AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Heart Day 2026: ಹೃದಯದ ಆರೋಗ್ಯಕ್ಕೆ ದೊಡ್ಡ ಬದಲಾವಣೆ ಬೇಡ, ದಿನನಿತ್ಯದ ಈ ಸಣ್ಣ ಅಭ್ಯಾಸಗಳೇ ಮುಖ್ಯ

ವಿಶ್ವ ಹೃದಯ ದಿನದಂದು ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ. ಪ್ರತಿದಿನದ ಜೀವನದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ತಪ್ಪಿಸುವುದು, ಉಪ್ಪಿನ ಸೇವನೆ ಕಡಿಮೆ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು, ಧೂಮಪಾನದಿಂದ ದೂರವಿರುವುದು ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸುವಂತಹ ಸಣ್ಣ ಅಭ್ಯಾಸಗಳು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡಬಹುದು.

World Heart Day 2026: ಹೃದಯದ ಆರೋಗ್ಯಕ್ಕೆ ದೊಡ್ಡ ಬದಲಾವಣೆ ಬೇಡ, ದಿನನಿತ್ಯದ ಈ ಸಣ್ಣ ಅಭ್ಯಾಸಗಳೇ ಮುಖ್ಯ
World Heart Day 2026
ಮಾಲಾಶ್ರೀ ಅಂಚನ್​
| Edited By: |

Updated on: Sep 29, 2026 | 7:22 AM

Share

ಮುಖ್ಯಾಂಶಗಳು

  • ಹೃದಯ ಆರೋಗ್ಯಕ್ಕಾಗಿ ಪ್ರತಿದಿನ ಈ ಸಣ್ಣ ಬದಲಾವಣೆಗಳನ್ನು ಮಾಡಿ!
  • ಹೃದಯದ ಮೇಲೆ ಪರಿಣಾಮ ಬೀರುವ ಈ ವಿಷಯ ಗೊತ್ತೇ?
  • ಹೃದಯದ ಆರೋಗ್ಯಕ್ಕಾಗಿ ದುಬಾರಿ ಆಹಾರಗಳನ್ನೇ ಖರೀದಿಸಬೇಕೆಂದಿಲ್ಲ.

ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು (World Heart Day) ಆಚರಿಸಲಾಗುತ್ತದೆ. ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಹೃದಯದ ಆರೋಗ್ಯದ ಮಹತ್ವವನ್ನು ಜನರಿಗೆ ತಿಳಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು ಈ ದಿನದ ಪ್ರಮುಖ ಉದ್ದೇಶ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನದ ಜೀವನಶೈಲಿಯ ಭಾಗವಾಗಬೇಕು ಎಂಬ ಸಂದೇಶವನ್ನು ಈ ದಿನ ನೀಡುತ್ತದೆ.

ಹೃದಯದ ಆರೋಗ್ಯ ಎಂದಾಕ್ಷಣ ವ್ಯಾಯಾಮ, ಆಹಾರ ನಿಯಂತ್ರಣ, ತೂಕ ಇಳಿಕೆ ಇವೇ ನೆನಪಿಗೆ ಬರುತ್ತವೆ. ಆದರೆ ಹೃದಯವನ್ನು ಆರೋಗ್ಯವಾಗಿಡಲು ದೊಡ್ಡ ಬದಲಾವಣೆಗಳನ್ನೇ ಮಾಡಬೇಕೆಂದಿಲ್ಲ. ನಾವು ಪ್ರತಿದಿನ ಮಾಡುವ ಕೆಲವು ಸಣ್ಣ ಅಭ್ಯಾಸಗಳನ್ನು ಬದಲಾಯಿಸುವುದರಿಂದಲೂ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಬಹುದು.

ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಭ್ಯಾಸ ಬದಲಿಸಿ

ಕೆಲಸದ ಕಾರಣದಿಂದ ನಿರಂತರವಾಗಿ ಹಲವು ಗಂಟೆಗಳ ಕಾಲ ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ದಿನದ ಒಂದು ಭಾಗವನ್ನು ದೈಹಿಕ ಚಟುವಟಿಕೆಯಿಲ್ಲದೆ ಕಳೆಯುವುದು ಆರೋಗ್ಯಕ್ಕೆ ಅನುಕೂಲಕರವಲ್ಲ. ನಿಯಮಿತ ದೈಹಿಕ ಚಟುವಟಿಕೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಕೆಲಸದ ಮಧ್ಯೆ ಎದ್ದು ಸ್ವಲ್ಪ ನಡೆಯುವುದು, ಮೆಟ್ಟಿಲು ಬಳಸುವುದು ಅಥವಾ ಸಂಜೆ ನಡಿಗೆಗೆ ಸಮಯ ಮೀಸಲಿಡುವುದು ದಿನಚರಿಯ ಭಾಗವಾಗಬಹುದು.

ಉಪ್ಪಿನ ಪ್ರಮಾಣದ ಬಗ್ಗೆ ಗಮನವಿರಲಿ

ನಾನು ಊಟಕ್ಕೆ ಹೆಚ್ಚು ಉಪ್ಪು ಹಾಕುವುದಿಲ್ಲ ಎಂದರೆ ಮಾತ್ರ ಉಪ್ಪಿನ ಸೇವನೆ ಕಡಿಮೆ ಎಂದರ್ಥವಲ್ಲ. ಉಪ್ಪಿನಕಾಯಿ, ಪ್ಯಾಕೆಟ್ ತಿಂಡಿಗಳು, ಸಂಸ್ಕರಿಸಿದ ಆಹಾರ, ಸಾಸ್‌ಗಳು ಮತ್ತು ಹೊರಗಿನ ಆಹಾರಗಳಲ್ಲಿಯೂ ಹೆಚ್ಚಿನ ಪ್ರಮಾಣದ ಉಪ್ಪು ಇರಬಹುದು. WHO ವಯಸ್ಕರಿಗೆ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವಂತೆ ಶಿಫಾರಸು ಮಾಡುತ್ತದೆ. ಹೆಚ್ಚಿನ ಉಪ್ಪಿನ ಸೇವನೆಯು ರಕ್ತದೊತ್ತಡ ಹೆಚ್ಚಲು ಕಾರಣವಾಗಬಹುದು.

ಹೃದಯದ ಆರೋಗ್ಯಕ್ಕಾಗಿ ದುಬಾರಿ ಆಹಾರಗಳನ್ನೇ ಖರೀದಿಸಬೇಕೆಂದಿಲ್ಲ. ತರಕಾರಿ, ಹಣ್ಣು, ಬೇಳೆಕಾಳು, ಸಂಪೂರ್ಣ ಧಾನ್ಯಗಳು ಮತ್ತು ಬೀಜಗಳಂತಹ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸುವುದು ಮುಖ್ಯ. ಅದೇ ವೇಳೆ ಹೆಚ್ಚು ಉಪ್ಪು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಹಾಗೂ ಟ್ರಾನ್ಸ್ ಕೊಬ್ಬು ಹೊಂದಿರುವ ಆಹಾರವನ್ನು ಕಡಿಮೆ ಮಾಡುವುದು ಸೂಕ್ತ.

Wet Hair: ಒದ್ದೆಯಾದ ಕೂದಲಿನೊಂದಿಗೆ ಮಲಗಬಾರದು ಎನ್ನುವುದೇಕೆ?

ಧೂಮಪಾನ ಕಡಿಮೆ ಮಾಡುವುದಕ್ಕಿಂತ ಬಿಡುವುದು ಮುಖ್ಯ

ಸಿಗರೇಟ್ ಅಥವಾ ಇತರ ತಂಬಾಕು ಉತ್ಪನ್ನಗಳ ಬಳಕೆ ಹೃದಯರಕ್ತನಾಳದ ಕಾಯಿಲೆಗಳ ಪ್ರಮುಖ ಅಪಾಯಕಾರಕ ಅಂಶವಾಗಿದೆ. ದಿನಕ್ಕೆ ಒಂದೆರಡು ಸಿಗರೇಟ್ ಮಾತ್ರ ಎಂದುಕೊಂಡು ಅಪಾಯ ಕಡಿಮೆ ಎಂದು ಭಾವಿಸುವುದು ಸರಿಯಲ್ಲ. ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಹೃದಯದ ಆರೋಗ್ಯಕ್ಕೆ ಪ್ರಮುಖ ಹೆಜ್ಜೆಯಾಗಿದೆ. ಪರೋಕ್ಷವಾಗಿ ಹೊಗೆ ಸೇವಿಸುವುದೂ ಹಾನಿಕಾರಕ.

ರಕ್ತದೊತ್ತಡ ಗೊತ್ತಿದೆಯೇ?

ಹೆಚ್ಚಿನ ರಕ್ತದೊತ್ತಡಕ್ಕೆ ಯಾವಾಗಲೂ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಳ್ಳುವ ಬದಲು ನಿಯಮಿತವಾಗಿ ರಕ್ತದೊತ್ತಡ ಪರೀಕ್ಷಿಸಿಕೊಳ್ಳುವುದು ಮುಖ್ಯ. ಅಗತ್ಯವಿದ್ದರೆ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ವೈದ್ಯರ ಸಲಹೆಯಂತೆ ಪರಿಶೀಲಿಸಬಹುದು. ಆರಂಭದಲ್ಲೇ ಅಪಾಯದ ಅಂಶಗಳನ್ನು ಪತ್ತೆಹಚ್ಚಿ ನಿಯಂತ್ರಿಸುವುದು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕಾಗಿ ಒಂದೇ ದಿನದಲ್ಲಿ ಜೀವನಶೈಲಿಯನ್ನೇ ಬದಲಾಯಿಸುವ ಅಗತ್ಯವಿಲ್ಲ. ಪ್ರತಿದಿನ ಸ್ವಲ್ಪ ಹೆಚ್ಚು ಚಲಿಸುವುದು, ಆಹಾರದಲ್ಲಿ ಉಪ್ಪು ಮತ್ತು ಅತಿಯಾದ ಸಂಸ್ಕರಿತ ಆಹಾರ ಕಡಿಮೆ ಮಾಡುವುದು, ತಂಬಾಕಿನಿಂದ ದೂರವಿರುವುದು ಹಾಗೂ ರಕ್ತದೊತ್ತಡದಂತಹ ಅಂಶಗಳ ಬಗ್ಗೆ ಜಾಗರೂಕರಾಗಿರುವುದು ದೀರ್ಘಾವಧಿಯಲ್ಲಿ ಮಹತ್ವದ ಬದಲಾವಣೆ ತರಬಹುದು. ವಿಶ್ವ ಹೃದಯ ದಿನದ ಸಂದೇಶವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ, ಹೃದಯದ ಆರೈಕೆಯನ್ನು ದಿನನಿತ್ಯದ ಜೀವನದ ಭಾಗವಾಗಿಸಿಕೊಳ್ಳುವುದು ಮುಖ್ಯ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More