AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ 100 ದಿನ: ಸರ್ಕಾರದ ಸಾಧನೆಯ ಪಟ್ಟಿ ಇಲ್ಲಿದೆ ನೋಡಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಈ ಅವಧಿಯಲ್ಲಿ 'ನೂರು ದಿನ. ನೂರು ಘೋಷಣೆಗಳು' ಅಭಿಯಾನದಡಿ ಶಿಕ್ಷಣ, ಉದ್ಯೋಗ, ಆಡಳಿತ ಸುಧಾರಣೆ, ಬೆಂಗಳೂರು ಅಭಿವೃದ್ಧಿ, ಕೃಷಿ, ತಂತ್ರಜ್ಞಾನ ಮತ್ತು ಸಾಮಾಜಿಕ ನ್ಯಾಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ. ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಾ, ಜನಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ಬದ್ಧತೆ ತೋರಿದೆ.

ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ 100 ದಿನ: ಸರ್ಕಾರದ ಸಾಧನೆಯ ಪಟ್ಟಿ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ Image Credit source: gemini and Tv9 kannada
ಈರಣ್ಣಾ ಬಸವಾ
| Edited By: |

Updated on:Sep 09, 2026 | 11:58 AM

Share

ಬೆಂಗಳೂರು, ಸೆ.9: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹೊಸ ರೂಪ ನೀಡಲು ‘ನೂರು ದಿನ. ನೂರು ಘೋಷಣೆಗಳು’ ಅಭಿಯಾನದಡಿ ಸಾಧನಾ ವರದಿಯನ್ನು ಬಿಡುಗಡೆ ಮಾಡಿದೆ. ಇದೀಗ ಕಾಂಗ್ರೆಸ್​​ ಸರ್ಕಾರ ಮಾಡಿದ ಮಹತ್ವದ ಸಾಧನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಡಿಕೆ ಶಿವಕುಮಾರ್​  ಸರ್ಕಾರದ ಸಾಧನೆ: 

ಶಿಕ್ಷಣ, ಯುವಜನತೆ ಮತ್ತು ಉದ್ಯೋಗ:

ಉಚಿತ ಬಸ್ ಪಾಸ್: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಬಸ್ ಪಾಸ್ ಸೌಲಭ್ಯ.

ಭಾರತ್ ಜೋಡೋ ಯುವಕರ ಸಂಘ: ಎಲ್ಲಾ ಪಂಚಾಯಿತಿ ಹಾಗೂ ವಾರ್ಡ್‌ಗಳಲ್ಲಿ ಯುವ ಸಂಘಗಳ ಸ್ಥಾಪನೆ; ಪ್ರತಿಯೊಂದಕ್ಕೂ 10 ಲಕ್ಷ ಅನುದಾನ ನಿಗದಿ.

ಸರ್ಕಾರಿ ನೇಮಕಾತಿ ಗಡುವು: 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಲು ಆದೇಶ.

ಖಾಸಗಿ ಉದ್ಯೋಗ ವಿನಿಮಯ: ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಪ್ರತ್ಯೇಕ ‘ಉದ್ಯೋಗ ವಿನಿಮಯ ಕೇಂದ್ರ’ ಸ್ಥಾಪನೆ.

ಕಾಲೇಜು ಚುನಾವಣೆ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಆರಂಭಿಸಲು ಚಿಂತನೆ.

ದೆಹಲಿಯಲ್ಲಿ ‘ಕರ್ನಾಟಕ ಭವನ’: ರಾಜ್ಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವದೆಹಲಿಯಲ್ಲಿ ನೂತನ ‘ಕರ್ನಾಟಕ ಭವನ’ ನಿರ್ಮಾಣ.

ಆಡಳಿತ ಸುಧಾರಣೆ ಹಾಗೂ ನಾಗರಿಕ ಸೇವೆ

‘ಪ್ರಜಾಸೇವೆ’ ಸಚಿವಾಲಯ: ಸಾರ್ವಜನಿಕರ ಕುಂದುಕೊರತೆ ಆಲಿಸಲು ಹಾಗೂ ತಕ್ಷಣದ ಪರಿಹಾರಕ್ಕಾಗಿ ನೂತನ ಪ್ರತ್ಯೇಕ ಇಲಾಖೆ ಕಾರ್ಯಾರಂಭ.

‘ಎ’ ಖಾತಾ ಪರಿವರ್ತನೆ: ರಾಜ್ಯದಾದ್ಯಂತ ‘ಬಿ’ ಖಾತಾದಿಂದ ‘ಎ’ ಖಾತಾಗೆ ಸುಲಭ ಪರಿವರ್ತನೆಗೆ ಹಸಿರು ನಿಶಾನೆ.

ವಿದ್ಯುತ್ ಸಂಪರ್ಕ ಸಡಿಲಿಕೆ: 2,500 ಚದರ ಅಡಿವರೆಗಿನ ನೂತನ ವಸತಿ ಕಟ್ಟಡಗಳಿಗೆ ‘ಒಸಿ’ ಇಲ್ಲದೆಯೇ ಶಾಶ್ವತ ವಿದ್ಯುತ್ ಸಂಪರ್ಕ.

ಸಮಯ ಪಾಲನೆ ಮತ್ತು ಭ್ರಷ್ಟಾಚಾರ ತಡೆ:

ಸರ್ಕಾರಿ ಆಫೀಸುಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಜಿಪಿಎಸ್ (GPS) ಮೂಲಕ ಸಿಬ್ಬಂದಿ ಹಾಜರಾತಿ ಕಡ್ಡಾಯ.

ಭ್ರಷ್ಟಾಚಾರ ವಿರೋಧಿ ದೂರು ಸಲ್ಲಿಕೆಗೆ ಪ್ರತ್ಯೇಕ ಸಹಾಯವಾಣಿ.

ಖಡಕ್ ಸೂಚನೆ: ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಿಎಂ ಸೂಚನೆ.

ಬೆಂಗಳೂರು ಅಭಿವೃದ್ಧಿ ಹಾಗೂ ಮೂಲಸೌಕರ್ಯ

ಗುಂಡಿಮುಕ್ತ ರಸ್ತೆಗಳು: ಬೆಂಗಳೂರಿನ ರಸ್ತೆಗಳ ದುರಸ್ತಿಗೆ 2,000 ಕೋಟಿ ಯೋಜನೆ ಜಾರಿ.

ಪ್ರಮುಖ ರಸ್ತೆ ಉದ್ಘಾಟನೆ: ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ‘ಎಸ್.ಎಂ. ಕೃಷ್ಣ ರಸ್ತೆ’ ಸಾರ್ವಜನಿಕರಿಗೆ ಅರ್ಪಣೆ.

ಹೆಬ್ಬಾಳ ಸುರಂಗ ರಸ್ತೆ: ಸಂಚಾರ ದಟ್ಟಣೆ ನಿಯಂತ್ರಿಸಲು ಹೆಬ್ಬಾಳ ಬಳಿ ಸಣ್ಣ ಸುರಂಗ ರಸ್ತೆಗೆ ಶಂಕುಸ್ಥಾಪನೆ.

ಹಸಿರು ಬೆಂಗಳೂರು: ಕೆಂಪೇಗೌಡ ಜಯಂತಿ ಅಂಗವಾಗಿ ಬಿಡಿಎ ವತಿಯಿಂದ 15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ ನಡೆಸಿ ಗಿನ್ನೀಸ್ ದಾಖಲೆ.

ಸಂಚಾರ ಗ್ರಿಡ್: ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ‘ರಿಂಗ್ ರಸ್ತೆ ಗ್ರಿಡ್’ ಗುರುತಿಸಲು ಸ್ಪಷ್ಟ ನಿರ್ದೇಶನ.

ಕೃಷಿ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ

ತುಂಗಭದ್ರಾ ಅಣೆಕಟ್ಟು: ಹೊಸದಾಗಿ ಅಳವಡಿಸಲಾದ ಸ್ಪಿಲ್ ಗೇಟ್‌ಗಳ ಉದ್ಘಾಟನೆ; ಹೂಳು ತೆಗೆಯಲು ಕೇಂದ್ರ ಸರ್ಕಾರದ ಸಹಯೋಗ.

ಮೇಕೆದಾಟು ಯೋಜನೆ: ಭೂಕಂಪನ ಅಧ್ಯಯನ, ಮಣ್ಣು ಪರೀಕ್ಷೆಗೆ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನೀಡಿ, ಕೇಂದ್ರಕ್ಕೆ ಸಿಫಾರಸು.

ಬೆಳೆಗಾರರಿಗೆ ಆಸರೆ: ಮಾವು ಬೆಳೆಗಾರರಿಗೆ ಪ್ರೋತ್ಸಾಹ ಧನ ಮುಂದುವರಿಕೆ ಹಾಗೂ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ.

ವಾಲ್ ಆಫ್ ಗ್ರ್ಯಾಟಿಟ್ಯೂಡ್’: ಸಾರ್ವಜನಿಕ ಯೋಜನೆಗಳಿಗೆ ಜಮೀನು ನೀಡುವ ರೈತರು/ಭೂಮಾಲೀಕರಿಗೆ ಗೌರವ ಸಲ್ಲಿಸಲು ‘ಕೃತಜ್ಞತಾ ಗೋಡೆ’ ನಿರ್ಮಾಣ.

ಕಾನೂನು, ಸುವ್ಯವಸ್ಥೆ ಮತ್ತು ಸಾಮಾಜಿಕ ಭದ್ರತೆ

ರೌಡಿಗಳ ನಿಗ್ರಹ: ಪ್ರತಿ ಜಿಲ್ಲೆಯಲ್ಲೂ ‘ವಿಶೇಷ ರೌಡಿ ನಿಗ್ರಹ ಪಡೆ’ ರಚನೆಗೆ ನಿರ್ದೇಶನ.

ನಶೆ ಮುಕ್ತ ಕರ್ನಾಟಕ: 2028ರ ವೇಳೆಗೆ ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸುವ ಗುರಿ; ಸುಳಿವು ನೀಡಿದವರಿಗೆ ಬಹುಮಾನ ಹಾಗೂ ಪಾನ್ ಮಸಾಲ, ಗುಟ್ಕಾ ನಿಷೇಧಕ್ಕೆ ಎಚ್ಚರಿಕೆ.

ಮೀಟರ್ ಬಡ್ಡಿ ದಂಧೆಗೆ ತಡೆ: ಅಕ್ರಮ ಲೇವಾದೇವಿ ಮತ್ತು ಮೀಟರ್ ಬಡ್ಡಿ ದಂಧೆ ಕೋರರ ವಿರುದ್ಧ ಕಠಿಣ ಕ್ರಮ.

ಗ್ಯಾರಂಟಿ ಸುರಕ್ಷತೆ: ಗ್ಯಾರಂಟಿ ಯೋಜನೆಗಳು ಕೇವಲ ಕರ್ನಾಟಕದ ಜನರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಸೋರಿಕೆ ತಡೆಯಲು ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆ.

ಕೇಂದ್ರದೊಂದಿಗಿನ ಸಂಬಂಧ ಹಾಗೂ ರಾಜಕೀಯ ಸೌಹಾರ್ದತೆ:

ಕೇಂದ್ರದ ಭೇಟಿ ಮತ್ತು ಬೇಡಿಕೆಗಳು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಮೆಟ್ರೋ, RRTS ರೈಲು ಮತ್ತು ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನದ ಚರ್ಚೆ.

ದೆಹಲಿಯಲ್ಲಿ ಅಧಿಕಾರಿಗಳ ಪಡೆ: ರಾಜ್ಯದ ಹಿತ ಕಾಯಲು ದೆಹಲಿಯಲ್ಲಿರುವ ಐಎಎಸ್, ಐಪಿಎಸ್ ಹಾಗೂ ನಿವೃತ್ತ ಅಧಿಕಾರಿಗಳ ತಂಡ ರಚನೆ.

ಕಾವೇರಿ ಜಲ ವಿವಾದ: ಕಾವೇರಿ ವಿಚಾರದಲ್ಲಿ ತಮಿಳುನಾಡು ಸಿಎಂ ಜೊತೆ ಸಮಾಲೋಚನೆ ನಡೆಸಲು ಸಿದ್ಧತೆ ಹಾಗೂ ಸರ್ವಪಕ್ಷ ಸಭೆ.

ಇತರ ಪ್ರಮುಖ ನಿರ್ಧಾರಗಳು

ಪುಸ್ತಕ ಪ್ರೇಮಿ ಅಂಕೇಗೌಡರಿಗೆ ನೆರವು: ಸಾಹಿತ್ಯ ಸಂರಕ್ಷಣೆಗೆ ₹೫ ಕೋಟಿ ಅನುದಾನ ಹಾಗೂ ೨ ಎಕರೆ ಜಾಗ ಮಂಜೂರು.

ಬಡವರ ವಸತಿ: ನಿವೇಶನ ಬದಲು ಮನೆಗಳನ್ನೇ ನಿರ್ಮಿಸಿ ಬೇಗ ವಿತರಿಸಲು ಅಧಿಕಾರಿಗಳಿಗೆ ಖಡಕ್ ನಿರ್ದೇಶನ.

ಕಾವೇರಿ ನದಿ ಪಾತ್ರ: ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸಿಎಂಗಳು ಒಗ್ಗಟ್ಟಾಗಿ ಸೇರಿ ಕಾವೇರಿ-ಕೃಷ್ಣಾ ಪಾತ್ರದ ಬೆಳೆ ಹಾಗೂ ರೈತರ ರಕ್ಷಣೆಗೆ ಒಮ್ಮತದ ನಿರ್ಧಾರ.

ಪ್ರವಾಸೋದ್ಯಮ: ಕರಾವಳಿ ಭಾಗದಲ್ಲಿ ಸಫಾರಿ, ಜಲಸಾಹಸ ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕೆ ಯೋಜನೆ.

ಆಡಳಿತ, ಪರಿಹಾರ ಮತ್ತು ರಾಜಕೀಯ ಸಮಗ್ರತೆ:

ಕಾವೇರಿ ನೀರು ಹಂಚಿಕೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಸರ್ವಪಕ್ಷ ಸಭೆ ನಡೆಸಿ, ಎಲ್ಲ ವಿಪಕ್ಷಗಳ ವಿಶ್ವಾಸ ಹಾಗೂ ಅಭಿಪ್ರಾಯ ಸಂಗ್ರಹ.

ಅತಿವೃಷ್ಟಿ-ಅನಾವೃಷ್ಟಿ ವೀಕ್ಷಣೆ: ರಾಜ್ಯದ ಎಲ್ಲಾ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಪರಿಸ್ಥಿತಿ ವೀಕ್ಷಿಸಲು ಮತ್ತು ಪರಿಹಾರ ಕಾರ್ಯ ಚುರುಕುಗೊಳಿಸಲು ಸೂಚನೆ.

ರೈತರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಕೆ:

ಪ್ರತಿಭಟನಾ ನಿರತ ಕೃಷಿ ಪದವೀಧರರ ಸಮಸ್ಯೆ ಆಲಿಕೆ.

ಕೃಷಿ ಅಧಿಕಾರಿ ನೇಮಕಾತಿಯಲ್ಲಿ ಉದ್ಭವಿಸಿರುವ ಗೊಂದಲ ಬಗೆಹರಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ.

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಪರೀಕ್ಷೆಗಳನ್ನು ಮುಂದೂಡಲು ನಿರ್ಧಾರ.

ಸರ್ಕಾರಿ ನೌಕರರ ಜೊತೆ ಸಂವಾದ: ರಾಜ್ಯದ ಎಲ್ಲಾ ಸರ್ಕಾರಿ ನೌಕರರೊಂದಿಗೆ ಚರ್ಚಿಸಿ ಬರ ನಿರ್ವಹಣೆ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಬಲ ನೀಡಿಕೆ.

‘ಟೀಮ್ ಕರ್ನಾಟಕ’ ಕರೆ:

“224 ಶಾಸಕರೂ ನನಗೆ ಒಂದೇ; ಸದನದ ಹೊರಗೆ ರಾಜಕೀಯ ಮಾಡೋಣ, ಸದನದ ಒಳಗೆ ಒಟ್ಟಾಗಿ ಜನರಿಗಾಗಿ ಕೆಲಸ ಮಾಡೋಣ” ಎಂದು ವಿಪಕ್ಷಗಳಿಗೆ ಕರೆ.

“ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವಂತೆ ಆಡಳಿತ ನಡೆಸುವೆ” ಎಂದು ಸಿಎಂ ಅಭಯ.

ಸ್ವಾತಂತ್ರ್ಯ ದಿನಾಚರಣೆಯ ಅಭಿವೃದ್ಧಿ ನೀಲನಕ್ಷೆ:

3 ಟ್ರಿಲಿಯನ್ ಆರ್ಥಿಕತೆ: 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‌ಗೆ ಏರಿಸುವ ಬೃಹತ್ ಗುರಿ.

ಕೃಷಿ ಕ್ಷೇತ್ರದ ತಂತ್ರಜ್ಞಾನ (‘ಮುಖ್ಯಮಂತ್ರಿ ರೈತ ಚೈತನ್ಯ’):

ಡ್ರೋನ್ ಹಾಗೂ ಉಪಗ್ರಹಗಳ ಮೂಲಕ ಬೆಳೆ ಸಮೀಕ್ಷೆ ಮತ್ತು ನೈಜ ಸಮಯದ ಮಾಹಿತಿ ಲಭ್ಯತೆ.

‘ರೈತ ಮಿತ್ರ’ ಕಾರ್ಯಕ್ರಮ: 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ 50% ಸಹಾಯಧನ.

ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆ:

‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’: ಹಿಂದುಳಿದ ಜಿಲ್ಲೆಗಳಲ್ಲಿ ‘ಉದ್ಯೋಗ ನಿಧಿ’ ಮೂಲಕ ಪ್ರೋತ್ಸಾಹ.

ಹೊಸ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರತಿ ಉದ್ಯೋಗಕ್ಕೆ ತಿಂಗಳಿಗೆ ₹೨,೫೦೦ ಪ್ರೋತ್ಸಾಹಧನ.

ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಯ ಗುರಿ.

ದೊಡ್ಡಬಳ್ಳಾಪುರ: 20 ಸಾವಿರ ಕೋಟಿ ರೂ. ಹೂಡಿಕೆಯಲ್ಲಿ ‘ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್’ ಸ್ಥಾಪನೆ, 1 ಲಕ್ಷ ಉದ್ಯೋಗ ಸೃಷ್ಟಿ.

ಶಿಕ್ಷಣ ಮತ್ತು ಮೀಸಲಾತಿ (‘ಸಹಾಯ ಹಸ್ತ’):

ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ 7.5% ಮೀಸಲಾತಿ.

ನಗರ ಮೂಲಸೌಕರ್ಯ: ರಾಜ್ಯದ ಪ್ರತಿಯೊಂದು ಪಟ್ಟಣ ಮತ್ತು ನಗರಗಳಲ್ಲಿ ರಿಂಗ್ ರಸ್ತೆ ಹಾಗೂ ‘ಮೊಬಿಲಿಟಿ ಗ್ರಿಡ್’ ಅಭಿವೃದ್ಧಿ.

ತಂತ್ರಜ್ಞಾನ, AI ಹಾಗೂ ಜಾಗತಿಕ ಸಹಭಾಗಿತ್ವ

ಆಂಥ್ರೋಪಿಕ್ AI ಸಹಭಾಗಿತ್ವ: ಆಡಳಿತ ಕೌಶಲ್ಯಾಭಿವೃದ್ಧಿ ಹಾಗೂ ಡೀಪ್ ಟೆಕ್ ಪ್ರಗತಿಗಾಗಿ ಕರ್ನಾಟಕ ಸರ್ಕಾರ ಮತ್ತು ಕೃತಕ ಬುದ್ಧಿಮತ್ತೆಯ ಜಾಗತಿಕ ಸಂಸ್ಥೆ ‘ಆಂಥ್ರೋಪಿಕ್’ ನಡುವೆ ಐತಿಹಾಸಿಕ ಒಪ್ಪಂದ.

ಶಾಲೆಗಳಲ್ಲಿ AI ಶಿಕ್ಷಣ: 6ನೇ ತರಗತಿಯಿಂದಲೇ ಎಲ್ಲಾ ಶಾಲೆಗಳಲ್ಲಿ AI ಶಿಕ್ಷಣ ಪರಿಚಯ.

ಶೈಕ್ಷಣಿಕ ಅಭಿಯಾನ: ‘AI ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಕಾರ್ಯಕ್ರಮಗಳ ಚಾಲನೆ.

AI ಹಬ್‌ಗಳು ಮತ್ತು ಗ್ಲೋಬಲ್ ಸೆಂಟರ್‌ಗಳು:

ರಾಜ್ಯದ ವಿವಿಧ ಭಾಗಗಳಲ್ಲಿ ‘AI ಹಬ್’ಗಳ ಸ್ಥಾಪನೆ.

‘ಬಿಯಾಂಡ್ ಬೆಂಗಳೂರು’ ಯೋಜನೆ ಅಡಿಯಲ್ಲಿ 5 ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ.

ಇದನ್ನೂ ಓದಿ: ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ 100 ದಿನದ ಸಂಭ್ರಮ: ನಾಳೆ ವಿಧಾನಸೌಧದಲ್ಲಿ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ

ಸಾಮಾಜಿಕ ನ್ಯಾಯ, ಆಡಳಿತ ಮತ್ತು ನಗರಾಭಿವೃದ್ಧಿ

ಲಾಲ್ ಬಾಗ್ ಮಾದರಿ ಉದ್ಯಾನವನಗಳು: ಬೆಂಗಳೂರಿನ ಹಸಿರು ವಲಯ ವಿಸ್ತರಣೆಗೆ ಲಾಲ್ ಬಾಗ್ ಮಾದರಿಯ 3 ಹೊಸ ಬೃಹತ್ ಉದ್ಯಾನವನಗಳ ನಿರ್ಮಾಣ.

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ: ಸಾಮಾಜಿಕ ನ್ಯಾಯ ಒದಗಿಸಲು ಬದ್ಧತೆ ವ್ಯಕ್ತಪಡಿಸಿ ಹಿಂದುಳಿದ ವರ್ಗಗಳ ಸಮೀಕ್ಷೆ ಜಾರಿಗೆ ತೀರ್ಮಾನ.

CSR ನಿಧಿ ಉಸ್ತುವಾರಿಗೆ IAS ಅಧಿಕಾರಿ: ರಾಜ್ಯಕ್ಕೆ ಹರಿದುಬರುವ ಸಿಎಸ್ ಆರ್ ನಿಧಿಯ ಸರಿಯಾದ ಬಳಕೆ ಮತ್ತು ಉಸ್ತುವಾರಿಗೆ ಪ್ರತ್ಯೇಕ ಐಎಎಸ್ ಅಧಿಕಾರಿಯ ನೇಮಕ.

ಅಮೆರಿಕ ರಾಯಭಾರಿ ಭೇಟಿ: ಅಮೆರಿಕ ರಾಯಭಾರಿ ಸೆರ್ಗಿಯೋ ಗೊರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಬೆಂಗಳೂರಿನಲ್ಲಿ ಅಮೆರಿಕದ ಶಾಶ್ವತ ರಾಯಭಾರಿ ಕಚೇರಿ ಸ್ಥಾಪನೆಗೆ ಮನವಿ.

ಬಿಡದಿ ಟೌನ್‌ಶಿಪ್ ಪರಿಶೀಲನಾ ಸಮಿತಿ: ಬಿಡದಿ ಯೋಜನೆ ವಿವಾದ/ಅಭಿಪ್ರಾಯಗಳ ಪರಿಶೀಲನೆಗೆ ನ್ಯಾ. ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ, 30 ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ.

ಮಾಲೂರು ಅಭಿವೃದ್ಧಿ: ಮಾಲೂರು ಕ್ಷೇತ್ರದಲ್ಲಿ 3,200 ಕೋಟಿ ಮೊತ್ತದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.

ಅಲೆಮಾರಿ ಮತ್ತು ಆದಿವಾಸಿ ಆಯೋಗ: ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ಆಯೋಗ ರಚನೆ ಮಾಡಿ ಕೇವಲ 3 ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವಿಕೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Wed, 9 September 26

Follow Us
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!