AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್

ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್

ಸುಷ್ಮಾ ಚಕ್ರೆ
|

Updated on: Sep 24, 2026 | 11:10 PM

Share

ಒಡಿಶಾದ ಗಂಜಾಂ ಮತ್ತು ಕಂಧಮಾಲ್ ಜಿಲ್ಲೆಗಳ ಗಡಿಯಲ್ಲಿರುವ ಕಳಿಂಗ ಘಾಟ್ ರಸ್ತೆಯಲ್ಲಿ ನಿರಂತರ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ನೂತನವಾಗಿ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ನಿರ್ಮಾಣ ಹಂತದಲ್ಲಿದ್ದ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮುಂಡಿಯಾ ಬೆಟ್ಟಗಳಿಂದ ಹರಿದುಬಂದ ರಭಸದ ಮಳೆನೀರಿನಿಂದಾಗಿ ಹೆದ್ದಾರಿಯ ಒಂದು ಬದಿ ಕುಸಿದುಬಿದ್ದಿದೆ. ಇದರೊಂದಿಗೆ ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ಕಾಮಗಾರಿ ಹಂತದಲ್ಲಿದ್ದ ರಸ್ತೆಯ ಭಾಗ ಕೊಚ್ಚಿಹೋಗಿದೆ. ಈ ರಸ್ತೆಯು ಪ್ರಸಿದ್ಧ ರಾಂಚಿ-ವಿಜಯವಾಡ ಆರ್ಥಿಕ ಕಾರಿಡಾರ್‌ನ ಪ್ರಮುಖ ಭಾಗವಾಗಿದ್ದು, ದಕ್ಷಿಣ ಒಡಿಶಾ ಮತ್ತು ಪಶ್ಚಿಮ ಒಡಿಶಾ ನಡುವಿನ ಪ್ರಮುಖ ವಾಣಿಜ್ಯ ಹಾಗೂ ಸಾರಿಗೆ ಕೊಂಡಿಯಾಗಿದೆ.

ಭುವನೇಶ್ವರ, ಸೆಪ್ಟೆಂಬರ್ 24: ಒಡಿಶಾದ ಗಂಜಾಂ ಮತ್ತು ಕಂಧಮಾಲ್ ಜಿಲ್ಲೆಗಳ ಗಡಿಯಲ್ಲಿರುವ ಕಳಿಂಗ ಘಾಟ್ ರಸ್ತೆಯಲ್ಲಿ ನಿರಂತರ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ನೂತನವಾಗಿ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ನಿರ್ಮಾಣ ಹಂತದಲ್ಲಿದ್ದ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮುಂಡಿಯಾ ಬೆಟ್ಟಗಳಿಂದ ಹರಿದುಬಂದ ರಭಸದ ಮಳೆನೀರಿನಿಂದಾಗಿ ಹೆದ್ದಾರಿಯ ಒಂದು ಬದಿ ಕುಸಿದುಬಿದ್ದಿದೆ. ಇದರೊಂದಿಗೆ ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ತಡೆಗೋಡೆ ಹಾಗೂ ಕಾಮಗಾರಿ ಹಂತದಲ್ಲಿದ್ದ ರಸ್ತೆಯ ಭಾಗ ಕೊಚ್ಚಿಹೋಗಿದೆ. ಈ ರಸ್ತೆಯು ಪ್ರಸಿದ್ಧ ರಾಂಚಿ-ವಿಜಯವಾಡ ಕಾರಿಡಾರ್‌ನ ಪ್ರಮುಖ ಭಾಗವಾಗಿದ್ದು, ದಕ್ಷಿಣ ಒಡಿಶಾ ಮತ್ತು ಪಶ್ಚಿಮ ಒಡಿಶಾ ನಡುವಿನ ಪ್ರಮುಖ ವಾಣಿಜ್ಯ ಹಾಗೂ ಸಾರಿಗೆ ಕೊಂಡಿಯಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More