AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TN Seetharam: ‘ಮತ್ತೆ ಮನ್ವಂತರ’ ಧಾರವಾಹಿಯ ಚಿತ್ರೀಕರಣ ಪ್ರಾರಂಭದ ದಿನಾಂಕ ತಿಳಿಸಿದ ನಿರ್ದೇಶಕ ಟಿ.ಎನ್.ಸೀತಾರಾಮ್

ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಹೊಸ ಧಾರವಾಹಿ ‘ಮತ್ತೆ ಮನ್ವಂತರ’ದ ಚಿತ್ರೀಕರಣಕ್ಕೆ ದಿನ ನಿಗದಿಯಾಗಿದೆ. ಈ ಕುರಿತು ಅವರು ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

TN Seetharam: ‘ಮತ್ತೆ ಮನ್ವಂತರ’ ಧಾರವಾಹಿಯ ಚಿತ್ರೀಕರಣ ಪ್ರಾರಂಭದ ದಿನಾಂಕ ತಿಳಿಸಿದ ನಿರ್ದೇಶಕ ಟಿ.ಎನ್.ಸೀತಾರಾಮ್
‘ಮತ್ತೆ ಮನ್ವಂತರದ’ದ ನಾಯಕಿ ಮೇಧಾ- ನಿರ್ದೇಶಕ ಟಿ.ಎನ್​.ಸೀತಾರಾಮ್​
TV9 Web
| Edited By: |

Updated on:Aug 11, 2021 | 6:57 PM

Share

ಕನ್ನಡ ಕಿರುತೆರೆಯ ಇತಿಹಾಸದಲ್ಲಿ ತಮ್ಮ ವಿಭಿನ್ನ ವಸ್ತು ಶೈಲಿಯ ಧಾರವಾಹಿಗಳಿಂದ ಮನೆಮಾತಾದವರು ಟಿ.ಎನ್.ಸೀತಾರಾಮ್. ಅವರ ನಿರ್ದೇಶನದ ಮನ್ವಂತರ, ಮುಕ್ತ, ಮುಕ್ತಮುಕ್ತ, ಮಾಯಾಮೃಗ ಮೊದಲಾದ ಧಾರವಾಹಿಗಳು ಅಪಾರ ಜನಮೆಚ್ಚುಗೆ ಗಳಿಸಿದ್ದವು. ಅವರು ಕೊನೆಯದಾಗಿ ನಿರ್ದೇಶಿಸಿದ ಧಾರವಾಹಿ ‘ಮಗಳು ಜಾನಕಿ’. ಗಾನವಿ ಲಕ್ಷ್ಮಣ್, ರಾಕೇಶ್ ಮಯ್ಯ ಮೊದಲಾದ ಉದಯೋನ್ಮುಖ ಕಲಾವಿದರನ್ನು ಈ ಧಾರವಾಹಿಯ ಮುಖಾಂತರ ಪರಿಚಯಿಸಿದ ಸೀತಾರಾಮ್, ಅನಿವಾರ್ಯ ಕಾರಣಗಳಿಂದ ‘ಮಗಳು ಜಾನಕಿ’ಯನ್ನು ನಿಲ್ಲಿಸಿದ್ದರು. ಆ ಸಂದರ್ಭದಲ್ಲೇ ಹೊಸ ಧಾರವಾಹಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂಬ ಸೂಚನೆಯನ್ನೂ ಅವರು ನೀಡಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.

ಇತ್ತೀಚೆಗೆ ಟಿ.ಎನ್.ಸೀತಾರಾಮ್ ತಮ್ಮ ಹೊಸ ಧಾರವಾಹಿಗೆ ಶೀರ್ಷಿಕೆ ಸೂಚಿಸಿ ಎಂದು ಫೇಸ್​ಬುಕ್​ನಲ್ಲಿ ಕೇಳಿಕೊಂಡಿದ್ದಾಗ ಅವರ ಅಪಾರ ಅಭಿಮಾನಿ ಬಳಗ ತಮ್ಮಿಚ್ಛೆಯ ಹೆಸರನ್ನು ಸೂಚಿಸಿದ್ದರು. ಹೆಸರನ್ನು ಅಂತಿಮಗೊಳಿಸಿದ್ದ ಅವರು, ಅದಕ್ಕೆ ‘ಮತ್ತೆ ಮನ್ವಂತರ’ ಎಂದು ಹೆಸರಿಟ್ಟಿದ್ದರು. ಅವರ ಈ ಹಿಂದಿನ ಧಾರವಾಹಿಗಳನ್ನು ನಿರ್ಮಾಣ ಮಾಡಿದ್ದ ಭೂಮಿಕಾ ಸಂಸ್ಥೆ ಇದನ್ನು ನಿರ್ಮಿಸಲಿದೆ.

‘ಮತ್ತೆ ಮನ್ವಂತರ’ದ ಚಿತ್ರೀಕರಣಕ್ಕೆ ಮುಹೂರ್ತ ನಿಗದಿಯಾಗಿದ್ದು, ನಾಳೆ ಅಂದರೆ ಆಗಸ್ಟ್ 12ರ ಗುರುವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಸೀತಾರಾಮ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೊಸ ಪಯಣಕ್ಕೆ ಅಭಿಮಾನಿಗಳ ಪ್ರೀತಿ ಮತ್ತು ಹಾರೈಕೆಯನ್ನು ಅವರು ಕೋರಿದ್ದಾರೆ.

ಫೇಸ್​ಬುಕ್​ನಲ್ಲಿ ಟಿ.ಎನ್.ಸೀತಾರಾಮ್ ಹಂಚಿಕೊಂಡಿರುವ ಪೋಸ್ಟ್:

‘ಮತ್ತೆ ಮನ್ವಂತರ’ ಧಾರವಾಹಿಯಲ್ಲಿ ಮೇಧಾ ವಿದ್ಯಾಭೂಷಣ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಂಗೀತದ ಹಿನ್ನೆಲೆಯುಳ್ಳ ಅವರು, ಖ್ಯಾತ ಗಾಯಕ ವಿದ್ಯಾಭೂಷಣ ಅವರ ಪುತ್ರಿ. ‘ಮತ್ತೆ ಮನ್ವಂತರ’ವು ಸವಾಲುಗಳನ್ನು ಎದುರಿಸಿ, ಗುರಿಯತ್ತ ಮುನ್ನುಗ್ಗುವ ಯುವತಿಯ ಕತೆ ಎಂದು ಈ ಹಿಂದೆ ಮೇಧಾ ಟಿವಿ9ನೊಂದಿಗೆ ಮಾತನಾಡಿದಾಗ ಮಾಹಿತಿ ಹಂಚಿಕೊಂಡಿದ್ದರು. ಈ ಧಾರವಾಹಿಯೂ ಟಿ.ಎನ್​.ಎಸ್. ಅವರ ಈ ಹಿಂದಿನ ಧಾರವಾಹಿಗಳಂತೆ ಜನರಿಗೆ ಪ್ರಿಯವಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

‘ಮುಕ್ತ ಮುಕ್ತ’ ನೋಡಿಕೊಂಡು ಬೆಳೆದ ಹುಡುಗಿ ಈಗ ‘ಮತ್ತೆ ಮನ್ವಂತರ’ದ ನಾಯಕಿ! ಟಿಎನ್ಎಸ್​​​ ಹುಡುಕಿದ ಹೊಸ ಪ್ರತಿಭೆ ಮೇಧಾ

ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

(TN Seetharam directorial new serial Matte Manvantara starts shooting from August 12th says TNS)

Published On - 6:55 pm, Wed, 11 August 21

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು