AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್; ವಿಡಿಯೋ ವೈರಲ್

ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on:Sep 24, 2026 | 4:56 PM

Share

3 ದಿನಗಳ ಅಧಿಕೃತ ಭೇಟಿಗಾಗಿ ಅಮೆರಿಕಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದ್ಧೂರಿ ‘ರೆಡ್ ಕಾರ್ಪೆಟ್’ ಸ್ವಾಗತ ಕೋರಿದ್ದಾರೆ. ರಾಜತಾಂತ್ರಿಕ ಪ್ರೊಟೋಕಾಲ್​​ಗಳನ್ನು ಬದಿಗಿಟ್ಟು, ಟ್ರಂಪ್ ಸ್ವತಃ ಮೇರಿಲ್ಯಾಂಡ್‌ನ 'ಜಾಯಿಂಟ್ ಬೇಸ್ ಆಂಡ್ರ್ಯೂಸ್' ವಾಯುನೆಲೆಗೆ ತೆರಳಿ ಜಿನ್‌ಪಿಂಗ್ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಆದರೆ, ಅಧಿಕೃತ ಸ್ವಾಗತ ಸಮಾರಂಭದ ವೇಳೆ ಅಮೆರಿಕದ ಅತ್ಯಾಧುನಿಕ 'B-2 ಸ್ಟೆಲ್ತ್ ಬಾಂಬರ್' ಯುದ್ಧ ವಿಮಾನಗಳು ಸದ್ದು ಮಾಡುತ್ತಾ ತಲೆಯ ಮೇಲೆ ಹಾದುಹೋದಾಗ ಅಧ್ಯಕ್ಷ ಟ್ರಂಪ್ ಮುಖ ಸಿಂಡರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇರಿಲ್ಯಾಂಡ್, ಸೆಪ್ಟೆಂಬರ್ 24: 3 ದಿನಗಳ ಅಧಿಕೃತ ಭೇಟಿಗಾಗಿ ಅಮೆರಿಕಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದ್ಧೂರಿ ‘ರೆಡ್ ಕಾರ್ಪೆಟ್’ ಸ್ವಾಗತ ಕೋರಿದ್ದಾರೆ. ರಾಜತಾಂತ್ರಿಕ ಪ್ರೊಟೋಕಾಲ್​​ಗಳನ್ನು ಬದಿಗಿಟ್ಟು, ಟ್ರಂಪ್ ಸ್ವತಃ ಮೇರಿಲ್ಯಾಂಡ್‌ನ ‘ಜಾಯಿಂಟ್ ಬೇಸ್ ಆಂಡ್ರ್ಯೂಸ್’ ವಾಯುನೆಲೆಗೆ ತೆರಳಿ ಜಿನ್‌ಪಿಂಗ್ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಆದರೆ, ಅಧಿಕೃತ ಸ್ವಾಗತ ಸಮಾರಂಭದ ವೇಳೆ ಅಮೆರಿಕದ ಅತ್ಯಾಧುನಿಕ ‘B-2 ಸ್ಟೆಲ್ತ್ ಬಾಂಬರ್’ ಯುದ್ಧ ವಿಮಾನಗಳು ಸದ್ದು ಮಾಡುತ್ತಾ ತಲೆಯ ಮೇಲೆ ಹಾದುಹೋದಾಗ ಅಧ್ಯಕ್ಷ ಟ್ರಂಪ್ ಮುಖ ಸಿಂಡರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮೆರಿಕದ ಅಧ್ಯಕ್ಷರೊಬ್ಬರು ವಿದೇಶಿ ನಾಯಕರನ್ನು ಸ್ವಾಗತಿಸಲು ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿರುವುದು 1962ರ ನಂತರ ಇದೇ ಮೊದಲ ಬಾರಿಯಾಗಿದೆ. 1962ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಅವರು ಬ್ರಿಟನ್ ಪ್ರಧಾನಿ ಹ್ಯಾರೋಲ್ಡ್ ಮೆಕ್‌ಮಿಲನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Sep 24, 2026 04:27 PM

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More