‘ಡೆಲ್ಟಾ ರೂಪಾಂತರಿ ವೈರಾಣು ವಿರುದ್ಧ ಸ್ಪುಟ್ನಿಕ್ ವಿ ಲಸಿಕೆ ಶೇ.83ರಷ್ಟು ಪ್ರಭಾವಶಾಲಿ..‘
Sputnik V: ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಈ ಬಗ್ಗೆ ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರಿ ವಿರುದ್ಧ ಸ್ಪುಟ್ನಿಕ್ ವಿ ಶೇ.8ರಷ್ಟು ಪರಿಣಾಮಕಾರಿಯಾಗಿದೆ. ಹಾಗೇ, ತೀವ್ರ ಕೊವಿಡ್ 19 ಸೋಂಕಿನ ವಿರುದ್ಧ ಶೇ.95ರಷ್ಟು ಪ್ರಭಾವಶಾಲಿ ಎಂದು ಹೇಳಿದ್ದಾರೆ.
ಕೊವಿಡ್ 19 (Covid 19) ರೂಪಾಂತರಿ ವೈರಸ್ ಗಳಲ್ಲೇ ಡೆಲ್ಟಾ (Delta Variant) ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ಸ್ಪಷ್ಟಪಡಿಸಿದೆ. ಈ ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೂಡ ಸ್ಪುಟ್ನಿಕ್ ವಿ (Sputnik V) ಕೊವಿಡ್ 19 ಲಸಿಕೆ ಶೇ.83ರಷ್ಟು ಪ್ರಭಾವಶಾಲಿಯಾಗಿ ಹೋರಾಡಬಲ್ಲದು ಎಂದು ರಷ್ಯಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇವಲ ಡೆಲ್ಟಾ ಪ್ಲಸ್ ವಿರುದ್ಧವಷ್ಟೇ ಅಲ್ಲ, ಕೊವಿಡ್ 19ನ ಎಲ್ಲ ರೂಪಾಂತರ ವೈರಾಣುಗಳ ವಿರುದ್ಧವೂ ಸ್ಪುಟ್ನಿಕ್ ವಿ ಪರಿಣಾಮಕಾರಿ ಎಂದೂ ಇಲಾಖೆ ತಿಳಿಸಿದೆ.
ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಈ ಬಗ್ಗೆ ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರಿ ವಿರುದ್ಧ ಸ್ಪುಟ್ನಿಕ್ ವಿ ಶೇ.8ರಷ್ಟು ಪರಿಣಾಮಕಾರಿಯಾಗಿದೆ. ಹಾಗೇ, ತೀವ್ರ ಕೊವಿಡ್ 19 ಸೋಂಕಿನ ವಿರುದ್ಧ ಶೇ.95ರಷ್ಟು ಪ್ರಭಾವಶಾಲಿ ಎಂದು ಹೇಳಿದ್ದಾರೆ. ಸ್ಪುಟ್ನಿಕ್ ವಿ ಲಸಿಕೆ ಅಭಿವೃದ್ಧಿ ಪಡಿಸಿರುವ ರಷ್ಯಾದ ಗಮಾಲಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಮೈಕ್ರೋಬಯಾಲಜಿ ಸಂಶೋಧನಾ ಕೇಂದ್ರದ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್ಬರ್ಗ್ ಕೂಡ ಇದನ್ನೇ ಹೇಳಿದ್ದಾರೆ. ಸ್ಪುಟ್ನಿಕ್ ವಿ ಕೇವಲ ಡೆಲ್ಟಾ ವಿರುದ್ಧ ಮಾತ್ರವಲ್ಲದೆ, ಎಲ್ಲ ರೂಪಾಂತರಿ ವಿರುದ್ಧವೂ ಪ್ರಭಾವಶಾಲಿಯಾಗಿದೆ ಎಂದಿದ್ದಾರೆ.
ಭಾರತದಲ್ಲಿ ಅಭಿವೃದ್ಧಿ ಪಡಿಸಲಾದ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗೆ ಮೊದಲು ತುರ್ತು ಬಳಕೆಗೆ ಅನುಮೋದನೆ ನೀಡಲಾಯಿತು. ಹಾಗೇ, ಮೊಟ್ಟಮೊದಲು ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದ ಮೊದಲ ವಿದೇಶಿ ಲಸಿಕೆ ಈ ಸ್ಪುಟ್ನಿಕ್ ವಿ. ಇದೂ ಕೂಡ ಎರಡು ಡೋಸ್ಗಳ ಲಸಿಕೆಯೇ ಆಗಿದೆ. ಇನ್ನುಳಿದಂತೆ ಮಾಡರ್ನಾ ಕೊವಿಡ್ 19 ಲಸಿಕೆ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ.
ಇದನ್ನೂ ಓದಿ: TN Seetharam: ‘ಮತ್ತೆ ಮನ್ವಂತರ’ ಧಾರವಾಹಿಯ ಚಿತ್ರೀಕರಣ ಪ್ರಾರಂಭದ ದಿನಾಂಕ ತಿಳಿಸಿದ ನಿರ್ದೇಶಕ ಟಿ.ಎನ್.ಸೀತಾರಾಮ್