Government Asset Sale: ಸರ್ಕಾರದಿಂದ ಎಂಟಿಎನ್ಎಲ್, ಬಿಎಸ್‌ಎನ್‌ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಸ್‌ಎನ್‌ಎಲ್, ಎಂಟಿಎನ್ಎಲ್ ರಿಯಲ್ ಎಸ್ಟೇಟ್ ಆಸ್ತಿಗಳನ್ನು 1100 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಕ್ಕೆ ನಿರ್ಧರಿಸಲಾಗಿದೆ.
DIPAM ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳ ಪ್ರಕಾರ, ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ನ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಸುಮಾರು 1,100 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ದಾಖಲೆಗಳನ್ನು ಅಪ್‌ಲೋಡ್ ಮಾಡಿದೆ. ಹೈದರಾಬಾದ್, ಚಂಡೀಗಡ, ಭಾವನಗರ ಮತ್ತು ಕೋಲ್ಕತ್ತಾದಲ್ಲಿರುವ ಬಿಎಸ್‌ಎನ್‌ಎಲ್ ಆಸ್ತಿಗಳನ್ನು ಸುಮಾರು 800 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ಪೋಸ್ಟ್ ಮಾಡಲಾಗಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ವೆಬ್‌ಸೈಟ್ ಮುಂಬೈನ ವಸಾರಿ ಹಿಲ್, ಗೋರೆಗಾಂವ್‌ನಲ್ಲಿರುವ MTNL ಆಸ್ತಿಗಳನ್ನು ಸುಮಾರು 270 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ಲಿಸ್ಟ್ ಮಾಡಿದೆ.
ಒಶಿವಾರದಲ್ಲಿ ಇರುವ ಎಂಟಿಎನ್ಎಲ್ನ 20 ಫ್ಲ್ಯಾಟ್‌ಗಳನ್ನು ಕಂಪೆನಿಯ ಆಸ್ತಿ ಹಣ ಗಳಿಸುವ ಯೋಜನೆಯ ಭಾಗವಾಗಿ ಮಾರಾಟಕ್ಕೆ ಇಡಲಾಗಿದೆ. ಫ್ಲ್ಯಾಟ್‌ಗಳು 1-ಕೋಣೆಯ ಸೆಟ್‌ನ ಎರಡು ಯೂನಿಟ್, 1 ಮಲಗುವ ಕೋಣೆ ಹಾಲ್ ಮತ್ತು ಅಡುಗೆಮನೆಯ 17 ಘಟಕಗಳು (BHK) ಮತ್ತು 2 ಬಿಎಚ್ಕೆ ಒಂದು ಘಟಕವನ್ನು ಒಳಗೊಂಡಿವೆ. ಅವುಗಳ ಮೀಸಲು ಬೆಲೆ 52.26 ಲಕ್ಷ ರೂಪಾಯಿಯಿಂದ 1.59 ಕೋಟಿ ರೂಪಾಯಿ ಇದೆ.
ಎಂಟಿಎನ್ಎಲ್ನ ಆಸ್ತಿಗಳ ಇ-ಹರಾಜು ಡಿಸೆಂಬರ್ 14ರಂದು ನಡೆಯಲಿದೆ. 2019ರ ಅಕ್ಟೋಬರ್ನಲ್ಲಿ ಸರ್ಕಾರವು ಅನುಮೋದಿಸಿದ ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ಗಾಗಿ 69,000 ಕೋಟಿ ರೂಪಾಯಿಗಳ ಆಸ್ತಿ ಹಣಗಳಿಕೆ ಪುನಶ್ಚೇತನ ಯೋಜನೆಯ ಭಾಗವಾಗಿದೆ. ಎರಡೂ ಸಾರ್ವಜನಿಕ ವಲಯದ ಸಂಸ್ಥೆಗಳು 2022ರ ವೇಳೆಗೆ 37,500 ಕೋಟಿ ಮೌಲ್ಯದ ಆಸ್ತಿಯನ್ನು ಗುರುತಿಸಿ, ಹಣ ಗಳಿಸಬೇಕಿದೆ.
ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ