AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ

ಈ ಮಲ್ಟಿಬ್ಯಾಗರ್ ಸ್ಟಾಕ್​ನಲ್ಲಿ ಹತ್ತು ವರ್ಷಗಳ ಹಿಂದೆ ಮಾಡಿದ್ದ ರೂ. 1 ಲಕ್ಷದ ಹೂಡಿಕೆ 4 ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ. ಯಾವುದು ಆ ಸ್ಟಾಕ್ ಎಂಬ ವಿವರ ಇಲ್ಲಿದೆ.

Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 15, 2022 | 5:42 PM

Share

ಪೆನ್ನಿ ಸ್ಟಾಕ್‌ಗಳಲ್ಲಿ (Penny Stocks) ಹೂಡಿಕೆ ಮಾಡುವುದು ಅಪಾಯಕಾರಿ. ಅದರಲ್ಲೂ ವಿಶೇಷವಾಗಿ ದೀರ್ಘಾವಧಿಯವರೆಗೆ ಹೂಡಿಕೆ ಮಾಡುವುದಾದರೆ ಮತ್ತೂ ಅಪಾಯವೇ. ಏಕೆಂದರೆ ಕೌಂಟರ್‌ನಲ್ಲಿ ಕಡಿಮೆ ಲಿಕ್ವಿಡಿಟಿ ಇರುವುದರಿಂದ ಹೆಚ್ಚಿನ ಚಂಚಲತೆಗೆ ಕಾರಣವಾಗುತ್ತದೆ. ಆದರೆ ನಾವು ಹಿರಿಯ ಹೂಡಿಕೆದಾರರ ದೃಷ್ಟಿಕೋನಗಳ ಮೂಲಕ ಹೋದರೆ, ಷೇರುಗಳಲ್ಲಿ ಹೂಡಿಕೆ ಮಾಡುವುದು ವ್ಯವಹಾರದಲ್ಲಿ ಹೂಡಿಕೆ ಮಾಡಿದಂತೆ. ಕಂಪೆನಿಯ ವ್ಯವಹಾರ ಮಾದರಿ ಮತ್ತು ಲಾಭದಾಯಕತೆಯು ಸುಸ್ಥಿರವಾಗಿ ಕಾಣುವವರೆಗೆ ಷೇರುಗಳಲ್ಲಿ ಹೂಡಿಕೆ ಮಾಡಬೇಕು. ಇದು ದೀರ್ಘಾವಧಿಯಲ್ಲಿ ದೊಡ್ಡ ಲಾಭವನ್ನು ನೀಡಬಹುದು. GRM ಓವರ್​ಸೀಸ್ ಷೇರುಗಳು ಅಂಥ ಇತ್ತೀಚಿನ ಉದಾಹರಣೆಗಳಲ್ಲಿ ಒಂದಾಗಿದೆ. ಕಳೆದ 10 ವರ್ಷಗಳಲ್ಲಿ ಸ್ಮಾಲ್ ಕ್ಯಾಪ್ ರೈಸ್ ಮಿಲ್ಲಿಂಗ್ ಕಂಪೆನಿಯ ಸ್ಟಾಕ್ ಬೆಲೆ ರೂ. 1.93ರಿಂದ ರೂ. 782.40ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 40,450ರಷ್ಟು ಏರಿಕೆಯಾಗಿದೆ.

GRM ಓವರ್​ಸೀಸ್ ಷೇರು ಬೆಲೆ ಇತಿಹಾಸ ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಸುಮಾರು ರೂ. 505ರಿಂದ ರೂ. 782 ಮಟ್ಟಕ್ಕೆ ಏರಿದೆ. ಈ ಮೂಲಕ ಇದು ಶೇ 55ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ, 2022ರ ಈ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ರೂ. 156ರಿಂದ ರೂ. 782ಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇ 400ರಷ್ಟು ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಪೆನ್ನಿ ಸ್ಟಾಕ್ ರೂ.34.44ರಿಂದ ರೂ. 782.40ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು 2200ರಷ್ಟು ಹೆಚ್ಚಳವಾಗಿದೆ. ಅಂತೆಯೇ, ಕಳೆದ 5 ವರ್ಷಗಳಲ್ಲಿ, ರೂ. 4.49 ರಿಂದ ರೂ. 782.40 ಮಟ್ಟಕ್ಕೆ ಏರಿದ್ದು, ಈ ಅವಧಿಯಲ್ಲಿ 17,325ರಷ್ಟು ಹೆಚ್ಚಳವಾಗಿದೆ.

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 1.93 ರಿಂದ (10 ಜನವರಿ 2012ರಂದು) ರೂ. 782.40ಕ್ಕೆ (14 ಜನವರಿ 2022ರಂದು) ಏರಿಕೆಯಾಗಿದೆ. ಸುಮಾರು ಒಂದು ದಶಕದ ಈ ಅವಧಿಯಲ್ಲಿ ಸುಮಾರು 405 ಪಟ್ಟು ಏರಿಕೆಯಾಗಿದೆ.

ಹೂಡಿಕೆದಾರರ ಮೇಲೆ ಪರಿಣಾಮ GRM ಓವರ್​ಸೀಸ್ ಷೇರಿನ ಬೆಲೆ ಇತಿಹಾಸ ನೋಡಿದರೆ ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಅದು 1.55 ಲಕ್ಷಕ್ಕೆ ಬದಲಾಗುತ್ತಿತ್ತು. ಈ ರೈಸ್ ಮಿಲ್ಲಿಂಗ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿಕೆದಾರರು 6 ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು 5 ಲಕ್ಷ ರೂ. ತಲುಪಿರುತ್ತಿತ್ತು. ಕಳೆದ ಒಂದು ವರ್ಷದಲ್ಲಿ ರೂ. 23 ಲಕ್ಷಕ್ಕೆ ಬದಲಾಗಿರುತ್ತಿತ್ತು. ಹೂಡಿಕೆದಾರರು 5 ವರ್ಷಗಳ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ಹೂಡಿಕೆ ಮಾಡಿ, ಹಾಗೇ ಷೇರುಗಳನ್ನು ಉಳಿಸಿಕೊಂಡಿದ್ದರೆ ರೂ. 1 ಲಕ್ಷ ಇಂದು ರೂ. 1.74 ಕೋಟಿಗೆ ಬದಲಾಗುತ್ತಿತ್ತು. 10 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಒಂದು ಸ್ಟಾಕ್ ಅನ್ನು ರೂ. 1.93 ಮಟ್ಟದಲ್ಲಿ ಖರೀದಿಸಿದ್ದರೆ ಆ ರೂ. 1 ಲಕ್ಷ ಇಂದು ರೂ. 4.05 ಕೋಟಿಗೆ ಬದಲಾಗುತ್ತಿತ್ತು.

ಇದನ್ನೂ ಓದಿ: Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ