‘ಧುರಂಧರ್ 2’ ಬಿಡುಗಡೆಗೂ ಮುನ್ನವೇ ವಿಮರ್ಶೆ ತಿಳಿಸಿದ ನಟಿ ಯಾಮಿ ಗೌತಮ್
‘ಟಾಕ್ಸಿಕ್’ ಎದುರು ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ರಣವೀರ್ ಸಿಂಗ್, ಸಂಜಯ್ ದತ್ ಮುಂತಾದವರು ನಟಿಸಿದ ಈ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ದೇಶಕ ಆದಿತ್ಯ ಧಾರ್ ಪತ್ನಿ ಯಾಮಿ ಗೌತಮ್ ಅವರು ವಿಮರ್ಶೆ ತಿಳಿಸಿದ್ದಾರೆ.

ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ಸಿನಿಮಾಗೆ ಅಧಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಪ್ರೇಕ್ಷಕರಿಗೆ ಇದೆ. ಈ ಸಿನಿಮಾದ ಬಿಡುಗಡೆಗೂ ಮುನ್ನವೇ ನಟಿ ಯಾಮಿ ಗೌತಮ್ ಅವರು ವಿಮರ್ಶೆ (Dhurandhar 2 First Review) ತಿಳಿಸಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರ ಪತ್ನಿ ಆಗಿರುವ ಯಾಮಿ ಗೌತಮ್ (Yami Gautam) ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಧುರಂಧರ್ 2’ ಸಿನಿಮಾ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
‘ನಾನು ಈಗಾಗಲೇ ಧುರಂಧರ್ 2 ಸಿನಿಮಾವನ್ನು ನೋಡಿದ್ದೇನೆ. ಅದು ಅದ್ಭುತಗಿಂತಲೂ ಹೆಚ್ಚಾಗಿದೆ. ನೋಡಿದ ಬಳಿಕ ನಾನು ಎಮೋಷನಲ್ ಆದೆ. ಅಂದು ನಾನು ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು. ಹಾಗಾಗಿ ಆದಿತ್ಯ ಧಾರ್ ಅವರಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಅಂದು ನಾನು ಒಂದು ಸ್ಕ್ರಿಪ್ಟ್ ಓದಬೇಕಿತ್ತು. ಅದು ಕೂಡ ಆಗಲಿಲ್ಲ. ನಾನು ಏನನ್ನೋ ನೋಡಬೇಕಿತ್ತು. ಅದು ಸಹ ನನ್ನಿಂದ ಸಾಧ್ಯವಾಗಲಿಲ್ಲ’ ಎಂದು ಸಿನಿಮಾ ನೋಡಿದ ಬಳಿಕ ಪರಿಣಾಮ ಹೇಗಿತ್ತು ಎಂಬುದನ್ನು ಯಾಮಿ ಗೌತಮ್ ಅವರು ವಿವರಿಸಿದ್ದಾರೆ.
‘ಸಂದರವಾದ ಸೂರ್ಯಾಸ್ತ ನೋಡುತ್ತಾ ನಾನು ಕುಳಿತೆ. ವಿಮಾನ ಇಳಿದ ಬಳಿಕ ಆದಿತ್ಯ ಅವರಿಗೆ ಏನು ಹೇಳಲಿ ಅಂತ ನಾನು ಯೋಚಸುತ್ತಿದೆ. ಸಿನಿಮಾ ಬಗ್ಗೆ ನನ್ನ ಭಾವನೆ ಏನಿದೆ ಎಂಬುದನ್ನು ಪದಗಳಲ್ಲಿ ಹೇಳಬೇಕಿತ್ತು. ಆದಿತ್ಯ ಅವರು ಈ ದೇಶವನ್ನು ಮತ್ತು ಪ್ರೇಕ್ಷಕರನ್ನು ಪ್ರೀತಿಸುತ್ತಾರೆ. ಈ ಸಿನಿಮಾ ಮಾಡಲು ಅವರು ತುಂಬಾ ಕಷ್ಪಪಟ್ಟಿದ್ದಾರೆ. ಪ್ರೇಕ್ಷಕರು ಎಂದೂ ಮರೆಯಲಾಗದ ಅನುಭವವನ್ನು ಧುರಂಧರ್ 2 ಸಿನಿಮಾ ನೀಡುತ್ತದೆ’ ಎಂದಿದ್ದಾರೆ ಯಾಮಿ ಗೌತಮ್.
‘ಪ್ರತಿಯೊಬ್ಬ ಭಾರತೀಯನೂ ಹೆಮ್ಮಪಡುವಂತಹ ಸಿನಿಮಾ ಧುರಂಧರ್ ಆಗಲಿದೆ ಅಂತ ನಾನು ಮೊದಲೇ ಹೇಳಿದ್ದೆ. ಆ ನಂಬಿಕೆ ನನಗೆ ಯಾವಾಗಲೂ ಇತ್ತು. ಮೊದಲು ನಾನು ಈ ಸಿನಿಮಾದ ಸ್ಕ್ರಿಪ್ಟ್ ಓದಿದಾಗ ನಾನು ಆರ್ಟಿಕಲ್ 370 ಸಿನಿಮಾದ ಶೂಟಿಂಗ್ನಲ್ಲಿದೆ. ಅದು ಕೇವಲ 40 ಪುಟ ಇತ್ತು. ಆದರೆ ಓದಿದ ಬಳಿಕ ನನಗೆ ಕಣ್ಣೀರು ಬಂದಿತ್ತು’ ಎಂದು ಯಾಮಿ ಗೌತಮ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ನೋಡಲು ದುಬೈನಿಂದ ಭಾರತಕ್ಕೆ ಬರಲಿರುವ ಪ್ರೇಕ್ಷಕರು
‘ಧುರಂಧರ್ 2’ ಸಿನಿಮಾದಲ್ಲಿ ಯಾಮಿ ಗೌತಮ್ ಕೂಡ ಅತಿಥಿ ಪಾತ್ರ ಮಾಡಿದ್ದಾರೆ ಎಂಬ ಅನುಮಾನ ಇದೆ. ಆ ಬಗ್ಗೆ ಚಿತ್ರತಂಡದವರು ಮೌನ ಮುರಿದಿಲ್ಲ. ಯಾಮಿ ಗೌತಮ್ ಕೂಡ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ‘ನಿಮ್ಮೆಲ್ಲರನ್ನೂ ಅಲ್ಲಿ ಭೇಟಿ ಆಗುತ್ತೇನೆ’ ಎಂದು ಹೇಳುವ ಮೂಲಕ ಇನ್ನಷ್ಟು ಕುತೂಹಲ ಹುಟ್ಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




