AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಟ್‌ಹೌಸ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ಧೂರಿ ಸ್ವಾಗತ

ವೈಟ್‌ಹೌಸ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ಧೂರಿ ಸ್ವಾಗತ

ಸುಷ್ಮಾ ಚಕ್ರೆ
|

Updated on: Sep 24, 2026 | 9:17 PM

Share

ಚೀನಾದೊಂದಿಗೆ ವ್ಯಾಪಾರ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಟ್ರಂಪ್  ಆಡಳಿತವು ಅತ್ಯುನ್ನತ ಮಟ್ಟದ ಸ್ವಾಗತ ಕೋರಿದೆ. ಶ್ವೇತಭವನದ ರೋಸ್ ಗಾರ್ಡನ್ ಹಾಗೂ ಸೌತ್ ಲಾನ್‌ನಲ್ಲಿ ಬೃಹತ್ ಸೇನಾ ಗೌರವ ಸಲ್ಲಿಕೆ, ಸಾಂಪ್ರದಾಯಿಕ ಫಿರಂಗಿ ಗೌರವ ಹಾಗೂ ಮಿಲಿಟರಿ ಪರೇಡ್ ಆಯೋಜಿಸಲಾಗಿತ್ತು. ಇದಾದ ನಂತರ, ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಶ್ವೇತಭವನದ 'ಆವಲ್ ಆಫೀಸ್'ನಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವೈಟ್‌ಹೌಸ್ ಈಸ್ಟ್ ರೂಮ್‌ನಲ್ಲಿ ಅದ್ಧೂರಿ 'ಸ್ಟೇಟ್ ಡಿನ್ನರ್' ಆಯೋಜಿಸಲಾಗಿದ್ದು, ಅಮೆರಿಕದ ಪ್ರಮುಖ ಟೆಕ್ ದೈತ್ಯ ಕಂಪನಿಗಳ ಸಿಇಒಗಳು (ಎಲಾನ್ ಮಾಸ್ಕ್, ಜೆಫ್ ಬೆಜೋಸ್, ಸುಂದರ್ ಪಿಚೈ, ಸತ್ಯ ನಡೆಲ್ಲಾ ಸೇರಿದಂತೆ) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾಷಿಂಗ್ಟನ್, ಸೆಪ್ಟೆಂಬರ್ 24: ಅಮೆರಿಕಕ್ಕೆ ಮೂರು ದಿನಗಳ ಅಧಿಕೃತ ರಾಜ್ಯ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಶ್ವೇತಭವನದಲ್ಲಿ ಅತ್ಯಂತ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.  ಇಂದು ಶ್ವೇತಭವನದ ಸೌತ್ ಲಾನ್‌ನಲ್ಲಿ ನಡೆದ ಪೂರ್ಣ ಪ್ರಮಾಣದ ಮಿಲಿಟರಿ ಸ್ವಾಗತ ಸಮಾರಂಭದಲ್ಲಿ, ಅಧ್ಯಕ್ಷ ಟ್ರಂಪ್ ಅವರೊಂದಿಗೆ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕದ ತ್ರಿವಿಧ ಪಡೆಗಳ ಗೌರವ ರಕ್ಷಣೆ ಪಡೆದರು.

ಚೀನಾದೊಂದಿಗೆ ವ್ಯಾಪಾರ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಟ್ರಂಪ್  ಆಡಳಿತವು ಅತ್ಯುನ್ನತ ಮಟ್ಟದ ಸ್ವಾಗತ ಕೋರಿದೆ. ಶ್ವೇತಭವನದ ರೋಸ್ ಗಾರ್ಡನ್ ಹಾಗೂ ಸೌತ್ ಲಾನ್‌ನಲ್ಲಿ ಬೃಹತ್ ಸೇನಾ ಗೌರವ ಸಲ್ಲಿಕೆ, ಸಾಂಪ್ರದಾಯಿಕ ಫಿರಂಗಿ ಗೌರವ ಹಾಗೂ ಮಿಲಿಟರಿ ಪರೇಡ್ ಆಯೋಜಿಸಲಾಗಿತ್ತು. ಇದಾದ ನಂತರ, ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಶ್ವೇತಭವನದ ‘ಆವಲ್ ಆಫೀಸ್’ನಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವೈಟ್‌ಹೌಸ್ ಈಸ್ಟ್ ರೂಮ್‌ನಲ್ಲಿ ಅದ್ಧೂರಿ ‘ಸ್ಟೇಟ್ ಡಿನ್ನರ್’ ಆಯೋಜಿಸಲಾಗಿದ್ದು, ಅಮೆರಿಕದ ಪ್ರಮುಖ ಟೆಕ್ ದೈತ್ಯ ಕಂಪನಿಗಳ ಸಿಇಒಗಳು (ಎಲಾನ್ ಮಾಸ್ಕ್, ಜೆಫ್ ಬೆಜೋಸ್, ಸುಂದರ್ ಪಿಚೈ, ಸತ್ಯ ನಡೆಲ್ಲಾ ಸೇರಿದಂತೆ) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More