Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ; 15 ವರ್ಷ ವರೆಗೆ ಮಾತ್ರ ಹೂಡಿಕೆಗೆ ಅವಕಾಶವೇ? ಇಲ್ಲಿದೆ ವಿವರ

ಕೇಂದ್ರ ಸರ್ಕಾರ ಕೈಗೊಂಡಿರುವ 'ಸುಕನ್ಯಾ ಸಮೃದ್ಧಿ ಯೋಜನೆ' ಕೂಡ ಪ್ರಮುಖವಾದುದು. 10 ವರ್ಷದೊಳಗಿನ ಹೆಣ್ಮಕ್ಕಳಿಗೆ ಮಾಡಿಸಲಾಗುವ ಈ ಯೋಜನೆ ಬಹಳ ಜನಪ್ರಿಯತೆ ಮತ್ತು ಬೇಡಿಕೆ ಹೊಂದಿದೆ. ಅಧಿಕ ರಿಟರ್ನ್ಸ್ ಕೊಡುವ ಈ ಯೋಜನೆ ಬಗ್ಗೆ ಕೆಲವಾರು ಪ್ರಮುಖ ಮಾಹಿತಿ ಇಲ್ಲಿದೆ.

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ; 15 ವರ್ಷ ವರೆಗೆ ಮಾತ್ರ ಹೂಡಿಕೆಗೆ ಅವಕಾಶವೇ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 10, 2023 | 6:52 PM

ಹೆಣ್ಮಕ್ಕಳಿಗೆ ಸರ್ಕಾರಗಳು ಕೆಲವಾರು ಪ್ರಯೋಜನಕಾರಿ ಯೋಜನೆಗಳನ್ನು ಚಾಲನೆಯಲ್ಲಿಟ್ಟಿದೆ. ಕರ್ನಾಟಕ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮೀ ಯೋಜನೆಯೂ ಒಂದು. ಹಾಗೆಯೇ, ಕೇಂದ್ರ ಸರ್ಕಾರ ಕೈಗೊಂಡಿರುವ ‘ಸುಕನ್ಯಾ ಸಮೃದ್ಧಿ ಯೋಜನೆ’ (Sukanya Samriddhi Yojana) ಕೂಡ ಪ್ರಮುಖವಾದುದು. 10 ವರ್ಷದೊಳಗಿನ ಹೆಣ್ಮಕ್ಕಳಿಗೆ ಮಾಡಿಸಲಾಗುವ ಈ ಯೋಜನೆ ಬಹಳ ಜನಪ್ರಿಯತೆ ಮತ್ತು ಬೇಡಿಕೆ ಹೊಂದಿದೆ. ಅಧಿಕ ರಿಟರ್ನ್ಸ್ (High Returns) ಕೊಡುವ ಈ ಯೋಜನೆ ಬಗ್ಗೆ ಕೆಲವಾರು ಪ್ರಮುಖ ಮಾಹಿತಿ ಇಲ್ಲಿದೆ.

* 10 ವರ್ಷ ಮತ್ತು ಅದರೊಳಗಿನ ವಯಸ್ಸಿನ ಹೆಣ್ಮಕ್ಕಳ ಹೆಸರಿನಲ್ಲಿ ಅವರ ಪೋಷಕರು ಅಥವಾ ಪಾಲಕರು ಎಸ್ಎಸ್​​ವೈ ಖಾತೆ ತೆರೆಯಬಹುದು.

* ಇದು 21 ವರ್ಷದ ಸ್ಕೀಮ್ ಆಗಿದ್ದು, ಯೋಜನೆ ಆರಂಭಗೊಂಡು 15 ವರ್ಷದವರೆಗೆ ಪ್ರತೀ ವರ್ಷ ಹೂಡಿಕೆ ಮಾಡಬಹುದು.

* ವರ್ಷಕ್ಕೆ ಕನಿಷ್ಠ ಹೂಡಿಕೆ 250 ರೂ. ಇದ್ದರೆ, ಗರಿಷ್ಠ ಮೊತ್ತ 1.5 ಲಕ್ಷ ರೂ.

* ಒಂದು ವರ್ಷದಲ್ಲಿ ಒಮ್ಮೆ ಮಾತ್ರ ಏಕಕಾಲದಲ್ಲಿ ಹೂಡಿಕೆ ಮಾಡಬಹುದು. ಒಂದೂವರೆ ಲಕ್ಷದವರೆಗೆ ಎಷ್ಟು ಹಣ ಬೇಕಾದರೂ ಖಾತೆಗೆ ಹಾಕಬಹುದು.

* 15 ವರ್ಷಗಳವರೆಗೆ ಮಾತ್ರ ಖಾತೆಗೆ ಹಣ ಹಾಕಬಹುದು. ಅದಾದ ಬಳಿಕ 7 ವರ್ಷದವರೆಗೆ ಲಾಕ್ ಇನ್ ಅವಧಿ ಇರುತ್ತದೆ.

* ಖಾತೆಯಲ್ಲಿ ನೀವು ತುಂಬಿಸುವ ಹಣಕ್ಕೆ ಪ್ರತೀ ವರ್ಷವೂ ಬಡ್ಡಿ, ಚಕ್ರಬಡ್ಡಿ ಜಮೆಯಾಗುತ್ತಾ ಹೋಗುತ್ತದೆ. 21 ವರ್ಷದವರೆಗೂ ಬಡ್ಡಿ ಜಮಾವಣೆ ಮುಂದುವರಿಯುತ್ತದೆ.

* ಸದ್ಯ ಬಡ್ಡಿ ದರ ವಾರ್ಷಿಕ ಶೇ. 7.6 ಇದೆ. ಸರ್ಕಾರ ಆಗಾಗ್ಗೆ ಈ ಯೋಜನೆಯ ಬಡ್ಡಿ ದರವನ್ನು ಪರಿಷ್ಕರಿಸುತ್ತಿರುತ್ತದೆ. 2016ರಲ್ಲಿ ಶೇ. 9.1ರಷ್ಟು ಬಡ್ಡಿ ಒದಗಿಸಲಾಗುತ್ತಿತ್ತು. ಅದೀಗ ಕ್ರಮವಾಗಿ ಇಳಿಕೆಯಾಗುತ್ತಾ ಬಂದಿದೆ. ಆಯಾಯ ಕಾಲಘಟ್ಟದ ಠೇವಣಿಗಳಿಗೆ ಆಯಾ ಬಡ್ಡಿ ದರ ಅನ್ವಯ ಆಗುತ್ತಾ ಹೋಗುತ್ತದೆ.

* ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಆರಂಭಿಸುವ ಖಾತೆ ಮೆಚ್ಯೂರ್ ಆಗುವುದು 21 ವರ್ಷಕ್ಕೆ. ಅಂದರೆ ಮಗು 7 ವರ್ಷ ವಯಸ್ಸಿದ್ದಾಗ ಖಾತೆ ತೆರೆದಿದ್ದಲ್ಲಿ ಅದು 28 ವರ್ಷ ವಯಸ್ಸಾದಾಗ ಮೆಚ್ಯೂರ್ ಆಗುತ್ತದೆ.

* ಯೋಜನೆ 21 ವರ್ಷದ್ದಾದರೂ ಕೆಲ ನಿರ್ದಿಷ್ಟ ಮತ್ತು ಅಗತ್ಯ ಸಂದರ್ಭದಲ್ಲಿ ಹಣ ಹಿಂಪಡೆಯಲು ಸಾಧ್ಯ. ಹೆಣ್ಮಗು 18 ವರ್ಷ ಹರೆಯ ದಾಟಿ ಮದುವೆ ದಿನಕ್ಕೆ ಕನಿಷ್ಠ ಒಂದು ತಿಂಗಳು ಮುಂಚಿತವಾಗಿ ಹಣ ಹಿಂಪಡೆಯಬಹುದು. ಅಥವಾ ಮದುವೆಯಾಗಿ 3 ತಿಂಗಳೊಳಗೆ ಹಣ ವಿತ್ ಡ್ರಾ ಮಾಡಬಹುದು. ಅದಕ್ಕಾಗಿ ಹೆಣ್ಮಗು ತನ್ನ ಗುರುತಿನ ಚೀಟಿ ಮತ್ತು ಮದುವೆಯ ದಾಖಲೆಯನ್ನು ಒದಗಿಸಬೇಕು.

* ಯೋಜನೆ ಮಾಡಿಸಲಾದ ಹೆಣ್ಮಗು ಅಕಾಲಿಕವಾಗಿ ಮೃತಪಟ್ಟರೆ ಖಾತೆಯನ್ನು ಮುಚ್ಚಿ, ಅದರಲ್ಲಿ ಸಂದಾಯವಾಗಿರುವ ಹಣವನ್ನು ಪೋಷಕರ ಖಾತೆಗೆ ವರ್ಗಾಯಿಸಬಹುದು.

* ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಆನ್ಲೈನಿನಲ್ಲಿ ತೆರೆಯಲು ಅವಕಾಶ ಇಲ್ಲ. ಅಂಚೆ ಕಚೇರಿ ಅಥವಾ ಕೆಲ ಬ್ಯಾಂಕ್ ಕಚೇರಿಗಳಿಗೆ ಹೋಗಿ ಅರ್ಜಿ ತುಂಬಿಸಿ ಖಾತೆ ತೆರೆಯಬಹುದು. ಹೆಣ್ಮಗುವಿನ ಜನನ ಪ್ರಮಾಣ ಪತ್ರದ ದಾಖಲೆ ಕೊಡಬೇಕು. ಹೆಣ್ಮಗುವಿನ ಪೋಷಕರ ಫೋಟೋ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ಯಾವುದಾದರೂ ದಾಖಲೆಗಳನ್ನೂ ಒದಗಿಸಬೇಕು. ಆರಂಭಿಕ ಕಂತನ್ನು ಚೆಕ್ ಅಥವಾ ಡಿಡಿ ಮೂಲಕ ಪಾವತಿಸಬೇಕು ಎಂಬ ನಿಯಮ ಈಗಲೂ ಇದೆ.

* ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಯ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಅಂದರೆ ಇದರಿಂದ ಬರುವ ರಿಟರ್ನ್ಸ್ ಗೆ ಯಾವುದೇ ತೆರಿಗೆ ಮುರಿದುಕೊಳ್ಳಲಾಗುವುದಿಲ್ಲ.

* ದೀರ್ಘಕಾಲೀನ ಮತ್ತು ಸುರಕ್ಷಿತ ಹೂಡಿಕೆಗೆ ಮತ್ತು ಹೆಣ್ಮಕ್ಕಳ ಶ್ರೇಯ ದೃಷ್ಟಿಯಿಂದ ಸುಕನ್ಯಾ ಸಮೃದ್ಧಿ ಯೋಜನೆ ಹೇಳಿಮಾಡಿಸಿದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ