ದೇವಸ್ಥಾನದ ಸ್ಪೀಕರ್ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಜೈಪುರದ ನಿವಾರು ರಸ್ತೆಯ ಗಣೇಶ್ ನಗರ ಮೇನ್‌ನಲ್ಲಿರುವ ಶಿವ ದೇವಾಲಯದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಪಂಡಿತ್ ರಾಮಕೃಷ್ಣ ಅವರು ಸಂಜೆ ಪೂಜೆ ಮತ್ತು ಆರತಿ ಮಾಡುತ್ತಿದ್ದಾಗ, ನೆರೆಹೊರೆಯ ಕುಟುಂಬದ ಯುವಕರು ಲೌಡ್ಸ್ಪೀಕರ್ ಶಬ್ದ ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಧ್ವನಿ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ಆರಂಭವಾಗಿದೆ. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮಾತಿನ ಚಕಮಕಿ ತೀವ್ರಗೊಂಡು ಯುವಕನೊಬ್ಬ ಅರ್ಚಕ ರಾಮಕೃಷ್ಣ ಅವರನ್ನು ಕೆಳಗೆ ತಳ್ಳಿ, ಕಾಲಿನಿಂದ ಒದ್ದು ಹಾಗೂ ಮುಷ್ಟಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹಲ್ಲೆಯ ಸಮಯದಲ್ಲಿ ಅರ್ಚಕರ ವಸ್ತ್ರಗಳು ಹರಿದುಹೋಗಿದೆ.
ಜೈಪುರ, ಸೆಪ್ಟೆಂಬರ್ 28: ರಾಜಸ್ಥಾನದ ಜೈಪುರದಲ್ಲಿರುವ ದೇವಸ್ಥಾನದಲ್ಲಿ ಸಂಜೆ ಪೂಜೆ ಹಾಗೂ ಭಜನೆ ವೇಳೆ ಲೌಡ್ಸ್ಪೀಕರ್ ಶಬ್ದ ಕಡಿಮೆ ಮಾಡುವಂತೆ ಒತ್ತಾಯಿಸಲು ಬಂದ ನೆರೆಹೊರೆಯವರ ಹಾಗೂ ವೃದ್ಧ ಅರ್ಚಕರ ನಡುವೆ ಜಗಳ ನಡೆದು, ಅರ್ಚಕನ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದೆ. ಈ ಹಲ್ಲೆಯ ಸಂಪೂರ್ಣ ದೃಶ್ಯಾವಳಿ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಜೈಪುರದ ಕರ್ಧಾನಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೈಪುರದ ನಿವಾರು ರಸ್ತೆಯ ಗಣೇಶ್ ನಗರ ಮೇನ್‌ನಲ್ಲಿರುವ ಶಿವ ದೇವಾಲಯದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಪಂಡಿತ್ ರಾಮಕೃಷ್ಣ ಅವರು ಸಂಜೆ ಪೂಜೆ ಮತ್ತು ಆರತಿ ಮಾಡುತ್ತಿದ್ದಾಗ, ನೆರೆಹೊರೆಯ ಕುಟುಂಬದ ಯುವಕರು ಲೌಡ್ಸ್ಪೀಕರ್ ಶಬ್ದ ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಧ್ವನಿ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ಆರಂಭವಾಗಿದೆ. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಮಾತಿನ ಚಕಮಕಿ ತೀವ್ರಗೊಂಡು ಯುವಕನೊಬ್ಬ ಅರ್ಚಕ ರಾಮಕೃಷ್ಣ ಅವರನ್ನು ಕೆಳಗೆ ತಳ್ಳಿ, ಕಾಲಿನಿಂದ ಒದ್ದು ಹಾಗೂ ಮುಷ್ಟಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹಲ್ಲೆಯ ಸಮಯದಲ್ಲಿ ಅರ್ಚಕರ ವಸ್ತ್ರಗಳು ಹರಿದುಹೋಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ