ ಹಬ್ಬದ ಶುಭಾಶಯ ವಿನಿಮಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸುದೀರ್ಘ ಒಂದೂವರೆ ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಮುಕ್ತ ಮಾತುಕತೆ ನಡೆಸಿದರು. ಸುದೀರ್ಘ ಚರ್ಚೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ನಮ್ಮ ನಾಯಕ ಸಿದ್ದರಾಮಯ್ಯರನ್ನು ನಾನು ಭೇಟಿ ಮಾಡಿದ್ದೇನೆ. ಸಿದ್ದರಾಮಯ್ಯಗೆ ಕೆಲ ವಿಚಾರ ತಿಳಿಸಬೇಕಿತ್ತು, ಅದನ್ನು ತಿಳಿಸಿದ್ದೇನೆ’ ಎಂದರು. ಸ್ಟಿಂಗ್ ಆಪರೇಷನ್ ವಿಚಾರವಾಗಿ ಮುನಿಸು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಯಾವ ಮುನಿಸು ಇಲ್ಲ, ದೊಡ್ಡ ಹಾಗೂ ಸಣ್ಣ ಮುನಿಸು ಇಲ್ಲ. ವಿರೋಧ ಪಕ್ಷದವರು ಸುಮ್ಮನೇ ಕ್ರಿಯೇಟ್ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ನಿಂದಕರು ಇರಬೇಕು, ವಿರೋಧಿಗಳೂ ಇರಬೇಕು. ಅಂತಹವರು ಇದ್ದಾಗ ನಮ್ಮಂಥವರು ಶುದ್ಧ ರಾಜಕಾರಣ ಮಾಡಬಹುದು. ಕೆಲವು ಮಹಾ ಸ್ವಾಮಿಗಳು ಮಾತನಾಡುತ್ತಿದ್ದಾರೆ’ ಎಂದ ಸಿಎಂ ಆ ಮೂಲಕ ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ

