ಕೋಲ್ ಇಂಡಿಯಾ ಮತ್ತು ಇತರ ಪಿಎಸ್ಯುಗಳಿಂದ ಕೇಂದ್ರ ಸರ್ಕಾರಕ್ಕೆ ಬಂಪರ್ ಡಿವಿಡೆಂಡ್
ಕೇಂದ್ರ ಸರ್ಕಾರವು ಕೋಲ್ ಇಂಡಿಯಾ ಸೇರಿದಂತೆ ಇತರ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಂದ ಭಾರೀ ಪ್ರಮಾಣದ ಡಿವಿಡೆಂಡ್ ಪಡೆದುಕೊಂಡಿದೆ.
ಕೇಂದ್ರ ಸರ್ಕಾರವು ಕೋಲ್ ಇಂಡಿಯಾದಿಂದ ಲಾಭಾಂಶದ ಭಾಗವಾಗಿ ರೂ. 3,668 ಕೋಟಿಗಳನ್ನು ಪಡೆದುಕೊಂಡಿದೆ. ಇದುವರೆಗೆ FY22ಕ್ಕಾಗಿ ಸಾರ್ವಜನಿಕ ವಲಯದ ಉದ್ಯಮಗಳ ಲಾಭಾಂಶದಿಂದ ಒಟ್ಟು ಆದಾಯ ರೂ. 33,479 ಕೋಟಿ ತೆಗೆದುಕೊಂಡಿದೆ. ಇನ್ನು ಟೆಲಿಕಮ್ಯುನಿಕೇಷನ್ಸ್ ಇಂಡಿಯಾ ಲಿಮಿಟೆಡ್, IRCON, RITES ಮತ್ತು NIIFLನಿಂದ ಲಾಭಾಂಶದ ಭಾಗವಾಗಿ ರೂ. 21ಕೋಟಿ, ರೂ. 48 ಕೋಟಿ, ರೂ. 69 ಕೋಟಿ ಮತ್ತು ರೂ. 23 ಕೋಟಿಗಳನ್ನು ಪಡೆದುಕೊಂಡಿದೆ. “ಸರ್ಕಾರವು ಕೋಲ್ ಇಂಡಿಯಾ ಲಿಮಿಟೆಡ್‌ನಿಂದ ಸುಮಾರು ರೂ. 3668 ಕೋಟಿ ಮತ್ತು ಟೆಲಿಕಮ್ಯುನಿಕೇಷನ್ಸ್ ಇಂಡಿಯಾ ಲಿಮಿಟೆಡ್‌ನಿಂದ ರೂ. 21 ಕೋಟಿಯನ್ನು ಲಾಭಾಂಶದ ಭಾಗವಾಗಿ ಸ್ವೀಕರಿಸಿದೆ,” ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಶುಕ್ರವಾರ ಸಂಜೆ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಸರ್ಕಾರವು ಕ್ರಮವಾಗಿ ರೂ. 48 ಕೋಟಿ, ರೂ. 69 ಕೋಟಿ ಮತ್ತು ರೂ. 23 ಕೋಟಿಗಳನ್ನು IRCON, RITES ಮತ್ತು NIIFLನಿಂದ ಲಾಭಾಂಶದ ಭಾಗವಾಗಿ ಸ್ವೀಕರಿಸಿದೆ,” ಎಂದು ಅವರು ಹೇಳಿದ್ದಾರೆ. ಸರ್ಕಾರವು ಬಂಡವಾಳ ಹಿಂತೆಗೆತ ಮತ್ತು ಲಾಭಾಂಶದಿಂದ ಇದುವರೆಗೆ ಒಟ್ಟು ರೂ. 42,809.48 ಕೋಟಿಗಳನ್ನು ಪಡೆದಿದೆ. ಇದರಲ್ಲಿ ಕೇವಲ ರೂ. 9,329.9 ಕೋಟಿ ಮಾತ್ರ ಆಯಕಟ್ಟಿನ ಮತ್ತು ಕಾರ್ಯತಂತ್ರವಲ್ಲದ ಮಾರಾಟದಿಂದ ಬಂದಿದೆ. ಜೊತೆಗೆ ಎನ್ಎಂಡಿಸಿ, ಹುಡ್ಕೋ ಮತ್ತು ಹಿಂದೂಸ್ತಾನ್ ಕಾಪರ್ ಲಿಮಿಟೆಡ್ನ ಒಎಫ್ಎಸ್ ಮತ್ತು ಉದ್ಯೋಗಿ OFS ಮಾರ್ಗವಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 2022ರ ಹೂಡಿಕೆಯಿಂದ ರೂ. 1.75 ಲಕ್ಷ ಕೋಟಿಗಳ ಗುರಿಯನ್ನು ಸರ್ಕಾರ ಹೊಂದಿದೆ. ಇದು ಬಿಪಿಸಿಎಲ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಬಿಇಎಂಎಲ್ ಮತ್ತು ಪವನ್ ಹನ್ಸ್‌ನಂತಹ ಪಿಎಸ್ಯುಗಳ ಕಾರ್ಯತಂತ್ರದ ಬಂಡವಾಳ ಹಿಂತೆಗೆದುಕೊಳ್ಳುವಿಕೆಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತದೆ.
ಇದನ್ನೂ ಓದಿ: Government Asset Sale: ಸರ್ಕಾರದಿಂದ ಎಂಟಿಎನ್ಎಲ್, ಬಿಎಸ್ಎನ್ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ