‘ಬ್ಯಾಟ್‌ಗೆ ಚೆಂಡು ತಾಗಿತ್ತಾ?’; ಅಂಪೈರ್ ವಿರುದ್ಧ ವೈಭವ್ ಗರಂ, ತಿಲಕ್ ವರ್ಮಾ ಮಧ್ಯಪ್ರವೇಶ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರ ಸೆಮಿಫೈನಲ್‌ನಲ್ಲಿ ಭಾರತ ಎ ತಂಡ ಶ್ರೀಲಂಕಾ ಎ ವಿರುದ್ಧ ಸೋಲನುಭವಿಸಿತು. ಈ ಪಂದ್ಯದಲ್ಲಿ ಅಂಪೈರ್ ನಿರ್ಧಾರದಿಂದ ವೈಭವ್ ಸೂರ್ಯವಂಶಿ ಅಸಮಾಧಾನಗೊಂಡ ಘಟನೆ ವಿವಾದಕ್ಕೆ ಕಾರಣವಾಯಿತು. ಟೂರ್ನಿಯಲ್ಲಿ ಸೂರ್ಯವಂಶಿ 281 ರನ್ ಗಳಿಸಿ, 32 ಸಿಕ್ಸರ್‌ಗಳೊಂದಿಗೆ ದಾಖಲೆ ಬರೆದಿದ್ದಾರೆ. ಭಾರತ ಎ ತಂಡ ಫೈನಲ್‌ಗೆ ಪ್ರವೇಶಿಸಲು ವಿಫಲವಾದರೂ, ವೈಭವ್‌ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಗಮನ ಸೆಳೆಯಿತು.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಎ ತಂಡಕ್ಕೆ ಶ್ರೀಲಂಕಾ ಎ ವಿರುದ್ಧ 8 ವಿಕೆಟ್‌ಗಳ ಸೋಲು ಎದುರಾಗಿದೆ. ನವೆಂಬರ್ 26ರಂದು ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಶ್ರೀಲಂಕಾ ಎ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಭಾರತ ಎ ತಂಡ ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 317 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಬ್ಯಾಟರ್‌ಗಳು ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು.
ಇನ್ನು ಪಂದ್ಯದ ವೇಳೆ ಅಂಪೈರ್ ನೀಡಿದ ಒಂದು ನಿರ್ಧಾರ ಮೈದಾನದಲ್ಲಿ ಕೆಲಕಾಲ ಬಿಸಿಯ ವಾತಾವರಣ ಸೃಷ್ಟಿಸಿತು. ಶ್ರೀಲಂಕಾ ಬ್ಯಾಟರ್ ಲಸಿತ್ ಕ್ರೂಸ್‌ಪುಲ್ಲೆ ವಿರುದ್ಧ ಭಾರತ ತಂಡದ ಆಟಗಾರರು ಎಲ್‌ಬಿಡಬ್ಲ್ಯೂಗೆ ಬಲವಾದ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲು ನಿರಾಕರಿಸಿದರು. ಈ ನಿರ್ಧಾರದಿಂದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ತೀವ್ರ ಅಸಮಾಧಾನಗೊಂಡು ಅಂಪೈರ್ ಬಳಿಗೆ ತೆರಳಿ ಪ್ರಶ್ನಿಸಿದರು.
🔴 VAIBHAV SURYAVANSHI STARTS ARGUING WITH THE UMPIRE 🤯
– Without DRS technology, the umpiring throughout this tournament has been very poor. – Tilak Varma had to step in and calm Vaibhav down. 😭 https://t.co/C4ID61Vd3y
— Sam (@cricsam02) November 26, 2026
ಅಂಪೈರ್ ನಿರ್ಧಾರಕ್ಕೆ ವೈಭವ್ ಅಸಮಾಧಾನ
ಶ್ರೀಲಂಕಾ ಎ ತಂಡ 318 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದಾಗ, ಪಂದ್ಯದ 23.5ನೇ ಓವರ್‌ನಲ್ಲಿ ಶಹಬಾಜ್ ಅಹ್ಮದ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಲಸಿತ್ ಕ್ರೂಸ್‌ಪುಲ್ಲೆ ವಿರುದ್ಧ ಎಲ್‌ಬಿಡಬ್ಲ್ಯೂಗೆ ಭಾರತ ತಂಡ ಬಲವಾದ ಮನವಿ ಮಾಡಿತು. ಆದರೆ ಫೀಲ್ಡ್ ಅಂಪೈರ್ ಈ ಮನವಿಯನ್ನು ತಿರಸ್ಕರಿಸಿದರು. ಅಂಪೈರ್ ನಿರ್ಧಾರದಿಂದ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಹಾಗೂ ಬೌಲರ್ ಶಹಬಾಜ್ ಅಹ್ಮದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ವೈಭವ್ ಸೂರ್ಯವಂಶಿ ನೇರವಾಗಿ ಅಂಪೈರ್ ಬಳಿಗೆ ತೆರಳಿ, ಚೆಂಡು ಬ್ಯಾಟ್‌ಗೆ ತಾಗಿತ್ತೇ ಎಂದು ಪ್ರಶ್ನಿಸಿದರು.
ತಿಲಕ್ ವರ್ಮಾ ಕೂಡ ಅಂಪೈರ್ ನಿರ್ಧಾರದಿಂದ ಕೋಪಗೊಂಡಿದ್ದರು. ಆದರೆ ವೈಭವ್ ಅವರನ್ನು ಅಲ್ಲಿಂದ ದೂರ ಸರಿಯುವಂತೆ ಸೂಚಿಸಿದರು. ಶಹಬಾಜ್ ಅಹ್ಮದ್ ಎಸೆದ ಚೆಂಡು ಮಿಡಲ್ ಸ್ಟಂಪ್‌ನ ನೇರಕ್ಕೆ ಬಂದಿತ್ತು. ಅದನ್ನು ಫ್ಲಿಕ್ ಮಾಡಲು ಕ್ರೂಸ್‌ಪುಲ್ಲೆ ಪ್ರಯತ್ನಿಸಿದಾಗ ಚೆಂಡು ಅವರ ಪ್ಯಾಡ್‌ಗೆ ಬಡಿದಿತ್ತು. ಹೀಗಾಗಿ ಭಾರತ ತಂಡ ಔಟ್‌ಗಾಗಿ ಮನವಿ ಮಾಡಿತ್ತು. ಆದರೆ ಚೆಂಡು ಲೆಗ್ ಸ್ಟಂಪ್‌ನ ಹೊರಗಡೆ ಹೋಗುತ್ತಿತ್ತು ಎಂಬ ಕಾರಣ ನೀಡಿ ಅಂಪೈರ್ ಔಟ್ ನೀಡಲಿಲ್ಲ. ಬಳಿಕ ಆಟಗಾರರನ್ನು ಸಮಾಧಾನವಾಗಿರುವಂತೆ ಸೂಚಿಸಿದರು.
ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ವೈಭವ್ ಬಾರಿಸಿದ 28 ಸಿಕ್ಸರ್‌ಗಳ ವಿಡಿಯೋ ರಿಲೀಸ್
ಟೂರ್ನಿಯಲ್ಲಿ ವೈಭವ್ ಬ್ಯಾಟಿಂಗ್ ಅಬ್ಬರ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ 70.25ರ ಸರಾಸರಿಯಲ್ಲಿ ಒಟ್ಟು 281 ರನ್ ಗಳಿಸಿದ್ದಾರೆ. ವಿಶೇಷವಾಗಿ ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈ ಟೂರ್ನಿಯಲ್ಲಿ ವೈಭವ್ ಬ್ಯಾಟ್‌ನಿಂದ ಒಟ್ಟು 32 ಸಿಕ್ಸರ್‌ಗಳು ಸಿಡಿದಿವೆ. ಟೂರ್ನಿಯಲ್ಲಿ ಬೇರೆ ಯಾವುದೇ ಆಟಗಾರ ಇಷ್ಟು ಸಿಕ್ಸರ್‌ಗಳನ್ನು ಬಾರಿಸಿಲ್ಲ. ಭಾರತ ಎ ತಂಡ ಫೈನಲ್ ತಲುಪಲು ವಿಫಲವಾದರೂ, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ.




