AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ

ಮೂಲಸೌಕರ್ಯ ಯೋಜನೆಗಳ ಮಾರಾಟಕ್ಕೆ ಕೇಂದ್ರ ನಿರ್ಧಾರ ಮಾಡಿದ್ದು ಈ ಬಗ್ಗೆ ಸೋಮವಾರ (ಆಗಸ್ಟ್ 23) ದೆಹಲಿಯಲ್ಲಿ ಕೇಂದ್ರದ ಹಣಕಾಸು ಇಲಾಖೆ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿಕೆ ನೀಡಿದ್ದಾರೆ.

6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Aug 23, 2021 | 6:11 PM

Share

ದೆಹಲಿ: 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟಕ್ಕೆ ಕೇಂದ್ರ ಸರ್ಕಾರ (Central Government) ನಿರ್ಧಾರ ಮಾಡಿದೆ. ವಿತ್ತೀಯ ಕೊರತೆ ನೀಗಿಸಲು ಮಾರಾಟಕ್ಕೆ ಕೇಂದ್ರ ಈ ಚಿಂತನೆ ನಡೆಸಿದೆ. ಮೂಲಸೌಕರ್ಯ ಯೋಜನೆಗಳ ಮಾರಾಟಕ್ಕೆ ಕೇಂದ್ರ ನಿರ್ಧಾರ ಮಾಡಿದ್ದು ಈ ಬಗ್ಗೆ ಸೋಮವಾರ (ಆಗಸ್ಟ್ 23) ದೆಹಲಿಯಲ್ಲಿ ಕೇಂದ್ರದ ಹಣಕಾಸು ಇಲಾಖೆ (Finance Ministry) ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿಕೆ ನೀಡಿದ್ದಾರೆ.

ಈ ಆಸ್ತಿಯ ಮಾಲೀಕತ್ವ ಸರ್ಕಾರದ ಬಳಿಯೇ ಇರುತ್ತದೆ. ಅವಧಿ ಮುಗಿದ ಬಳಿಕ ಸರ್ಕಾರಕ್ಕೆ ಆಸ್ತಿ ಹಿಂತಿರುಗಿಸಬೇಕು. ಬಿಡ್ಡಿಂಗ್ ಮೂಲಕ ಆಸ್ತಿಗಳ ಮಾರಾಟ ಮಾಡಲಾಗುವುದು. ಇದು ಆಪರೇಟ್ ಮೇಂಟೇನ್​​ ಅಂಡ್ ಟ್ರಾನ್ಸ್​​ಫರ್ ಸ್ಕೀಮ್ ಎಂದು ಯೋಜನೆಯ ಬಗ್ಗೆ ಅಮಿತಾಭ್ ಕಾಂತ್ ಮಾಹಿತಿ ನೀಡಿ್ದ್ದಾರೆ. 2022- 2025 ರ ಅವಧಿಯಲ್ಲಿ ಆಸ್ತಿಗಳ ಮಾರಾಟ ಮಾಡಲಾಗುವ ಬಗ್ಗೆ ತಿಳಿಸಿದ್ದಾರೆ.

ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್​ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಿಡುಗಡೆ ಮಾಡಿದ್ದಾರೆ. ಬಳಿಕ, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮಾತನಾಡಿದ್ದಾರೆ. ಇದರಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಲಾಗಿದೆ. ಆಸ್ತಿ ನಗದೀಕರಣದ ಮೂಲಕ ಆಸ್ತಿ ಮಾರಾಟ ಮಾಡುತ್ತಿಲ್ಲ. ಅಂತಿಮವಾಗಿ ಆಸ್ತಿಯನ್ನು ಸರ್ಕಾರಕ್ಕೆ ವಾಪಸ್ ನೀಡಬೇಕು. ರಾಜ್ಯಗಳು ಕೂಡ ಇದರಲ್ಲಿ ಭಾಗವಹಿಸುತ್ತವೆ ಎಂದು ಅವರು ಹೇಳಿದ್ದಾರೆ.

ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್ ಬಿಡುಗಡೆ ಮಾಡಲಾಗಿದೆ. ಇದರ ಮೂಲಕ ಸರ್ಕಾರಿ- ಖಾಸಗಿ ವಲಯಗಳು ಭಾಗಿ ಆಗಬಹುದು. ಖಾಸಗಿ ವಲಯ ಭಾಗಿ ಹಿನ್ನೆಲೆ ಹಣವನ್ನು ಹೊಸ ಮೂಲಸೌಕರ್ಯಕ್ಕೆ ಹೂಡಿಕೆ ಮಾಡಲಾಗುತ್ತದೆ. ಆಸ್ತಿಯನ್ನು ಮಾರಾಟ ಮಾಡುತ್ತಿಲ್ಲ. ಆಸ್ತಿಯ ಮಾಲೀಕತ್ವ ಸರ್ಕಾರದ ಬಳಿಯೇ ಇರುತ್ತದೆ. ಕಡ್ಡಾಯವಾಗಿ ಆಸ್ತಿಯನ್ನು ಸರ್ಕಾರಕ್ಕೆ ವಾಪಸ್ ನೀಡಬೇಕು. ಬಳಸಿಕೊಳ್ಳದಿರುವ ಆಸ್ತಿ ನಗದೀಕರಣದ ಮೂಲಕ ಬಳಕೆ ಮಾಡುತ್ತೇವೆ. ರಾಜ್ಯ ಸರ್ಕಾರಗಳಿಗೆ 12 ಸಾವಿರ ಕೋಟಿ ರೂಪಾಯಿ ಬಡ್ಡಿ ರಹಿತವಾಗಿ ನೀಡಿದ್ದೇವೆ. 50 ವರ್ಷಗಳಿಗೆ ಹಣವನ್ನು ಬಡ್ಡಿ ರಹಿತವಾಗಿ ನೀಡಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿಕೆ ನೀಡಿದ್ದಾರೆ.

ಕೇಂದ್ರದ 11 ಇಲಾಖೆಗಳ ಮೂಲಸೌಕರ್ಯ ಯೋಜನೆ ಮಾರಾಟಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿತ್ತು. ರಸ್ತೆ, ಹೆದ್ದಾರಿ ಮಾರಾಟದಿಂದ 1.6 ಲಕ್ಷ ಕೋಟಿ ರೂಪಾಯಿ, ರೈಲ್ವೆ ಆಸ್ತಿ ಮಾರಾಟದಿಂದ 1.5 ಲಕ್ಷ ಕೋಟಿ ರೂಪಾಯಿ, ಇಂಧನ ಕ್ಷೇತ್ರದ ಆಸ್ತಿ ಮಾರಾಟದಿಂದ 1 ಲಕ್ಷ ಕೋಟಿ ರೂಪಾಯಿ ಹಾಗೂ ಗ್ಯಾಸ್ ಪೈಪ್ ಲೈನ್ ಮಾರಾಟದಿಂದ 590 ಬಿಲಿಯನ್ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಮಾಹಿತಿ ಹೇಳಲಾಗಿತ್ತು.

ಇದನ್ನೂ ಓದಿ: Petrol-Diesel price: ಮನಮೋಹನ್​ ಸಿಂಗ್​ ಸರ್ಕಾರ ತಪ್ಪಿಗೆ ಪೆಟ್ರೋಲ್​ಗೆ ನಾವು ಬೆಲೆ ತೆರುತ್ತಿದ್ದೇವೆ ಎಂದ ನಿರ್ಮಲಾ

ಹಣಕಾಸು ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಸಾಮಾನ್ಯ ವಿಮಾ ಮಸೂದೆಗೆ ರಾಜ್ಯಸಭೆ ಅನುಮೋದನೆ

Published On - 5:28 pm, Mon, 23 August 21

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ