Multibagger: ಈ ಷೇರಿನಲ್ಲಿ ಮಾಡಿದ್ದ ರೂ. 1.22 ಲಕ್ಷ ಹೂಡಿಕೆ 11 ತಿಂಗಳಲ್ಲಿ 91.50 ಲಕ್ಷ ರೂ.

11 ತಿಂಗಳ ಹಿಂದೆ ಈ ಐಪಿಒ ಲಿಸ್ಟಿಂಗ್​ನಲ್ಲಿ ಹೂಡಿಕೆ ಮಾಡಿದ 1.22 ಲಕ್ಷ ರೂಪಾಯಿ 91.50 ಲಕ್ಷ ರೂಪಾಯಿ ಆಗಿದೆ. ಯಾವುದು ಆ ಷೇರು ಎಂಬ ಮಾಹಿತಿ ಇಲ್ಲಿದೆ.

Multibagger: ಈ ಷೇರಿನಲ್ಲಿ ಮಾಡಿದ್ದ ರೂ. 1.22 ಲಕ್ಷ ಹೂಡಿಕೆ 11 ತಿಂಗಳಲ್ಲಿ 91.50 ಲಕ್ಷ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 01, 2022 | 1:20 PM

2021ನೇ ಇಸವಿಯಲ್ಲಿ ಸೆಕೆಂಡರಿ ಮಾರುಕಟ್ಟೆಯಲ್ಲಿ ಅದಾಗಲೇ ವಹಿವಾಟು ನಡೆಸುತ್ತಿದ್ದ ಷೇರುಗಳು ಮಾತ್ರ ಷೇರುದಾರರಿಗೆ ಅದ್ಭುತ ಆದಾಯವನ್ನು ನೀಡಿರುವುದಲ್ಲ. ಕೆಲವು ಐಪಿಒಗಳು ಸಹ ಅದರ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ (Multibagger) ಆಗಿ ಭಾರೀ ಲಾಭವನ್ನು ನೀಡಿದೆ. ಅಂಥದ್ದರಲ್ಲಿ EKI ಎನರ್ಜಿ ಸರ್ವೀಸಸ್ ಸಹ ಒಂದಾಗಿದೆ. ಈ ಐಪಿಒ 2021ರ ಏಪ್ರಿಲ್​ನಲ್ಲಿ BSE SME ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್​ ಮಾಡಲಾದ ಅಂತಹ ಒಂದು ಸಾರ್ವಜನಿಕ ಇಶ್ಯೂ ಆಗಿದೆ. ಸಾರ್ವಜನಿಕ ಇಶ್ಯೂ ಪ್ರತಿ ಷೇರಿಗೆ 100 ರೂಪಾಯಿಯಿಂದ 102 ರುಪಾಯಿಗೆ ದರ ನಿಗದಿ ಆಗಿತ್ತು. ಆ ಇಶ್ಯೂ ಬೆಲೆಯಿಂದ ಶೇ 37ರಷ್ಟು ಹೆಚ್ಚಿಗೆ, ಅಂದರೆ ರೂ. 140ರ ಹಂತಕ್ಕೆ ಪದಾರ್ಪಣೆ ಮಾಡಿತು. EKI ಎನರ್ಜಿ ಷೇರಿನ ಬೆಲೆ ಇಂದು ರೂ. 7,625.20 ಆಗಿದೆ. ಇದು ಪ್ರತಿ ಈಕ್ವಿಟಿ ಷೇರಿಗೆ ರೂ. 102 ರ ಮೇಲಿನ ಬೆಲೆಯ ಬ್ಯಾಂಡ್‌ನಿಂದ ಸುಮಾರು ಶೇ 7,375ರಷ್ಟು ಹೆಚ್ಚಾಗಿದೆ.

ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಮಾರಾಟದ ಒತ್ತಡಕ್ಕೆ ಸಿಲುಕಿದ್ದು, ಈ ಅವಧಿಯಲ್ಲಿ ಸುಮಾರು ಶೇ 16 ರಷ್ಟು ಇಳಿದಿದೆ. ಕಳೆದ 6 ತಿಂಗಳಲ್ಲಿ ಈ BSE SME ಸ್ಟಾಕ್ ರೂ. 1900 ರಿಂದ ರೂ. 7625 ಮಟ್ಟಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 300ರಷ್ಟು ಹೆಚ್ಚಳವಾಗಿದೆ. ವರ್ಷದ ಆರಂಭದಿಂದ ಇಲ್ಲಿಯವರೆಗೆ (YTD) ಸಮಯದಲ್ಲಿ ಈ ಮಲ್ಟಿಬ್ಯಾಗರ್ ಷೇರಿನ ಬೆಲೆಯು ಸುಮಾರು ಶೇ 26ರಷ್ಟು ಕಡಿಮೆಯಾಗಿದೆ. ಆದರೆ ಅದರ ಲಿಸ್ಟಿಂಗ್ ಪ್ರಾರಂಭದಿಂದಲೂ ಕಳೆದ 11 ತಿಂಗಳಲ್ಲಿ ರೂ. 140 (ಅದರ ಲಿಸ್ಟಿಂಗ್ ಬೆಲೆ)ನಿಂದ ರೂ. 7625 ಮಟ್ಟಕ್ಕೆ ಮೇಲೇರಿದ್ದು, ಶೇ 4450ರಷ್ಟು ಗಳಿಕೆ ಕಂಡಿದೆ.

ಆದರೂ ಅದರ ಪ್ರಸ್ತುತ ಷೇರಿನ ಬೆಲೆಯೊಂದಿಗೆ ಅದರ ವಿತರಣೆ ಬೆಲೆಯನ್ನು ಹೋಲಿಸಿದರೆ ಮಲ್ಟಿಬ್ಯಾಗರ್ ಐಪಿಒ ಅನ್ನು ಪ್ರತಿ ಷೇರಿಗೆ ರೂ. 100ರಿಂದ ರೂ. 102ಕ್ಕೆ ನೀಡಲಾಯಿತು. ಅಂದರೆ ಇದು ರೂ. 102ರಿಂದ ರೂ. 7625 ಮಟ್ಟಕ್ಕೆ ಏರಿದ್ದು, ಅದರ ಐಪಿಒ ಹಂಚಿಕೆದಾರರಿಗೆ ಶೇ 7375ರಷ್ಟು ಲಾಭವನ್ನು ನೀಡಿದೆ.

1.22 ಲಕ್ಷ ರೂಪಾಯಿಯಿಂದ 91 ಲಕ್ಷ ರೂಪಾಯಿಗೆ EKI ಎನರ್ಜಿ ಸರ್ವೀಸಸ್ ಲಿಮಿಟೆಡ್ ಐಪಿಒ ಅನ್ನು ಪ್ರತಿ ಈಕ್ವಿಟಿ ಷೇರಿಗೆ ರೂ. 100ರಿಂದ ರೂ. 102ಕ್ಕೆ ನೀಡಲಾಯಿತು ಮತ್ತು ಅರ್ಜಿದಾರರು 1200 ಕಂಪೆನಿಯ ಷೇರುಗಳನ್ನು ಒಳಗೊಂಡಿರುವ ಒಂದು ಲಾಟ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿತ್ತು. ಆದ್ದರಿಂದ ಹೂಡಿಕೆದಾರರು ಈ ಸಾರ್ವಜನಿಕ ಇಶ್ಯೂನಲ್ಲಿ ಅರ್ಜಿ ಸಲ್ಲಿಸಲು ರೂ. 1,22,400 ಹೂಡಿಕೆ ಮಾಡಬೇಕಾಗಿತ್ತು. ಈ ಮಲ್ಟಿಬ್ಯಾಗರ್ ಐಪಿಒನಲ್ಲಿ ಹಂಚಿಕೆ ನಂತರದ ಅವಧಿಯಲ್ಲಿ ಹೂಡಿಕೆ ಮಾಡಿದ್ದರೆ, ಅದರ ರೂ. 1,22,400 ಇಂದು ರೂ. 91.50 ಲಕ್ಷಕ್ಕೆ [(ರೂ.7625.20/102) x ರೂ. 1,22,400] ಆಗುತ್ತಿತ್ತು. EKI ಎನರ್ಜಿ ಸರ್ವೀಸಸ್ ಷೇರುಗಳ ಪ್ರಸ್ತುತ ಮಾರುಕಟ್ಟೆ ಬಂಡವಾಳ ಮೌಲ್ಯವು ರೂ. 5,241 ಕೋಟಿ. ಇದರ ವ್ಯಾಪಾರದ ಪ್ರಮಾಣವು 24,150 ಆಗಿದ್ದು, ಇದು ಅದರ 20 ದಿನಗಳ ಸರಾಸರಿ ಪರಿಮಾಣದ 20 ಪಟ್ಟು ಹೆಚ್ಚು.

EKI ಎನರ್ಜಿ ಸರ್ವೀಸಸ್ ಐಪಿಒ ಅನ್ನು 2021ರ ಮಾರ್ಚ್​ನಲ್ಲಿ ಸಬ್​ಸ್ಕ್ರಿಪ್ಷನ್​ಗಾಗಿ ತೆರೆಯಲಾಯಿತು ಮತ್ತು ಇದು 7ನೇ ಏಪ್ರಿಲ್ 2021ರಂದು BSE SME ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್​ ಆಯಿತು. ಲಿಸ್ಟಿಂಗ್ ಆದ ದಿನಾಂಕದಂದು EKI ಎನರ್ಜಿ ಷೇರುಗಳು ಪ್ರತಿ ಷೇರಿಗೆ ರೂ. 140ರಂತೆ ಶುರುವಾದವು. ರೂ. 147ಕ್ಕೆ ಮುಕ್ತಾಯ ಕಂಡಿತು.

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ