Ashneer Grover: 5 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಮರ್ಸಿಡಿಸ್ ಕಾರು ಉಡುಗೊರೆ ನೀಡಿದ ಭಾರತ್‌ಪೇ ಸಂಸ್ಥಾಪಕ ಅಶ್ನೀರ್ ಗ್ರೋವರ್
ಗ್ರೋವರ್, ತನ್ನ ಹೊಸ ಕಂಪನಿಯು ಕೇವಲ ಸ್ವಯಂ-ಗಳಿಕೆಯ ಬಂಡವಾಳ ಮತ್ತು ಹೊಸ ನೇಮಕಾತಿಗಳಿಗೆ ಮುಕ್ತ ಅವಕಾಶವನ್ನು ನೀಡುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ಜೊತೆಗೆ, ಹೂಡಿಕೆದಾರರು ತಮ್ಮ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರನ್ನು ನೇರವಾಗಿ ಸಂಪರ್ಕಿಸುವಂತೆ ಹೇಳಿಕೊಂಡಿದ್ದಾರೆ.
ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 1ರ ಹೂಡಿಕೆದಾರರಲ್ಲಿ ಒಬ್ಬರಾಗಿದ್ದರು. ಆದರೆ ಈಗ ಅವರು ತಮ್ಮ ಹೊಸ ಕಂಪನಿಯನ್ನು ಮುನ್ನಡೆಸಲು ಮುಂದಾಗಿದ್ದು, ಇದೀಗ ಅನೇಕ ಸಾಧನೆಗಳ ಹಂತವನ್ನು ತಲುಪಿರುವ ಅಶ್ನೀರ್ ಗ್ರೋವರ್ ಹೊಸ ಕಂಪನಿಗಳ ಚೇರಿಕೆಗಾಗಿ ಶ್ರಮಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಗ್ರೋವರ್, ತನ್ನ ಹೊಸ ಕಂಪನಿಯು ಕೇವಲ ಸ್ವಯಂ-ಗಳಿಕೆಯ ಬಂಡವಾಳ ಮತ್ತು ಹೊಸ ನೇಮಕಾತಿಗಳಿಗೆ ಮುಕ್ತ ಅವಕಾಶವನ್ನು ನೀಡುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ಜೊತೆಗೆ, ಹೂಡಿಕೆದಾರರು ತಮ್ಮ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರನ್ನು ನೇರವಾಗಿ ಸಂಪರ್ಕಿಸುವಂತೆ ಹೇಳಿಕೊಂಡಿದ್ದಾರೆ.
ಮೂರನೇ ಯೂನಿಕಾರ್ನ್‌ನ ಪ್ರಾರಂಭವನ್ನು ಘೋಷಿಸಿದ ಗ್ರೋವರ್ ಲಿಂಕ್ಡ್‌ಇನ್‌ನಲ್ಲಿ ತನ್ನ ಕಂಪನಿಯ ಸಾಧನೆ ಮತ್ತು ಚೌಕಟ್ಟಿನ ಬಗ್ಗೆ ತಿಳಿಸಿದ್ದಾರೆ. ಥರ್ಡ್ ಯುನಿಕಾರ್ನ್‌ನಲ್ಲಿ ನಾವು ಸದ್ದಿಲ್ಲದೆ ಮತ್ತು ಯಾವುದೇ ದೊಡ್ಡ ಪೈಪೋಟಿ ಇಲ್ಲದೆ ಶಾಂತಿಯುತವಾಗಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ:BharatPe Ashneer Grover: ಭಾರತ್‌ಪೇ ನಿರ್ದೇಶಕ ಹಾಗೂ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ
ಗ್ರೋವರ್ ತನ್ನ ಹೊಸ ಉದ್ಯಮದ ಸ್ನೀಕ್ ಪೀಕ್ ನೀಡುವ ಸ್ಲೈಡ್‌ಶೋ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಹೊಸ ಕಂಪನಿಯು ಕೇವಲ 50 ಸದಸ್ಯರೊಂದಿಗೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ಅರ್ಜಿ ಸಲ್ಲಿಸುವಂತೆ ಆಹ್ವಾನ ನೀಡಿದ್ದಾರೆ. ಆದ್ದರಿಂದ ನೀವು TODU – FODU ಕೆಲಸ ಮಾಡಲು ಬಯಸಿದರೆ, ನಿಮಗೆ ಉಪಯುಕ್ತ ಮಾಹಿತಿ ಇಲ್ಲಿದೆ ಎಂದು ಹೇಳಿದ್ದಾರೆ.
ಮೂರನೇ ಯುನಿಕಾರ್ನ್‌ನಲ್ಲಿ ಐದು ವರ್ಷಗಳನ್ನು ಪೂರ್ಣಗೊಳಿಸುವ ಉದ್ಯೋಗಿಗಳಿಗೆ ಮರ್ಸಿಡಿಸ್ ನೀಡುವುದಾಗಿ ಗ್ರೋವರ್ ಭರವಸೆ ನೀಡಿದ್ದಾರೆ. ಅಶ್ನೀರ್ ತನ್ನ ಪತ್ನಿ ಮಾಧುರಿ ಜೈನ್ ಗ್ರೋವರ್ ಜೊತೆಗೆ ಮೂರನೇ ಯುನಿಕಾರ್ನ್ನ್ನು ಸ್ಥಾಪಿಸಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ತಮ್ಮ 40ನೇ ಹುಟ್ಟುಹಬ್ಬದಂದು ಈ ಹೊಸ ಸ್ಟಾರ್ಟ್‌ಅಪ್‌ನ್ನು ಬಿಡುಗಡೆ ಮಾಡಿದ್ದಾರೆ.
ಈ ಮಧ್ಯೆ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 1ರಲ್ಲಿ ಹೂಡಿಕೆದಾರರಲ್ಲಿ ಒಬ್ಬರಾಗಿದ್ದ ಅಶ್ನೀರ್ ಗ್ರೋವರ್, BharatPe ಹೂಡಿಕೆದಾರರು ಮತ್ತು ಇತರ ಉನ್ನತ ವ್ಯಕ್ತಿಗಳ ಜೊತೆಗೆ ಕಾನೂನುತ್ಮಾಕ ಗೊಂದಲಗಳಿಂದ ಎರಡನೇ ಸೀಸನ್‌ನಲ್ಲಿ ಭಾಗವಹಿಸಲಿಲ್ಲ. Sequoia ಮತ್ತು Ribbit ಬೆಂಬಲಿತ BharatPeಯ ಸಹ-ಸಂಸ್ಥಾಪಕ ಮತ್ತು CEO ಆಗಿದ್ದ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಕಳೆದ ವರ್ಷ ಕಾರ್ಪೊರೇಟ್‌ನಲ್ಲಿನ ಲೋಪಗಳಿಂದ ತಮ್ಮ ಅಧಿಕಾರವನ್ನು ತ್ಯಜಿಸಬೇಕಾಯಿತು.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Wed, 11 January 23