AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವ: ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ

ಬೆಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವ: ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ

ಅಕ್ಷತಾ ವರ್ಕಾಡಿ
|

Updated on: Sep 24, 2026 | 4:37 PM

Share

ಬೆಂಗಳೂರಿನ ಸುಗ್ಗಟ್ಟ ಗ್ರಾಮದಲ್ಲಿ ಜೈಮಾರುತಿ ವಿನಾಯಕ ಗೆಳೆಯರ ಬಳಗವು ಈ ಬಾರಿಯ ಗಣೇಶೋತ್ಸವಕ್ಕೆ ಧರ್ಮಸ್ಥಳ ದೇವಸ್ಥಾನದ ಭವ್ಯ ಮಾದರಿಯನ್ನು ನಿರ್ಮಿಸಿ ಗಮನ ಸೆಳೆದಿದೆ. ಸುಮಾರು 4-5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಅದ್ಭುತ ಸೆಟ್, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯ ಅನುಭವ ನೀಡುತ್ತಿದ್ದು, ಪ್ರತಿದಿನವೂ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿದೆ.

ಬೆಂಗಳೂರಿನ ಸುಗ್ಗಟ್ಟ ಗ್ರಾಮದ ಜೈಮಾರುತಿ ವಿನಾಯಕ ಗೆಳೆಯರ ಬಳಗವು ಈ ಬಾರಿ ಧರ್ಮಸ್ಥಳ ದೇವಸ್ಥಾನದ ಭವ್ಯ ಮಾದರಿಯ ಗಣೇಶ ಮಂಟಪವನ್ನು ನಿರ್ಮಿಸಿ ಎಲ್ಲರ ಗಮನ ಸೆಳೆದಿದೆ. ಕಳೆದ ಹಲವು ವರ್ಷಗಳಿಂದಲೂ ವಿಭಿನ್ನ ಸೆಟ್​ಗಳ ಮೂಲಕ ಜನರನ್ನು ಆಕರ್ಷಿಸುತ್ತಿರುವ ಈ ಬಳಗ, ಈ ಬಾರಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಪ್ರತಿರೂಪವನ್ನು 40×20 ಅಡಿ ಅಳತೆಯಲ್ಲಿ ಸೃಷ್ಟಿಸಿದೆ. ಸುಮಾರು 4-5 ಲಕ್ಷ ರೂಪಾಯಿ ವೆಚ್ಚದಲ್ಲಿ, ಚಾಮರಾಜಪೇಟೆಯಿಂದ ಬಂದ ಕಲಾವಿದರು ಈ ಸೆಟ್ ಅನ್ನು ಅತ್ಯಂತ ನಿಖರವಾಗಿ ನಿರ್ಮಿಸಿದ್ದಾರೆ. ದೇವಸ್ಥಾನದ ಮಾದರಿಯ ಜೊತೆಗೆ, ಒಳಗಿರುವ ಗಣೇಶ ಮೂರ್ತಿಯೂ ಸಹ ಮಂಜುನಾಥ ಸ್ವಾಮಿಯ ಮಾದರಿಯಲ್ಲಿರುವುದು ವಿಶೇಷ.

ಪ್ರತಿದಿನವೂ ಪೂಜೆ ಪುನಸ್ಕಾರಗಳು, ನೈವೇದ್ಯ ಮತ್ತು ಪ್ರಸಾದ ವಿತರಣೆ ನಡೆಯುತ್ತಿದ್ದು, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಯಲಹಂಕ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಈ ಭವ್ಯ ಸೆಟ್ ಮತ್ತು ಗಣೇಶ ಮೂರ್ತಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ವೈಶಿಷ್ಟ್ಯಪೂರ್ಣ ಗಣೇಶ ಮಂಟಪವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತರಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಅನುಭವವನ್ನು ನೀಡುತ್ತಿದೆ. ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More