Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?

ಈ ಮಲ್ಟಿಬ್ಯಾಗರ್ ಸ್ಟಾಕ್​ನಲ್ಲಿ ಮೂರು ವರ್ಷದ ಹಿಂದೆ 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ದಲ್ಲಿ ಅದು ಈಗ 2 ಕೋಟಿ ರೂಪಾಯಿ ಆಗಿದೆ. ಯಾವುದು ಆ ಸ್ಟಾಕ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Multibagger stock: ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ 3 ವರ್ಷದ ಹಿಂದೆ ಮಾಡಿದ 1 ಲಕ್ಷದ ಹೂಡಿಕೆ ಈಗ ಎಷ್ಟು ಕೋಟಿ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 24, 2021 | 6:50 PM

ಕೊವಿಡ್19 ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೆ ಆಗಿರುವುದರ ಮಧ್ಯೆಯೂ ಭಾರತದ ಷೇರು ಮಾರುಕಟ್ಟೆಯು ಹೂಡಿಕೆದಾರರಿಗೆ ಅಮೋಘ ರಿಟರ್ನ್ಸ್ ನೀಡಿದೆ. ಸುಮಾರು ಒಂದೂವರೆ ವರ್ಷಗಳ ಈ ಅವಧಿಯಲ್ಲಿ, 2021ನೇ ಇಸವಿಯಲ್ಲಿ ಉತ್ತಮ ಸಂಖ್ಯೆಯ ಷೇರುಗಳು ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪಟ್ಟಿಗೆ ಸೇರ್ಪಡೆ ಆಗಿವೆ. ಷೇರುಪೇಟೆಯಲ್ಲಿ ಹೆಚ್ಚಿನ ಸಂಖ್ಯೆಯ ಪೆನ್ನಿ ಸ್ಟಾಕ್‌ಗಳು ಅದರ ಷೇರುದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ ನೀಡಿವೆ. 2021ರ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳಲ್ಲಿ ಡಿಗ್​ಜಮ್ ಷೇರು ಸಹ ಒಂದು. ಈ ಪೆನ್ನಿ ಜವಳಿ ಸ್ಟಾಕ್ ಕಳೆದ 3 ವರ್ಷಗಳಲ್ಲಿ ರೂ. 0.97 (97 ಪೈಸೆ)ರಿಂದ ರೂ. 194 ಕ್ಕೆ ಏರಿ, ಈ ಅವಧಿಯಲ್ಲಿ ಸುಮಾರು ಶೇ 19,900ರಷ್ಟು ಏರಿಕೆಯಾಗಿದೆ.

ಡಿಗ್​ಜಮ್ ಷೇರು ಬೆಲೆ ಇತಿಹಾಸ ಡಿಗ್​ಜಮ್ ಷೇರು ಬೆಲೆ ಇತಿಹಾಸ ನೋಡುವುದಾದರೆ, ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಕಳೆದ ಒಂದು ತಿಂಗಳಲ್ಲಿ ರೂ. 66.60ರಿಂದ ರೂ. 194ಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇ 90ರಷ್ಟು ಏರಿಕೆಯಾಗಿದೆ. ಕಳೆದ 3 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 17.27 ರಿಂದ ರೂ. 194ಕ್ಕೆ ಏರಿ, ಈ ಮೂಲಕ ಸುಮಾರು ಶೇ 1000ರಷ್ಟು ರಿಟರ್ನ್ಸ್ ನೀಡಿದೆ. ಕಳೆದ ಒಂದು ವರ್ಷದಲ್ಲಿ ರೂ.3.98 ರಿಂದ ರೂ.194ಕ್ಕೆ ಹೆಚ್ಚಳವಾಗಿ, ಸುಮಾರು ಶೇ 4800ರಷ್ಟು ಏರಿಕೆ ದಾಖಲಿಸಿದೆ. ಕಳೆದ ಮೂರು ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಬೆಲೆಯು ರೂ. 0.97ರಿಂದ ರೂ. 194ರ ಹಂತಕ್ಕೆ ತಲುಪಿ, ಈ ಅವಧಿಯಲ್ಲಿ ಸುಮಾರು 200 ಪಟ್ಟಿ ಮೇಲೇರಿದೆ.

ಹೂಡಿಕೆ ಮೇಲೆ ಪರಿಣಾಮ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನ ಷೇರಿನ ಬೆಲೆ ಇತಿಹಾಸದ ಆಧಾರದಲ್ಲಿ ನೋಡುವುದಾದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಆ 1 ಲಕ್ಷ ಇಂದು ರೂ. 1.90 ಲಕ್ಷ ಆಗಿರುತ್ತಿತ್ತು. ಹೂಡಿಕೆದಾರರು 3 ತಿಂಗಳ ಹಿಂದೆ ಈ ಷೇರುಗಳಲ್ಲಿ ರೂ. 1 ಲಕ್ಷ ಹೂಡಿದ್ದರೆ, 11 ಲಕ್ಷ ರೂ. ಆಗಿರುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಪೆನ್ನಿ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಇಲ್ಲಿಯವರೆಗೆ ಆ ಷೇರುಗಳನ್ನು ಉಳಿಸಿಕೊಂಡಿದ್ದರೆ ಆ 1 ಲಕ್ಷ 49 ಲಕ್ಷ ಆಗಿರುತ್ತಿತ್ತು. ಹೂಡಿಕೆದಾರರು 3 ವರ್ಷಗಳ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಈ ಮಲ್ಟಿಬ್ಯಾಗರ್​ನಲ್ಲಿನ 1 ಲಕ್ಷ ರೂಪಾಯಿ ಇಂದು ರೂ. 2 ಕೋಟಿಗೆ ಬದಲಾಗುತ್ತಿತ್ತು.

3 ವರ್ಷಗಳಲ್ಲಿ ಆಲ್ಫಾ ರಿಟರ್ನ್ ನೀಡಿದೆ ಈ ಸ್ಟಾಕ್ 2021 ರಲ್ಲಿ ಆಲ್ಫಾ ಸ್ಟಾಕ್‌ಗಳಲ್ಲಿ ಒಂದಾಗಿದೆ. ಇದು ಪ್ರಮುಖ ಮಾನದಂಡ ಸೂಚ್ಯಂಕಗಳಿ ರಿಟರ್ನ್ಸ್​ಗಿಂತ ಬಹಳ ಮುಂದಿದೆ. ಅದೇ 3 ವರ್ಷಗಳಲ್ಲಿ ಎನ್‌ಎಸ್‌ಇ ನಿಫ್ಟಿ ಸುಮಾರು ಶೇ 57.60ರಷ್ಟು ಆದಾಯವನ್ನು ನೀಡಿದರೆ, ಬಿಎಸ್‌ಇ ಸೆನ್ಸೆಕ್ಸ್ ಹೂಡಿಕೆದಾರರಿಗೆ ಸುಮಾರು ಶೇ 59ರಷ್ಟು ಲಾಭವನ್ನು ನೀಡಿದೆ.

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ