AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು: ಇಲ್ಲಿದೆ ಪಟ್ಟಿ

OTT Release this week: ಮುಂದಿನ ವಾರ ಕೆಲ ಭರ್ಜರಿ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲಿವೆ. ಆದರೆ ಈ ವಾರ ಚಿತ್ರಮಂದಿರ ತುಸು ಡಲ್ ಆಗಿದೆ. ಆದರೆ ಒಟಿಟಿಯಲ್ಲಿ ಈ ವಾರ ಕೆಲ ಒಳ್ಳೆಯ ಸಿನಿಮಾಗಳು ಮತ್ತು ವೆಬ್ ಸರಣಿಗಳು ಎಂಟ್ರಿ ಕೊಟ್ಟಿವೆ. ಕನ್ನಡ ಸೇರಿದಂತೆ ಈ ವಾರ ಕೆಲ ನೋಡಲೇ ಬೇಕಾದ ಸಿನಿಮಾಗಳು ಒಟಿಟಿಗೆ ಬಂದಿದ್ದು, ಅವುಗಳ ಪಟ್ಟಿ ಇಲ್ಲಿದೆ ನೋಡಿ...

ಮಂಜುನಾಥ ಸಿ.
|

Updated on: Mar 14, 2026 | 4:22 PM

Share
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಇನ್ನೂ ಕೆಲವು ಪ್ರಮುಖ ಕಲಾವಿದರು ನಟಿಸಿರುವ ‘ಲ್ಯಾಂಡ್​ಲಾರ್ಡ್’ ಸಿನಿಮಾ ಒಟಿಟಿಗೆ ಬರುತ್ತಿದೆ. ಆದರೆ ಈ ವಾರ ಅಲ್ಲ ಬದಲಿಗೆ ಮುಂದಿನ ವಾರ ಮಾರ್ಚ್ 15ಕ್ಕೆ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

1 / 7
ಮಹಿಳೆ ಮತ್ತು ಒಂದು ನಾಯಿಯ ಕತೆಯನ್ನು ಒಳಗೊಂಡ ಹಾಸ್ಯಮಯ ಸಾಮಾಜಿಕ ಸಿನಿಮಾ ‘ಪೊನ್ನುಂ-ಪೋರಾಟಂ’. ಮಲಯಾಳಂನ ಈ ಸಿನಿಮಾ ಈ ವಾರ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳನ್ನು ಹಾಸ್ಯಮಯವಾಗಿ ತೋರಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

2 / 7
ಭರ್ತ ಮಹಾಶಯುಲಕು ವಿಜ್ಞಪ್ತಿ ಇದು ಕಳೆದ ಸಂಕ್ರಾಂತಿಗೆ ಬಿಡುಗಡೆ ಆಗಿದ್ದ ಸಿನಿಮಾ. ಹಲವು ದೊಡ್ಡ ಸಿನಿಮಾಗಳ ಜೊತೆಗೆ ಬಿಡುಗಡೆ ಆದ ಈ ಹಾಸ್ಯಮಯ ಆಕ್ಷನ್ ಸಿನಿಮಾ ಸಂಕ್ರಾಂತಿಯ ಇತರೆ ಸಿನಿಮಾಗಳ ಅಬ್ಬರದಲ್ಲಿ ಕಳೆದು ಹೋಯ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾನಲ್ಲಿ ರವಿತೇಜ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ.

3 / 7
ಟಿವಿಎಫ್ ಅವರ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿದೆ ಆಸ್ಪಿರೆಂಟ್. ಇದೀಗ ಇದರ ಮೂರನೇ ಸೀಸನ್ ಬಿಡುಗಡೆ ಆಗಿದೆ. ಯುಪಿಎಸ್​​ಸಿ ಓದುವ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಓದಿಸುವ ಇನ್​​ಸ್ಟಿಟ್ಯೂಟ್ ಅದರ ರಾಜಕೀಯ ಇನ್ನಿತರೆ ವಿಷಯಗಳನ್ನು ಈ ವೆಬ್ ಸರಣಿ ಒಳಗೊಂಡಿದೆ.

4 / 7
ತೆಲುಗು ನಟ ವಿಶ್ವಕ್ ಸೇನ್ ನಟಿಸಿರುವ ‘ಫಂಕಿ’ ಸಿನಿಮಾ ಕಳೆದ ತಿಂಗಳಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಅನುದೀಪ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಕಾಮಿಡಿ ಸಿನಿಮಾ ಆಗಿದ್ದು, ಚಿತ್ರಮಂದಲ್ಲಿ ಸಾಮಾನ್ಯ ಪ್ರದರ್ಶನವನ್ನಷ್ಟೆ ಕಂಡಿತ್ತು. ಇದೀಗ ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ.

5 / 7
ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಯಶಸ್ಸು ಗಳಿಸಿದ್ದ ತಮಿಳು ಸಿನಿಮಾ ‘ಪೂಕಿ’ ಇದೀಗ ಒಟಿಟಿಗೆ ಬಂದಿದೆ. ಪ್ರೇಮಿಗಳಿಬ್ಬರೂ ರೋಡ್ ರೇಜ್ ಘಟನೆಯೊಂದರಲ್ಲಿ ಜಗಳ ಮಾಡಿಕೊಂಡು ದೂರಾಗುತ್ತಾರೆ. ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಮತ್ತೆ ಹೇಗೆ ಮರಳಿ ಸಂಧಿಸುತ್ತಾರೆ ಎಂಬುದು ಸಿನಿಮಾದ ಕತೆ. ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.

6 / 7
ತಾಜ್​ ಮಹಲ್​​ನ ಇತಿಹಾಸವನ್ನು ಕೆದಕುವ ಕತೆಯನ್ನು ಒಳಗೊಂಡಿರುವ ಸಿನಿಮಾ ‘ದಿ ತಾಜ್ ಸ್ಟೋರಿ’. ತುಷಾರ್ ನಿರ್ದೇಶಿಸಿರುವ ಈ ಸಿನಿಮಾನಲ್ಲಿ ಪರೇಶ್ ರಾವಲ್ ನಟಿಸಿದ್ದಾರೆ. ತಾಜ್ ಮಹಲ್, ಹಿಂದೂ ದೇವಾಲಯ ಆಗಿತ್ತು ಎಂದು ಪರೇಶ್ ರಾವಲ್ ಪಾತ್ರ ನ್ಯಾಯಾಲಯದಲ್ಲಿ ವಾದ ಮಾಡುವುದೇ ಈ ಸಿನಿಮಾದ ಕತೆ. ಈ ಸಿನಿಮಾ ಲಯನ್ಸ್​​ಗೇಟ್​​ ಒಟಿಟಿಯಲ್ಲಿ ಬಿಡುಗಡೆ ಆಗಿದೆ.

7 / 7
Follow Us
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!

ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!

ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!

ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ

ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ

ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?

ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !

ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!

1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!