ಹಣಕಾಸು ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಸಾಮಾನ್ಯ ವಿಮಾ ಮಸೂದೆಗೆ ರಾಜ್ಯಸಭೆ ಅನುಮೋದನೆ
General Insurance Bill: ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಸರ್ಕಾರ ತನ್ನ ಬಂಡವಾಳವನ್ನು ಗಣನೀಯ ಪ್ರಮಾಣದಲ್ಲಿ ಹಿಂಪಡೆಯಲು ಅವಕಾಶ ಸಿಗುತ್ತದೆ.
ದೆಹಲಿ: ಸಾಮಾನ್ಯ ವಿಮಾ ತಿದ್ದುಪಡಿ ಮಸೂದೆಗೆ (General Insurance Bill) ರಾಜ್ಯಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯಿತು. ಒಬಿಸಿ ಮಸೂದೆಗೆ ಅಂಗೀಕಾರ ದೊರೆತ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಸೂದೆಯನ್ನು ಮಂಡಿಸುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು.
ಮಸೂದೆ ಮೇಲೆ ಗದ್ದಲದ ಮಧ್ಯೆಯೇ ಹಣಕಾಸು ಸಚಿವರು ಮಾತನಾಡಲು ಆರಂಭಿಸಿದರು. ಸದನದ ಬಾವಿಗಿಳಿದ ವಿಪಕ್ಷದ ಸದಸ್ಯರು ಏರುದನಿಯಲ್ಲಿ ವಿರೋಧ ವ್ಯಕ್ತಪಡಿಸಿದರು. ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಸಾಮಾನ್ಯ ವಿಮಾ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಯಿತು.
ಸರ್ಕಾರವು ಸಾಮಾನ್ಯ ವಿಮಾ ಮಸೂದೆಗೆ ತರಾತುರಿಯಲ್ಲಿ ಅಂಗೀಕಾರ ಪಡೆದುಕೊಳ್ಳಲು ಯತ್ನಿಸುತ್ತಿದೆ. ಪ್ರತಿಪಕ್ಷಗಳು ಲಾಲಿಪಾಪ್ ಚೀಪುತ್ತಾ ಕುಳಿತರಲು ಆಗುವುದಿಲ್ಲ. ಸದನದಲ್ಲಿ ಪಾಲನೆಯಾಗಬೇಕಾದ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ಉಲ್ಲಂಘಿಸುತ್ತಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೀತಿಯಲ್ಲಿಯೇ ಸಾಮಾನ್ಯ ವಿಮಾ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ ಬ್ರಯನ್ ಸದನ ಪ್ರವೇಶಿಸುವ ಮೊದಲು ಹೇಳಿಕೆ ನೀಡಿದ್ದರು.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸಾಮಾನ್ಯ ವಿಮಾ ಮಸೂದೆಗೆ ಅಂಗೀಕಾರ ದೊರೆತಿರುವುದರಿಂದ ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಸರ್ಕಾರ ತನ್ನ ಬಂಡವಾಳವನ್ನು ಗಣನೀಯ ಪ್ರಮಾಣದಲ್ಲಿ ಹಿಂಪಡೆಯಲು ಅವಕಾಶ ಸಿಗುತ್ತದೆ.
The General Insurance Business (Nationalisation ) Amendment Bill, 2021 passed in Rajya Sabha pic.twitter.com/fmHrxGiUrc
— ANI (@ANI) August 11, 2021
(Rajyasabha Passes General Insurance Bill Proposed by Nirmala Sitharaman)
ಇದನ್ನೂ ಓದಿ: ವಿಮೆ ವಲಯದಲ್ಲಿ ಶೇ 74ರ ತನಕ ಎಫ್ಡಿಐ ಹೂಡಿಕೆಗೆ ಅವಕಾಶ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ
ಇದನ್ನೂ ಓದಿ: Health Insurance Claim: ಆರೋಗ್ಯ ವಿಮೆ ರೀಎಂಬರ್ಸ್ಮೆಂಟ್ ಕ್ಲೇಮ್ ಅರ್ಜಿ ಸಲ್ಲಿಸುವ ಹಂತಹಂತವಾದ ಮಾಹಿತಿ ಇಲ್ಲಿದೆ
Published On - 6:44 pm, Wed, 11 August 21