ಬಿಲ್ವಾರಾದ ಕಲ್ಲುಗಣಿಯಲ್ಲಿ ಕುಸಿತ; ಅವಶೇಷಗಳಡಿ ಏಳು ಮಂದಿ ನಾಪತ್ತೆ
ಈ ಕಲ್ಲು ಗಣಿಗಾರಿಕೆ ಕಾನೂನು ಬದ್ಧವಾಗಿ ನಡೆಯುತ್ತಿರಲಿಲ್ಲ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಭಿಲ್ವಾರಾ: ರಾಜ್ಯಸ್ಥಾನದ ಬಿಲ್ವಾರಾ ಜಿಲ್ಲೆಯಲ್ಲಿ ಕಲ್ಲುಗಣಿಯೊಂದರಲ್ಲಿ ಕುಸಿತ ಉಂಟಾಗಿ ಮೂವರು ಮಹಿಳೆಯರು ಸೇರಿ, ಏಳು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಈ ದುರ್ಘಟನೆ ಇಂದು ನಡೆದಿದೆ. ಅನ್ಸಿದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವಲಚುಡಾ ಗ್ರಾಮದಲ್ಲಿರುವ ಸ್ಫಟಿಕ ಕಲ್ಲುಗಳ ಗಣಿಗಾರಿಕೆ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಅದರಲ್ಲೂ ಈ ಕಲ್ಲು ಗಣಿಗಾರಿಕೆ ಕಾನೂನು ಬದ್ಧವಾಗಿ ನಡೆಯುತ್ತಿರಲಿಲ್ಲ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಅವಶೇಷಗಳಡಿಯಿಂದ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.
ಕಿನೌರ್ನಲ್ಲಿ ಭೂಕುಸಿತ ಹಿಮಾಚಲ ಪ್ರದೇಶದ ಕಿನೌರ್ನಲ್ಲಿ ಭೂಕುಸಿತ ಉಂಟಾಗಿದ್ದು, ಇಲ್ಲಿಯವರೆಗೆ ಒಟ್ಟು 10 ಶವಗಳು ಪತ್ತೆಯಾಗಿವೆ. 14 ಮಂದಿಯನ್ನು ರಕ್ಷಿಸಲಾಗಿದೆ ಎಂದು ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ತಿಳಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಭೂಕುಸಿತ ಸಂಭವಿಸಿರುವ ಸ್ಥಳದಲ್ಲಿ ಹಲವು ವಾಹನಗಳು ಸಿಲುಕಿವೆ. 40 ಪ್ರಯಾಣಿಕರಿದ್ದ ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಸೇರಿದಂತೆ ಹಲವು ವಾಹನಗಳ ಅವಶೇಷಗಳಡಿ ಇದೆ ಎಂದ ಕಿನೌರ್ ಜಿಲ್ಲಾಧಿಕಾರಿ ಅದೀಬ್ ಹುಸೇನ್ ಸಾದಿಕ್ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕೆಲವು ಬಿಜೆಪಿ ಸಚಿವರಿಗೆ ಹೊಸ ಸಂಕಷ್ಟ; ಕ್ರಿಮಿನಲ್ ಕೇಸ್ ರದ್ದುಪಡಿಸಲು ಸಾಧ್ಯವಿಲ್ಲ ಎಂದ ಹೈಕೋರ್ಟ್
Published On - 7:40 pm, Wed, 11 August 21