AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಜನೆ, ಭಕ್ತಿ ಪರಂಪರೆಗೆ ಕಾಂಗ್ರೆಸ್‌ನಿಂದ ಅವಮಾನ’; ಮೋದಿ ಕುರಿತ ಪ್ರಿಯಾಂಕ್ ಖರ್ಗೆ ಟೀಕೆಗೆ ಬಿಜೆಪಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಜೆ 'ಭಜನ್ ಕ್ಲಬ್ಬಿಂಗ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಭಜನ್ ಕ್ಲಬ್ಬಿಂಗ್​ನಲ್ಲಿ ಪಾಲ್ಗೊಳ್ಳಲು ಮೋದಿಯವರಿಗೆ ಸಮಯವಿದೆ. ಆದರೆ, ಚುನಾವಣಾ ಆಯೋಗದ ಮೂಲಕ ಪ್ರಜಾಪ್ರಭುತ್ವವನ್ನು ಕ್ಲಬ್ಬಿಂಗ್ ಮಾಡುತ್ತಿರುವ ಕುರಿತಾದ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಅವರ ಬಳಿ ಸಮಯವಿಲ್ಲ" ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಕಳೆದ 13 ವರ್ಷಗಳಿಂದಲೂ ಪ್ರಧಾನಿ ಮೋದಿ ಇದೇ ಮಾದರಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್​​​ನ ಆರೋಪಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಿದೆ. ಭಜನೆ ಮತ್ತು ಭಕ್ತಿ ಪರಂಪರೆಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ ಎಂದು ಬಿಜೆಪಿ ಟೀಕಿಸಿದೆ.

‘ಭಜನೆ, ಭಕ್ತಿ ಪರಂಪರೆಗೆ ಕಾಂಗ್ರೆಸ್‌ನಿಂದ ಅವಮಾನ’; ಮೋದಿ ಕುರಿತ ಪ್ರಿಯಾಂಕ್ ಖರ್ಗೆ ಟೀಕೆಗೆ ಬಿಜೆಪಿ ತಿರುಗೇಟು
ಭಜನ್ ಕ್ಲಬ್ಬಿಂಗ್​ನಲ್ಲಿ ಪ್ರಧಾನಿ ಮೋದಿ Image Credit source: PTI
ಸುಷ್ಮಾ ಚಕ್ರೆ
|

Updated on: Sep 26, 2026 | 3:55 PM

Share

ನವದೆಹಲಿ, ಸೆಪ್ಟೆಂಬರ್ 26: ಪ್ರಧಾನಮಂತ್ರಿ ನರೇಂದ್ರ ಮೋದಿ ‘ಭಜನ್ ಕ್ಲಬ್ಬಿಂಗ್’ನಲ್ಲಿ ಭಾಗವಹಿಸಿದ್ದನ್ನು ಲೇವಡಿ ಮಾಡಿದ್ದ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ಪಕ್ಷವು ಭಾರತದ ಸನಾತನ ಸಾಂಸ್ಕೃತಿಕ ಪರಂಪರೆಯಾದ ಭಜನೆ ಮತ್ತು ಭಕ್ತಿ ಮಾರ್ಗವನ್ನು ನಿರಂತರವಾಗಿ ನಿಂದಿಸುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಾಮಾಜಿಕ ಜಾಲತಾಣ ‘ಎಕ್ಸ್’ (X) ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್, “ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಭಾರತದ ಅದ್ಭುತ ನಾಗರಿಕ ಮತ್ತು ಸಾಂಸ್ಕೃತಿಕ ಪರಂಪರೆಯಾದ ಭಜನೆ ಹಾಗೂ ಭಕ್ತಿಯನ್ನು ಲೇವಡಿ ಮಾಡಿ ಅವಮಾನಿಸಿದೆ. ಕೇವಲ ಸ್ವಾರ್ಥವನ್ನೇ ತುಂಬಿಕೊಂಡಿರುವ ಕಾಂಗ್ರೆಸ್‌ನ ಗಾಂಧಿ ಕುಟುಂಬದ ಗುಣಗಾನ ಮಾಡುವುದನ್ನಷ್ಟೇ ಕಲಿತಿರುವ ‘ಜೂನಿಯರ್ ಖರ್ಗೆ’ ಅವರಿಂದ ನೀವು ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಜನ್ ಕ್ಲಬ್ಬಿಂಗ್​ನಲ್ಲಿ ಮೋದಿ; ಯುವಕರ ಜೊತೆ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ 

” ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಸತತ 3 ಲೋಕಸಭಾ ಚುನಾವಣೆಗಳಲ್ಲಿ ಸೋತಿದೆ. ಸುಮಾರು 100ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಮುಖಭಂಗ ಅನುಭವಿಸಿದೆ. ಹೀಗಿರುವಾಗ, ರಾಹುಲ್ ಗಾಂಧಿ ಅವರ ಈ ಸಾಲು ಸಾಲು ಚುನಾವಣಾ ವೈಫಲ್ಯಗಳ ಹೊಣೆಗಾರಿಕೆಯನ್ನು ಪ್ರಶ್ನಿಸುವ ಧೈರ್ಯ ಜೂನಿಯರ್ ಖರ್ಗೆ ಅವರಿಗೆ ಇದೆಯೇ?” ಎಂದು ಅವರು ಸವಾಲು ಹಾಕಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?:

“ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮಕ್ಕೆ ಹಾಜರಾಗಲು ಸಮಯವಿದೆ, ಆದರೆ ಚುನಾವಣಾ ಆಯೋಗದ ಮೂಲಕ ಪ್ರಜಾಪ್ರಭುತ್ವದ ಕ್ಲಬ್ಬಿಂಗ್ ಕುರಿತಾದ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಸಮಯವಿಲ್ಲ” ಎಂದು ಕರ್ನಾಟಕದ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದರು.

“ಕಳೆದ 13 ವರ್ಷಗಳಿಂದ ತಮ್ಮ ಸರ್ಕಾರಕ್ಕೆ ಯಾವುದೇ ಕಷ್ಟಕರ ಹಾಗೂ ಗಂಭೀರ ಪ್ರಶ್ನೆಗಳು ಎದುರಾದಾಗಲೆಲ್ಲಾ ಪ್ರಧಾನಿ ಮೋದಿಯವರಿಗೆ ಉತ್ತರ ನೀಡದೆ ಮೌನಕ್ಕೆ ಶರಣಾಗುವುದು ಅಭ್ಯಾಸವಾಗಿಬಿಟ್ಟಿದೆ. ಹಬ್ಬ, ಆಚರಣೆಗಳು ಮತ್ತು ಸಂಭ್ರಮದ ಸ್ಥಳಗಳಲ್ಲಿ ಅವರ ಉಪಸ್ಥಿತಿ ಇರುತ್ತದೆ, ಆದರೆ ಹೊಣೆಗಾರಿಕೆಯ ವಿಚಾರ ಬಂದಾಗ ಅವರ ಮೌನವೇ ಉತ್ತರವಾಗುತ್ತದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದರು.

ಇದನ್ನೂ ಓದಿ: ‘ಭಜನ್ ಕ್ಲಬ್ಬಿಂಗ್‌ಗೆ ಪ್ರಧಾನಿಗೆ ಸಮಯವಿದೆ, ಪ್ರಜಾಪ್ರಭುತ್ವದ ಪ್ರಶ್ನೆಗೆ ಮೌನವೇಕೆ?’; ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಏನಿದು ‘ಭಜನ್ ಕ್ಲಬ್ಬಿಂಗ್’?:

ಶುಕ್ರವಾರ ಸಂಜೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಎದುರಿನ ಪಾರ್ಕ್‌ನಲ್ಲಿ ಜನಸಂಘದ ಹಿರಿಯ ಸಿದ್ಧಾಂತಕಾರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ 110ನೇ ಜಯಂತಿಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ‘ಭಜನ್ ಕ್ಲಬ್ಬಿಂಗ್’ ಎಂಬುದು ಇಂದಿನ ಯುವ ಪೀಳಿಗೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ನೂತನ ಸಾಂಸ್ಕೃತಿಕ ಟ್ರೆಂಡ್. ಯುವಜನರು ಮದ್ಯಪಾನ ಹಾಗೂ ಇತರ ದುರಭ್ಯಾಸಗಳಿಲ್ಲದ ಕ್ಲಬ್ ಮಾದರಿಯ ಹೈ-ಎನರ್ಜಿ ವಾತಾವರಣದಲ್ಲಿ ಒಟ್ಟುಗೂಡಿ ಭಕ್ತಿಗೀತೆಗಳು ಹಾಗೂ ಭಜನೆಗಳನ್ನು ಹಾಡಿ ಕುಣಿಯುತ್ತಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂಭಾಗದ ಸಾಲಿನಲ್ಲಿ ಕುಳಿತು ಯುವಜನರೊಂದಿಗೆ ಬೆರೆತು, ಚಪ್ಪಾಳೆ ತಟ್ಟುತ್ತಾ ಸಂಗೀತ ವಾದ್ಯ ಬಾರಿಸಿ, ಭಜನೆಯನ್ನು ಎಂಜಾಯ್ ಮಾಡಿದ್ದರು. ಇದನ್ನು ಕಾಂಗ್ರೆಸ್ ಟೀಕಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ
Live: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ KPCC ವತಿಯಿಂದ ಪ್ರತಿಭಟನೆ
ತಾಂಡವ್ ರಾಮ್ ಕಂಬ್ಯಾಕ್ ಬಗ್ಗೆ ಸೂಚನೆ ಕೊಟ್ಟ ಸುದೀಪ್
ತಾಂಡವ್ ರಾಮ್ ಕಂಬ್ಯಾಕ್ ಬಗ್ಗೆ ಸೂಚನೆ ಕೊಟ್ಟ ಸುದೀಪ್
ಕಾವೇರಿ ಆರತಿ: ಉತ್ತಮ ಮಳೆ-ಬೆಳೆಗಾಗಿ ಸಾಲೂರು ಮಠದ ಶ್ರೀಗಳಿಂದ ವಿಶೇಷ ಪೂಜೆ!
ಕಾವೇರಿ ಆರತಿ: ಉತ್ತಮ ಮಳೆ-ಬೆಳೆಗಾಗಿ ಸಾಲೂರು ಮಠದ ಶ್ರೀಗಳಿಂದ ವಿಶೇಷ ಪೂಜೆ!
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಆರ್. ಪಾಟೀಲ್ ಗರಂ
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಆರ್. ಪಾಟೀಲ್ ಗರಂ
ಹಾಲಿನ ದರ ಏರಿಕೆಯಾದ್ರೆ ಟೀ, ಕಾಫಿ ದರವೂ ಹೆಚ್ಚಳವಾಗುವ ಸಾಧ್ಯತೆ!
ಹಾಲಿನ ದರ ಏರಿಕೆಯಾದ್ರೆ ಟೀ, ಕಾಫಿ ದರವೂ ಹೆಚ್ಚಳವಾಗುವ ಸಾಧ್ಯತೆ!
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!