ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

ಸೀತಾರಾಮ್​ ನಿರ್ದೇಶನದ ಹೊಸ ಧಾರಾವಾಹಿ ಶೀಘ್ರದಲ್ಲೇ ಸೆಟ್ಟೇರಲಿದೆ. ಇದಕ್ಕೆ 'ಮತ್ತೆ ಮನ್ವಂತರ' ಶೀರ್ಷಿಕೆ ಅಂತಿಮವಾಗಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ಮೇಧಾ ವಿದ್ಯಾಭೂಷಣ​ ನಿರ್ವಹಿಸುತ್ತಿದ್ದಾರೆ.

ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!
‘ಮತ್ತೆ ಮನ್ವಂತರದ’ದ ನಾಯಕಿ ಮೇಧಾ- ನಿರ್ದೇಶಕ ಟಿ.ಎನ್​.ಸೀತಾರಾಮ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on:Apr 12, 2021 | 8:55 AM

ಖ್ಯಾತ ನಿರ್ದೇಶಕ ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಈ ಧಾರಾವಾಹಿಗೆ ಟೈಟಲ್​ ಇಡುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಈಗ ಸಿನಿಮಾಗೆ ಟೈಟಲ್​ ಅಂತಿಮವಾಗಿದೆ. ‘ಮತ್ತೆ ಮನ್ವಂತರ’ ಎನ್ನುವ ಟೈಟಲ್​ ಮೂಲಕ ಟಿ.ಎನ್​ ಸೀತಾರಾಮ್​ ಮತ್ತೆ ಕಿರುತೆರೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

1990ರ ದಶಕದಿಂದಲೂ ಕಿರುತೆರೆಯಲ್ಲಿ ಸೀತಾರಾಮ್​ ಸಕ್ರಿಯರಾಗಿದ್ದಾರೆ. ಮುಕ್ತ, ಮಾಯಾಮೃಗ ಮುಂತಾದ ಸೀರಿಯಲ್​ಗಳು ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟವು. ಇತ್ತೀಚೆಗೆ ಅವರು ನಿರ್ದೇಶಿಸಿದ ‘ಮಗಳು ಜಾನಕಿ’ ಸೀರಿಯಲ್​ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆ ಧಾರಾವಾಹಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತುಹೋಯಿತು. ಅದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಈಗ ಸೀತಾರಾಮ್​ ಗುಡ್​ ನ್ಯೂಸ್​ ನೀಡಿದ್ದಾರೆ.

ಸೀತಾರಾಮ್​ ನಿರ್ದೇಶನದ ಹೊಸ ಧಾರಾವಾಹಿ ಶೀಘ್ರದಲ್ಲೇ ಸೆಟ್ಟೇರಲಿದೆ. ಇದಕ್ಕೆ ‘ಮತ್ತೆ ಮನ್ವಂತರ’ ಶೀರ್ಷಿಕೆ ಅಂತಿಮವಾಗಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ಮೇಧಾ ವಿದ್ಯಾಭೂಷಣ​ ನಿರ್ವಹಿಸುತ್ತಿದ್ದಾರೆ.

ಮೇಧಾ ವಿದ್ಯಾಭೂಷಣ್​

ಮೇಧಾ ವಿದ್ಯಾಭೂಷಣ​ ಖ್ಯಾತ ಗಾಯಕ ವಿದ್ಯಾಭೂಷಣ​ ಅವರ ಮಗಳು. ಮೇಧಾ ಕೂಡ ಗಾಯಕಿ. ಪಿ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್​ ಓದುತ್ತಿದ್ದಾರೆ. ಈಗ ಈ ಧಾರಾವಾಹಿ ಮೂಲಕ ಮೇಧಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮೇಧಾ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ಅವರ ಪಾತ್ರ ಹೇಗಿರಲಿದೆ ಎನ್ನುವ ಬಗ್ಗೆ ಈಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಲಾಕ್​ಡೌನ್​ ಪರಿಣಾಮವಾಗಿ ಮಗಳು ಜಾನಕಿ ಧಾರಾವಾಹಿ ಪ್ರಸಾರ ನಿಲ್ಲಿಸಬೇಕಾಯಿತು. ಅದು ಪ್ರೇಕ್ಷಕರಿಗೆ ಸಖತ್​ ಬೇಸರ ತರಿಸಿತ್ತು. ಮತ್ತೆ ಆ ಧಾರಾವಾಹಿಯನ್ನು ಶುರು ಮಾಡಿ ಎಂಬ ಕೋರಿಕೆ ಈಗಲೂ ಬರುತ್ತಲೇ ಇದೆ. ಆದರೆ ಆ ಕೋರಿಕೆ ಈಡೇರುವುದು ಅನುಮಾನ. ಅದರ ಬದಲು ಹೊಸ ಧಾರವಾಹಿಯನ್ನೇ ಸೀತಾರಾಮ್​ ನಿರ್ದೇಶಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಪಾತ್ರವರ್ಗ, ಪ್ರಸಾರ ದಿನಾಂಕದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಒದಿ: ಮಗಳು ಜಾನಕಿ ಬಳಿಕ ಟಿಎನ್​​ ಸೀತಾರಾಮ್​ ಹೊಸ ಸೀರಿಯಲ್​! ಟೈಟಲ್​ ಇಡುವ ಅವಕಾಶ ಪ್ರೇಕ್ಷಕರಿಗೆ

Published On - 8:35 pm, Sun, 11 April 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು