- TV9 Kannada Kannada News Photos Cricket Photos Kuldeep Yadav's Dominant 4-Wicket Haul vs WI: A New ODI Record for India
ಗೊಂಚಲು ಗೊಂಚಲು ವಿಕೆಟ್ ಪಡೆದವರ ಪಟ್ಟಿಯಲ್ಲಿ ಕುಲ್ದೀಪ್ಗೆ 2ನೇ ಸ್ಥಾನ..!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿ ಮಿಂಚಿದರು. ಇದು ಅವರ ವೃತ್ತಿಜೀವನದ 10ನೇ 4 ವಿಕೆಟ್ ಗೊಂಚಲಾಗಿದ್ದು, ಭಾರತದ ಪರ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊಹಮ್ಮದ್ ಶಮಿ ನಂತರದ ಸ್ಥಾನದಲ್ಲಿರುವ ಕುಲ್ದೀಪ್, ಕನ್ನಡಿಗರಾದ ಕುಂಬ್ಳೆ ಮತ್ತು ಶ್ರೀನಾಥ್ ದಾಖಲೆಗಳನ್ನೂ ಮೀರಿಸಿದ್ದಾರೆ.
Updated on:Sep 27, 2026 | 6:40 PM

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಕಬಳಿಸಿದರು. ಇದು ಅವರ ಏಕದಿನ ವೃತ್ತಿಜೀವನದಲ್ಲಿ 10 ನೇ ನಾಲ್ಕು ವಿಕೆಟ್ಗಳ ಗೊಂಚಲಾಗಿದೆ. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ ಕುಲ್ದೀಪ್ ಅವರ ಎರಡನೇ ನಾಲ್ಕು ವಿಕೆಟ್ಗಳ ಗೊಂಚಲು ಇದು(PC-PTI).

ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿ ಕೇವಲ 40 ರನ್ ನೀಡಿ 1 ಮೇಡನ್ ಜೊತೆಗೆ 4 ವಿಕೆಟ್ ಪಡೆದರು. ಅವರು ಜಾನ್ ಕ್ಯಾಂಪ್ಬೆಲ್ (62), ಜಸ್ಟಿನ್ ಗ್ರೀವ್ಸ್ (101), ಶೈ ಹೋಪ್ (12) ಮತ್ತು ಜ್ಯುವೆಲ್ ಆಂಡ್ರ್ಯೂ (0) ಅವರ ವಿಕೆಟ್ ಉರುಳಿಸುವ ಯಶಸ್ವಿಯಾದರು(PC-PTI).

ಈ 4 ವಿಕೆಟ್ಗಳ ಗೊಂಚಲಿನೊಂದಿಗೆ ಕುಲ್ದೀಪ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ಬಾರಿ 4 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಕುಲ್ದೀಪ್ ಇದುವರೆಗೆ 12 ಬಾರಿ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೊಹಮ್ಮದ್ ಶಮಿ ಇದುವರೆಗೆ 16 ಬಾರಿ ಈ ಸಾಧನೆ ಮಾಡಿದ್ದಾರೆ(PC-PTI).

ಇನ್ನು ಈ ಪಟ್ಟಿಯಲ್ಲಿ ಅಜಿತ್ ಅಗರ್ಕರ್ ಮತ್ತು ಕುಲ್ದೀಪ್ ಯಾದವ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದು, ಇಬ್ಬರು ತಲಾ 12 ಬಾರಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಕನ್ನಡಿಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ ತಲಾ 10 ಬಾರಿ 4 ವಿಕೆಟ್ ಗೊಂಚಲು ಪಡೆದಿದ್ದಾರೆ(PC-PTI).

2017 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ ಕುಲ್ದೀಪ್ ಇಲ್ಲಿಯವರೆಗೆ ಈ ತಂಡದ ವಿರುದ್ಧ 20 ಪಂದ್ಯಗಳನ್ನು ಆಡಿದ್ದಾರೆ. ಆಡಿರುವ 19 ಇನ್ನಿಂಗ್ಸ್‌ಗಳಲ್ಲಿ 20.27 ರ ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಎರಡು ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದು, ತಮ್ಮ ಏಕದಿನ ವೃತ್ತಿಜೀವನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅತ್ಯಧಿಕ ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ(PC-PTI).

2017 ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕುಲ್ದೀಪ್ ಇಲ್ಲಿಯವರೆಗೆ 122 ಪಂದ್ಯಗಳನ್ನು ಆಡಿದ್ದು, 119 ಇನ್ನಿಂಗ್ಸ್‌ಗಳಲ್ಲಿ 26.70 ಸರಾಸರಿಯಲ್ಲಿ 198 ವಿಕೆಟ್‌ಗಳನ್ನು ಪಡೆದಿದ್ದಾರೆ. 10 ಬಾರಿ ನಾಲ್ಕು ವಿಕೆಟ್ಗಳ ಗೊಂಚಲು ಮತ್ತು ಎರಡು ಬಾರಿ ಐದು ವಿಕೆಟ್ ಗೊಂಚಲುಗಳನ್ನು ಪಡೆದಿದ್ದಾರೆ. ಇನ್ನು 2026 ರಲ್ಲಿ ಐದು ಏಕದಿನ ಪಂದ್ಯಗಳನ್ನು ಆಡಿರುವ ಕುಲ್ದೀಪ್ ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಈ ವರ್ಷದ ಅವರ ಮೊದಲ ನಾಲ್ಕು ವಿಕೆಟ್ಗಳ ಗೊಂಚಲಾಗಿದೆ(PC-PTI).
Published On - 6:40 pm, Sun, 27 September 26

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



