BharatPe Ashneer Grover: ಭಾರತ್​ಪೇ ನಿರ್ದೇಶಕ ಹಾಗೂ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

BharatPe Ashneer Grover: ಭಾರತ್​ಪೇ ನಿರ್ದೇಶಕ ಹಾಗೂ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ
ಅಶ್ನೀರ್ ಗ್ರೋವರ್ (ಸಂಗ್ರಹ ಚಿತ್ರ)

ಅಶ್ನೀರ್​ ಗ್ರೋವರ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ನಿರ್ದೇಶಕ ಹುದ್ದೆಗೆ ಭಾರತ್​ಪೇಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Mar 01, 2022 | 11:20 AM

ಭಾರತ್​ಪೇ (BharatPe) ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಡೈರೆಕ್ಟರ್ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ ಸಲ್ಲಿಸಿದ್ದಾರೆ. ಹಣ ದುರುಪಯೋಗದ ಆರೋಪದ ಮೇಲೆ ಕಂಟ್ರೋಲ್ಸ್​ನ ಮುಖ್ಯಸ್ಥೆ ಹುದ್ದೆಯಿಂದ ಅಶ್ನೀರ್​ರ ಹೆಂಡತಿ ಮಾಧುರಿ ಜೈನ್​ ಗ್ರೋವರ್​ರನ್ನು ತೆಗೆಯಲಾಗಿತ್ತು. ಅದಾಗಿ ಕೆಲ ದಿನಕ್ಕೆ ಈ ಬೆಳವಣಿಗೆ ನಡೆದಿದೆ ಎಂದು ಸಿಎನ್​ಬಿಸಿ- ಟಿವಿ18 ವರದಿ ಮಾಡಿದೆ. ಮಂಡಳಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಅಶ್ನೀರ್ ಗ್ರೋವರ್, ನಾನೇ ಸ್ಥಾಪಿಸಿದ ಕಂಪೆನಿಗೆ ಬಲವಂತವಾಗಿ ರಾಜೀನಾಮೆ ಸಲ್ಲಿಸಿರುವಂತೆ ಮಾಡಿರುವುದಕ್ಕೆ ಭಾರವಾದ ಹೃದಯದಿಂದ ಇದನ್ನು ಬರೆಯುತ್ತಿದ್ದೇನೆ. ಫಿನ್​ಟೆಕ್ ಜಗತ್ತಿನಲ್ಲಿ ಈ ಕಂಪೆನಿ ಇಂದು ನಾಯಕ ಸ್ಥಾನದಲ್ಲಿ ನಿಂತಿದೆ ಎಂಬುದನ್ನು ತಲೆ ಎತ್ತಿ ಹೇಳುತ್ತೇನೆ. 2022ರ ಆರಂಭದಿಂದಲೂ ದುರದೃಷ್ಟವಶಾತ್ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಆಧಾರರಹಿತವಾಗಿ ಮತ್ತು ಗುರಿ ಮಾಡಿಕೊಂಡು ದಾಳಿ ನಡೆಯುತ್ತಿದೆ. ಕೆಲವು ವ್ಯಕ್ತಿಗಳು ನನ್ನ ವರ್ಚಸ್ಸಿಗೆ ಮಾತ್ರ ಹಾನಿ ಮಾಡುವುದಲ್ಲದೆ ಕಂಪೆನಿಯ ವರ್ಚಸ್ಸಿಗೂ ಘಾಸಿ ಮಾಡಲು ಸಿದ್ಧರಾಗಿದ್ದಾರೆ. ಆದರೆ ಮೇಲ್ನೋಟಕ್ಕೆ ಅದನ್ನು ರಕ್ಷಿಸುವಂತೆ ಕಾಣಿಸುತ್ತಿದ್ದಾರೆ, ಎಂದಿದ್ದಾರೆ.

ಫೆಬ್ರವರಿ 27 ರಂದು ಮನಿಕಂಟ್ರೋಲ್ ವರದಿ ಮಾಡಿದಂತೆ, ಭಾರತ್‌ಪೇ ಸಹ ಸಂಸ್ಥಾಪಕ ಗ್ರೋವರ್‌ರ ತುರ್ತು ಮಧ್ಯಸ್ಥಿಕೆ ಮನವಿಯನ್ನು ಆಡಳಿತ ಪರಿಶೀಲನೆ ನಡೆಸುವ ಸಂಸ್ಥೆ ನಿರ್ಧಾರವನ್ನು ಸಿಂಗಾಪೂರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (SIAC) ತಿರಸ್ಕರಿಸಿದೆ. ಅದಾದ ಮೇಲೆ ಈ ಬೆಳವಣಿಗೆ ನಡೆದಿದೆ. ಮನಿಕಂಟ್ರೋಲ್ ಜೊತೆಗಿನ ಸಂವಾದದಲ್ಲಿ, ಆಡಳಿತದ ಪರಿಶೀಲನೆಯನ್ನು ಪ್ರಾರಂಭಿಸುವ ಮಂಡಳಿ ಉದ್ದೇಶವನ್ನು ಗ್ರೋವರ್ ಪ್ರಶ್ನಿಸಿದರು. “ಮಂಡಳಿಗೆ ನನ್ನ ಪ್ರಶ್ನೆ ಇಲ್ಲಿದೆ. ಮೊದಲಿಗೆ ಆಡಳಿತದ ವಿಮರ್ಶೆಯ ಅಗತ್ಯವೇನಿತ್ತು?” ಎಂದು ಅವರು ಕೇಳಿದ್ದರು.

ಅಶ್ನೀರ್ ಗ್ರೋವರ್ ಪತ್ರ ಅಲ್ವಾರೆಜ್ ಮತ್ತು ಮಾರ್ಸಲ್ ಅವರ ಆಡಿಟ್ ವರದಿಯ ಭಾಗಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಲು ಪ್ರಾರಂಭಿಸಿದ ನಂತರ ಗ್ರೋವರ್ ಮಾಧ್ಯಮ ಸೋರಿಕೆಯನ್ನು ಪ್ರಶ್ನಿಸಿದರು. ತಮ್ಮ ರಾಜೀನಾಮೆ ಪತ್ರದಲ್ಲಿ ಗ್ರೋವರ್ ಹೀಗೆ ಬರೆದಿದ್ದಾರೆ: “ಭಾರತೀಯ ಉದ್ಯಮಶೀಲತೆ ಮುಖವಾಗಿ ಮತ್ತು ಭಾರತೀಯ ಯುವಕರಿಗೆ ತಮ್ಮ ಸ್ವಂತ ವ್ಯವಹಾರಗಳನ್ನು ಆರಂಭಿಸಲು ಸ್ಫೂರ್ತಿಯಾಗಿ ತನ್ನನ್ನು ನೋಡಲಾಗುತ್ತದೆ, ನಾನು ಈಗ ಸ್ವಂತ ಹೂಡಿಕೆದಾರರು ಮತ್ತು ನಿರ್ವಹಣೆ ವಿರುದ್ಧ ಸುದೀರ್ಘ, ಏಕಾಂಗಿ ಹೋರಾಟದಲ್ಲಿ ಕಳೆಯುತ್ತಿದ್ದೇನೆ. ದುರದೃಷ್ಟವಶಾತ್ ಈ ಯುದ್ಧದಲ್ಲಿ ಮ್ಯಾನೇಜ್‌ಮೆಂಟ್ ನಿಜವಾಗಿ ಅಪಾಯದಲ್ಲಿರುವುದನ್ನು ಕಳೆದುಕೊಂಡಿದೆ – ಅದು ಭಾರತ್​ಪೇ.” ಎಂದಿದ್ದಾರೆ

ಜನವರಿ 28ರಂದು ಭಾರತ್‌ಪೇ ಕಂಪೆನಿಯ ಆಡಳಿತ ಪರಿಶೀಲನೆಯನ್ನು ನಡೆಸಲು ಅಲ್ವಾರೆಜ್ ಅವರನ್ನು ನೇಮಿಸಿಕೊಂಡಿದೆ ಎಂದು ಬಹಿರಂಗಪಡಿಸಿತು. ಅದರ ಮುಂದಿನ ವಾರ, ಇದು PwCಯನ್ನೂ ಸೇರ್ಪಡೆ ಮಾಡಿಕೊಂಡಿದೆ ಎಂದು ದೃಢಪಡಿಸಿತು. ಮಾಧುರಿ ಜೈನ್ ಗ್ರೋವರ್ ಮತ್ತು ಅಶ್ನೀರ್ ಗ್ರೋವರ್ ಅವರನ್ನು ವಜಾಗೊಳಿಸುವ ನಿಟ್ಟಿನಲ್ಲಿ ಅಲ್ವಾರೆಜ್ ಅವರನ್ನು ನೇಮಿಸಿದ ನಂತರ PwC ಅನ್ನು ತರುವ ನಿರ್ಧಾರವು ಫೆಬ್ರವರಿ 7ರಂದು ಮನಿಕಂಟ್ರೋಲ್ ವರದಿ ಮಾಡಿದ್ದು, ಬಿಗ್ 4 ಆಡಿಟ್ ಸಂಸ್ಥೆಯ ವರದಿಯ ನಂತರವೇ ಅವರ ಉಚ್ಚಾಟನೆ ಸಂಭವಿಸಬಹುದು ಎಂದಿತ್ತು.

ಆರೋಪ-ಪ್ರತ್ಯಾರೋಪಗಳು ಮಾಮೂಲು ಜನವರಿಯಲ್ಲಿ ನಡೆಸಿದ ಅಲ್ವಾರೆಜ್ ಅವರ ಪ್ರಾಥಮಿಕ ವರದಿ ಪ್ರಕಾರ, ಮಾರಾಟಗಾರರೊಂದಿಗಿನ ವ್ಯವಹಾರದಲ್ಲಿ ಲೋಪ- ದೋಷಗಳು ಕಂಡುಬಂದಿದೆ. ವರದಿಯಲ್ಲಿ ಅಸ್ತಿತ್ವದಲ್ಲಿ ಇಲ್ಲದ ಮಾರಾಟಗಾರರು ಮತ್ತು ಸಲಹೆಗಾರರಿಗೆ ಪಾವತಿಗಳನ್ನು ಮಾಡಿರುವುದು ಕಂಡುಕೊಂಡಿದೆ. ಆರೋಪಗಳು ಮತ್ತು ಪ್ರತ್ಯಾರೋಪಗಳು ಭಾರತ್​ಪೇಯಲ್ಲಿ ಮಾಮೂಲು ಎಂಬಂತಾಗಿದೆ. ಆಡಳಿತದ ಪರಿಶೀಲನೆಯು ಪೂರ್ವಗ್ರಹದಿಂದ ಕೂಡಿದೆ ಎಂದು ಆರೋಪಿಸಿ ನಿರ್ದೇಶಕರ ಮಂಡಳಿಯ ಅಧ್ಯಕ್ಷ ರಜನೀಶ್ ಕುಮಾರ್ ಮತ್ತು ಸಹ-ಸಂಸ್ಥಾಪಕ ಭಾವಿಕ್ ಕೊಲಾಡಿಯಾ ವಿರುದ್ಧ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ದಾಳಿಯನ್ನು ಪ್ರಾರಂಭಿಸಿದರು. ಕಂಪೆನಿಯು ಸುಳ್ಳು ಮಾಹಿತಿಯನ್ನು ಹರಡಿದೆ ಎನ್ನುವುದು ಮ್ಯಾನೇಜಿಂಗ್​ ಡೈರೆಕ್ಟರ್​ ಆದವರಿಗೆ ಸೂಕ್ತವಲ್ಲ ಎಂದು ಕಂಪೆನಿ ಹೇಳಿತ್ತು.

“ನೀವು ಕಂಪೆನಿಯ ಹಿರಿಯ ಮ್ಯಾನೇಜ್‌ಮೆಂಟ್‌ನ ಕುಟುಂಬದ ಸದಸ್ಯರು ಮತ್ತು/ಅಥವಾ ಹಿರಿಯ ಮ್ಯಾನೇಜ್‌ಮೆಂಟ್‌ನ ಸದಸ್ಯರ ಸಂಗಾತಿಗಳಿಗೆ ಸುಳ್ಳು ಮತ್ತು ಆರೋಪದ ಮಾಹಿತಿಯನ್ನು ಹರಡಲು ತೊಡಗಿರುವಿರಿ. ನಿಮ್ಮ ಕಡೆಯಿಂದ ಇಂತಹ ಅಸಹ್ಯಕರ ನಡವಳಿಕೆಯು ಸಂಪೂರ್ಣವಾಗಿ ಅನಪೇಕ್ಷಿತ ಮತ್ತು ಕಂಪೆನಿಯು ಇದಕ್ಕೆ ಪ್ರಬಲವಾದ ಆಕ್ಷೇಪಣೆಯನ್ನು ಕೈಗೊಳ್ಳುತ್ತದೆ. ಕಂಪೆನಿಯ ಹಿರಿಯ ನಿರ್ವಹಣೆ ಸದಸ್ಯರ ಬಗ್ಗೆ ಸುಳ್ಳು ಮತ್ತು ಪ್ರಚೋದನಾಕಾರಿ ವಿಷಯವನ್ನು ಹರಡುವುದನ್ನು ನಿಲ್ಲಿಸಲು ಮತ್ತು ತಡೆಯಲು ನಿಮಗೆ ಮತ್ತೊಮ್ಮೆ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ನಡವಳಿಕೆಯು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ತಕ್ಕುದಲ್ಲ,” ಎಂದು ಸಂಸ್ಥೆಯು ಫೆಬ್ರವರಿ 22ರಂದು ಗ್ರೋವರ್ ಅವರ ಇಮೇಲ್‌ಗೆ ಅದರ ಪ್ರತಿಕ್ರಿಯೆ ಪತ್ರದಲ್ಲಿ ಹೀಗೆ ಹೇಳಿತ್ತು.

ವೈಯಕ್ತಿಕ ಸಂಭಾಷಣೆ, ಕಂಪೆನಿಗೆ ಸಂಬಂಧಿಸಿದ್ದಲ್ಲ ಗ್ರೋವರ್ ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ, ಪ್ರಶ್ನೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಕಂಪೆನಿಯು ಉಲ್ಲೇಖಿಸುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಆದರೂ ಬ್ಯಾಂಕಿಂಗ್ ಉದ್ಯಮದ ಅನುಭವಿ ಮತ್ತು ಎಸ್‌ಬಿಐನ ಮಾಜಿ ಅಧ್ಯಕ್ಷ ಕುಮಾರ್ ಅವರು ಪಕ್ಷಪಾತ ಮತ್ತು ಪೂರ್ವಗ್ರಹ ಪೀಡಿತರಾಗಿದ್ದಾರೆ ಎಂದು ಗ್ರೋವರ್ ಆರೋಪಿಸಿದ ನಂತರ ಈ ಆರೋಪ ಬಂದಿದೆ. ದೂರವಾಣಿ ಸಂಭಾಷಣೆಯನ್ನು ಉಲ್ಲೇಖಿಸಿದ ಅವರು, ಕೊಲಾಡಿಯ ಅವರು ತಮ್ಮನ್ನು ಸಭೆಗೆ ಕರೆದಿದ್ದಾರೆ ಮತ್ತು ಮೌಖಿಕ ಸಂಭಾಷಣೆ ಮೂಲಕ ನಿಂದಿಸಿದ್ದಾರೆ ಎಂದು ಹೇಳಿದ್ದರು ಮತ್ತು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ತಿಳಿಸಿದ್ದರು. ಕಂಪೆನಿಯು ಗ್ರೋವರ್ ಮತ್ತು ಕೊಲಾಡಿಯಾ ನಡುವಿನ ಕರೆಯನ್ನು ಒಪ್ಪಿಕೊಂಡಿದೆ. ಆದರೆ ಅದು ಕುಮಾರ್ ಅವರ ನಿವಾಸದಿಂದ ಮಾಡಿದ್ದು ಎಂಬ ಗ್ರೋವರ್ ಹೇಳಿಕೆಗಳನ್ನು ನಿರಾಕರಿಸಿದೆ. ಕೊಲಾಡಿಯಾ ಮತ್ತು ಗ್ರೋವರ್ ನಡುವಿನ ವೈಯಕ್ತಿಕ ಸಂಭಾಷಣೆ ಎಂದು ಕರೆದಿರುವ ಭಾರತ್‌ಪೇ, ಅವರು ಹಂಚಿಕೊಂಡ ಆಡಿಯೊ ಕ್ಲಿಪ್ ತನ್ನೊಂದಿಗೆ ಕಂಪೆನಿಯ ಯಾವುದೇ “ಅಧಿಕೃತ ಸಂವಹನ”ಕ್ಕೆ ಸಂಬಂಧಿಸಿಲ್ಲ ಎಂದು ಆರೋಪಿಸಿದೆ.

ಗ್ರೋವರ್ ಅವರು ಕೊಟಕ್ ಉದ್ಯೋಗಿಗೆ ನಿಂದನೀಯ ಭಾಷೆ ಬಳಸಿ ಬೈದಿದ್ದಕ್ಕೆ, ಭಾರತ್‌ಪೇನಲ್ಲಿ ನಂಜಿನ ಸಂಸ್ಕೃತಿ ಮತ್ತು ಅನುಚಿತ ವರ್ತನೆಯ ಬಗ್ಗೆ ಹಿನ್ನಡೆ ಮಧ್ಯೆ ಮಾರ್ಚ್ ಅಂತ್ಯದವರೆಗೆ ರಜಾ ತೆಗೆದುಕೊಂಡಿದ್ದರು. ಅವರ ಹೆಂಡತಿಯನ್ನೂ ರಜಾ ಮೇಲೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಭಾರತ್​ಪೇ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ದಂಪತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೊಟಕ್ ಮಹೀಂದ್ರಾ ಬ್ಯಾಂಕ್

Follow us on

Related Stories

Most Read Stories

Click on your DTH Provider to Add TV9 Kannada